Advertisement
ಸರಕಾರಿ ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರ ಸಂಖ್ಯೆ ಕಡಿಮೆ ಇದ್ದು ಬಹುತೇಕ ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರಾಚಾರ್ಯರ ಹುದ್ದೆ ಪ್ರಭಾರವಾಗಿದೆ ಅನೇಕ ಕಡೆ ಪ್ರಭಾರ ಪ್ರಾಚಾರ್ಯರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ .
Related Articles
ಖಾಯಂ ಪ್ರಾಚಾರ್ಯರು ಇರದ ಪದವಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ಪ್ರಭಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಕನ್ನಡ,ಇಂಗ್ಲಿಷ್ ಹಾಗೂ ಕೋರ್ ವಿಷಯಗಳ ಪ್ರಾಧ್ಯಾಪಕರಿಗೆ ಅನ್ಯಾಯವಾಗದಂತೆ ನಿಯಮ ರೂಪಿಸುವುದು ಅಗತ್ಯವಿದೆ.ಪ್ರಭಾರ ವಹಿಸಿಕೊಂಡಿರುವ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಕನ್ನಡ,ವಿಜ್ಞಾನ ವಿಷಯಗಳ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚಿದೆ.ಆದ್ದರಿಂದ ಉನ್ನತ ಶಿಕ್ಷಣ ಇಲಾಖೆ ಎಲ್ಲಾ ವಿಷಯಗಳ ಕುರಿತು ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆ ಜತೆ ಶಿಕ್ಷಣ ತಜ್ಞರ ಮತ್ತು ನಿವೃತ್ತ ಪ್ರಾಧ್ಯಾಪಕರ ಅಭಿಪ್ರಾಯ ಪಡೆದು ನಿಯಮ ರೂಪಿಸುವುದು ಉತ್ತಮ.
Advertisement
ಸಾಧ್ಯತಾ ನಿಯಮಗಳು: ಪದವಿ ಕಾಲೇಜು ಪ್ರಭಾರಿ ಪ್ರಾಚಾರ್ಯರ ಹುದ್ದೆ ವಹಿಸಿಕೊಳ್ಳಲು ಪ್ರಾಧ್ಯಾಪಕರು ಕರ್ತವ್ಯಕ್ಕೆ ಹಾಜರಾದ ದಿನಾಂಕ ಪರಿಗಣಿಸುವುದು ವೈಜ್ಞಾನಿಕವಾಗಿ ಸರಿ ಇದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಪ್ರಾಧ್ಯಾಪಕರ ನೇಮಕಾತಿ ಪಟ್ಟಿ ಪ್ರಕಟಗೊಂಡ ದಿನಾಂಕವನ್ನು ಪರಿಹಣಿಸುವಂತೆ ಪ್ರಾಧ್ಯಾಪಕರ ಇನ್ನೊಂದು ಗುಂಪು ವಾದಿಸುತ್ತದೆ. ಸ್ಥಳೀಯ ಶಾಸಕರುಗಳ ಅಧ್ಯಕ್ಷತೆಯಲ್ಲಿ ರಚನೆಯಾದ ಕಾಲೇಜು ಅಭಿವೃದ್ಧಿ ಸಮಿತಿ ಸ್ಥಳೀಯವಾಗಿ ಅಂತಿಮವಾಗಿದ್ದು ಕಾಲೇಜು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಸಕರ ವಿವೇಚನೆಯಂತೆ ಪ್ರಾಧ್ಯಾಪಕರೊಬ್ಬರಿಗೆ ಪ್ರಭಾರ ವಹಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.ಇದನ್ನು ಟೀಕಿಸಿ ಶಾಸಕರು ಕಾಲೇಜು ಶೈಕ್ಷಣಿಕ ಅಭಿವೃದ್ಧಿ ಮಾತ್ರ ಮಾಡಬೇಕು.ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರ ಆದೇಶದಂತೆ ಪ್ರಭಾರಿ ವಹಿಸುವಂತಾಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲಾ ಗೊಂದಲಗಳನ್ನು ದೂರ ಮಾಡಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಭಾರಿ ಪ್ರಾಚಾರ್ಯರ ಹುದ್ದೆ ವಹಿಸಿಕೊಳ್ಳುವ ಸಂಬಂಧಪಟ್ಟ ಸೂಕ್ತ ನಿರ್ದೇಶನ ನೀಡುವ ಆದೇಶ ಹೊರಡಿಸಬೇಕಿದೆ.
ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರ ಕೊರತೆ ಇದ್ದು ಆಯಾ ಕಾಲೇಜಿನ ಪ್ರಾಧ್ಯಾಪಕರೇ ಪ್ರಭಾರಿ ವಹಿಸಿಕೊಂಡು ಆಡಳಿತ ನಡೆಸುವ ಸಂಪ್ರದಾಯವಿದ್ದು ಪ್ರಭಾರಿ ವಹಿಸಿಕೊಳ್ಳುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಉನ್ನತ ಶಿಕ್ಷಣ ಇಲಾಖೆಯಲ್ಲಿ ಸ್ಪಷ್ಟತೆ ಇಲ್ಲ.ಆದ್ದರಿಂದ ಪ್ರಭಾರಿ ವಹಿಸುವ ಸಂದರ್ಭದಲ್ಲಿ ಕಾಲೇಜುಗಳಲ್ಲಿ ಸ್ವಜನ ಪಕ್ಷಪಾತ,ಜಾತಿ,ಶಿಫಾರಸು ಕೆಲಸ ಮಾಡುತ್ತಿದ್ದು ಸಾಮಾಜಿಕ ನ್ಯಾಯ ಮತ್ತು ನೈಸರ್ಗಿಕ ನ್ಯಾಯದ ಪಾಲನೆಯಾಗುತ್ತಿಲ್ಲ.ಬಲಾಢ್ಯರು ಪ್ರಭಾವ ಬಳಸಿ ಪ್ರಭಾರಿ ಹುದ್ದೆ ಹಿಡಿಯುತ್ತಿರುವುದರಿಂದ ಭ್ರಷ್ಟಾಚಾರ ಸೇರಿ ಹಲವು ಸಮಸ್ಯೆಗಳಾಗುತ್ಯಿವೆ. ಇಲಾಖೆ ಸೂಕ್ತ ಸುತ್ತೋಲೆ ಹೊರಡಿಸಿ ದಶಕಗಳ ಸಮಸ್ಯೆ ಇತ್ಯಾರ್ಥಪಡಿಸಬೇಕಿದೆ.-ಅಮರೇಶ ಕಡಗದ್ ಮತ್ತು ಸರ್ವಜ್ಞ ಮೂರ್ತಿ
ಮುಖಂಡರು ವಿದ್ಯಾರ್ಥಿ ಸಂಘಟನೆಗಳು. -ಕೆ.ನಿಂಗಜ್ಜ