Advertisement

ಸಮಾಜದ ಒಳಿತಿಗಾಗಿಯೇ ಜನ್ಮ ತಾಳಿದ ಶ್ರೀಕೃಷ್ಣ

11:32 AM Aug 15, 2017 | |

ಎಚ್‌.ಡಿ.ಕೋಟೆ: ಭಾರತ ಅಪಾರವಾದ ಸಂಸ್ಕೃತಿಯನ್ನು ಒಳಗೊಂಡಿರುವ ದೇಶವಾಗಿದ್ದು, ರಾಮಾಯಣ ಮತ್ತು ಮಹಾ ಭಾರತದಂತಹ ಮಹಾ ಕಾವ್ಯಗಳಲ್ಲೇ ಉಲ್ಲೇಖವಿದೆ. ಅದರಲ್ಲೂ ಮಹಾ ಭಾರತದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಶ್ರೀಕೃಷ್ಣ ಸಮಾಜದ ಒಳಿತಿಗಾಗಿಯೇ ಜನ್ಮ ತಾಳಿ ದುಷ್ಟರನ್ನು ಶಿಕ್ಷಿಸಲೆಂದೇ ಅನೇಕ ಅವತಾರಗಳನ್ನು ಕಾಣಬೇಕಾಯಿತು ಎಂದು ತಹಶೀಲ್ದಾರ್‌ ಎಂ.ನಂಜುಂಡಯ್ಯ ಹೇಳಿದರು.

Advertisement

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜಯಂತಿ ಆಚರಣಾ ಸಮಾರಂಭದಲ್ಲಿ ಮಾತನಾಡಿ, ಶ್ರೀಕೃಷ್ಣರ ಬಾಲಲೀಲೆ, ಯೌವ್ವನದ ಕಥೆಗಳನ್ನು ಹಾಗೂ ಸಂಪೂರ್ಣ ಮಹಾಭಾರತದಲ್ಲಿ ನಿರ್ವಹಿಸಿದ ಪಾತ್ರ ಎಲ್ಲವನ್ನು ನಾವು ಶಾಲಾ ದಿನಗಳಲ್ಲೇ ಓದಿದ್ದೇವೆ. ಅಂಥ ಮಹಾಪುರುಷರ ಆದರ್ಶ ಪಾಲಿಸೋಣ ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಸಿ.ನರಸಿಂಹಮೂರ್ತಿ ಮಾತನಾಡಿ, ಶ್ರೀಕೃಷ್ಣ  ಬಗ್ಗೆ ನಂಬಿಕೆ ಭಾವನಾತ್ಮಕ ಗೌರವವಿದೆ. ಆದರೆ ವಿದ್ಯಾರ್ಥಿಗಳಾದ ನೀವು ಮಹಾಭಾರತದ ಶ್ರೀಕೃಷ್ಣರಾಗುವ ಬದಲು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಬಾಬಾ ಸಾಹೇಬರ ಪರಿಕಲ್ಪನೆಯಲ್ಲಿ ಓದಿ ವಿದ್ಯಾವಂತರಾಗಿ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಚಾರಿ, ಸದಸ್ಯರಾದ ನರಸಿಂಹಮೂರ್ತಿ, ಅನಿಲ್‌, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಂ.ಡಿ.ಮಂಚಯ್ಯ, ಮುಖಂಡರಾದ ಜೆ.ಪಿ.ಲೋಕೇಶ್‌, ರೇಷ್ಮೆ ಇಲಾಖೆ ಕೇಶವಮೂರ್ತಿ, ಬಿಇಒ ಸುಂದರ್‌, ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ, ಶಿಕ್ಷಣ ಇಲಾಖೆಯ ಭೀಮಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next