Advertisement
ಈ ಸಂದರ್ಭ ಉರುಳು ಸೇವೆ, ಕಂಚೀಲು ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರಕ್ಕೆ ಸಂಬಂಧಪಟ್ಟ ಗುತ್ತು ಮನೆತನ, ಗುತ್ತಿನಾರ್ ಮನೆತನ, ಮೊಕ್ತೇಸರರು, ಸಹಾಯಕ ಆಯುಕ್ತರ ಉಪಸ್ಥಿತಿಯಲ್ಲಿ ನೇಮದ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಡಿ. 18ರಂದು ರಾತ್ರಿ ಶ್ರೀ ಕಾಂತೇರಿ ಧೂಮಾವತಿ ದೈವದ ನೇಮ ನಡೆಯಲಿದೆ.
ಪ್ರಕೃತಿ ಸೌಂದರ್ಯದಿಂದ ಕಣ್ಮನ ಸೆಳೆಯುವ ಶಿಬರೂರಿನ ಶ್ರೀ ಕೊಡಮಣಿತ್ತಾಯ ದೈವಸ್ಥಾನವು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಾಚೀನ ದೈವಸ್ಥಾನಗಳಲ್ಲಿ ಒಂದಾಗಿದ್ದು ಸಾವಿರಾರು ಭಕ್ತರಿಗೆ ಮನಃ ಶಾಂತಿ ನೆಮ್ಮದಿ ನೀಡುವ ಕಾರಣಿಕ ಕ್ಷೇತ್ರವಾಗಿದೆ. ಮಣಿದವರಿಗೆ ಕೊಡುಗೈಯ ಶಿಬರೂರು ಕೊಡಮಣಿತ್ತಾಯ ಎಂಬ ಮಾತು ಪ್ರತೀತಿಯಲ್ಲಿದ್ದು ವಿಷವೈದ್ಯನೆಂಬ ಅಭಿದಾನವನ್ನು ಪಡೆದಿದೆ. ಮಂಗಳೂರಿನಿಂದ ಸುಮಾರು 25 ಕಿ.ಮೀ ದೂರ, ಕಟೀಲಿನಿಂದ 2 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಉತ್ತಮ ರಸ್ತೆ ಮಾರ್ಗವಿದ್ದು, ಬಸ್ಸಿನ ವ್ಯವಸ್ಥೆಯಿದೆ.
Related Articles
Advertisement