Advertisement

ಪುಣೆ ಶ್ರೀ ಗುರುದೇವ ಸೇವಾ ಬಳಗದಿಂದ ಶ್ರೀ ಹನುಮ ಜಯಂತಿ

02:26 PM Apr 23, 2019 | Vishnu Das |

ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ವಾರ್ಷಿಕ ಶ್ರೀ ಹನುಮ ಜಯಂತಿ ಆಚರಣೆಯು ಎ. 19ರಂದು ಪುಣೆಯ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಬಾಲೆವಾಡಿಯಲ್ಲಿರುವ ಮಾರ್ವಲ್‌ ಕಾಸ್ಕಾಡದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಹನುಮ ಜಯಂತಿಯ ವಿಶೇಷ ಆಚರಣೆಯ ಪ್ರಯುಕ್ತ ಪೂರ್ವಾಹ್ನ 11ರಿಂದ ಬಳಗದ ಭಜನಾ ಪ್ರಮುಖರಾದ ದಾಮೋದರ ಬಂಗೇರ ಅವರ ಮಾರ್ಗದರ್ಶನದಲ್ಲಿ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಶ್ರೀ ಗುರುದೇವ ಸೇವಾ ಬಳಗದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಆನಂತರ ಸೇರಿದ ಎÇÉಾ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಹನುಮಾನ್‌ ಚಾಲೀಸ್‌ನ್ನು ಸಾಮೂಹಿಕವಾಗಿ ಪಠಿಸಲಾಯಿತು.

ಶ್ರೀ ಸದಾನಂದ ಶೆಟ್ಟಿ ಅವರು ರಾಮ ಸ್ತೋತ್ರವನ್ನು ವಾಚಿಸಿದರು. ಮಧ್ಯಾಹ್ನ ಹನುಮ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಈ ಧಾರ್ಮಿಕ ಕಾರ್ಯಕ್ರಮದ ಸೇವಾಕರ್ತರಾದ ಸದಾನಂದ ಶೆಟ್ಟಿ ಮತ್ತು ಇಂದಿರಾ ಎಸ್‌. ಶೆಟ್ಟಿ ದಂಪತಿ, ವಿಕ್ರಂರಾಜ್‌ ಶೆಟ್ಟಿ ದಂಪತಿ ಮತ್ತು ಜ್ಯೋತಿ ಶೆಟ್ಟಿ ಅವರು ಮಹಾ ಮಂಗಳಾರತಿಗೈದರು. ಸೇರಿದ ಸದಸ್ಯರು ಶ್ರೀ ಹನುಮಾನ್‌ ದೇವರ ಅಲಂಕೃತ ಮಂಟಪಕ್ಕೆ ಆರತಿಗೈದರು.

ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರು ಮಾತನಾಡಿ, ರಾಮ ನವಮಿಯಿಂದ ಹನುಮ ಜಯಂತಿಯವರೆಗಿನ ಸಪ್ತಾಹವು ಬಹಳ ವಿಶೇಷತೆಯಿಂದ ಕೂಡಿದೆ. ಶ್ರೀ ರಾಮಾಂಜನೇಯ ಜಯಂತಿಯನ್ನು ನಾವೆಲ್ಲರೂ ಒಂದಾಗಿ ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿದ್ದೇವೆ. ಸೇವೆ ಎಂದರೆ ಹನುಮ-ಹನುಮ ಎಂದರೆ ಸೇವೆ ಎಂಬ ಮಾತಿನಂತೆ ನಮ್ಮಲ್ಲಿ ಜನಸೇವಾ ಮನೋಧರ್ಮ ಇರಬೇಕು. ತ್ಯಾಗ ಮತ್ತು ಸೇವೆಗೆ ನಾವು ಶ್ರೀ ಹನುಮಾನ್‌ ದೇವರನ್ನು ಮೊದಲಾಗಿ ಸ್ಮರಿಸುತ್ತೇವೆ. ಧೈರ್ಯ, ಸಾಹಸದಿಂದ ಯಾವುದೇ ಕಾರ್ಯ ಸಾಧನೆ ಸಾಧ್ಯ. ಜೀವನದಲ್ಲಿ ನಾವು ನಮ್ಮಿಂದಾಗುವ ಸೇವಾ ಕಾರ್ಯಗಳನ್ನು ಮಾಡುವಂತಹ ಪರಂಪರೆಯನ್ನು ರೂಢಿಸಿಕೊಳ್ಳಬೇಕು. ಶ್ರೀ ಗುರುದೇವ ಸೇವಾ ಬಳಗದ ಮೂಲಕ ಸೇವಾ ಕಾರ್ಯಗಳು ಒಡಿಯೂರು ಶ್ರೀಗಳ ಮುಖಾಂತರ ಆಗುತ್ತಿದ್ದು, ಅವರ ಸೇವಾ ಕಾರ್ಯಗಳಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ಸಮಾಜ ಸೇವೆಯಿಂದ ಆತ್ಮತೃಪ್ತಿ ದೊರಕುತ್ತದೆ. ನಾವು ಶುದ್ಧ ಮನಸ್ಸಿನಿಂದ ಭಕ್ತಿ ಭಾವದಿಂದ ಮಾಡುವ ಪ್ರತಿಯೊಂದು ಧಾರ್ಮಿಕ ಕಾರ್ಯಗಳು ಭಗವಂತನಿಗೆ ಪ್ರಿಯವಾಗುತ್ತವೆ. ಇಂತಹ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಮತ್ತು ಅದರಲ್ಲಿ ಪಾಲು ಪಡೆಯುವುದರಿಂದ ನಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ನುಡಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಭಗವಾನ್‌ ಶ್ರೀ ಮಾರುತಿ ಕೃಪೆಗೆ ಪಾತ್ರರಾದರು. ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನದಾನ ನೆರವೇರಿತು. ಶ್ರೀ ಗುರುದೇವ ಬಳಗದ ಪ್ರಮುಖರಾದ ಪುಣೆ ಬಳಗದ ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರುಗಳಾದ ಉಷಾ ಕುಮಾರ್‌ ಶೆಟ್ಟಿ, ನಾರಾಯಣ ಕೆ. ಶೆಟ್ಟಿ, ಪ್ರಭಾಕರ ಶೆಟ್ಟಿ ತಮನ್ನ, ವಿಜಯ ಶೆಟ್ಟಿ, ಜಗದೀಶ್‌ ಹೆಗ್ಡೆ ಮತ್ತು ಬಳಗದ ಸದಸ್ಯರು ಹಾಗೂ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ವೀಣಾ ಪಿ. ಶೆಟ್ಟಿ, ಶೋಭಾ ಯು. ಶೆಟ್ಟಿ, ಸುಧಾ ಎನ್‌. ಶೆಟ್ಟಿ, ಪುಷ್ಪಾ ಪೂಜಾರಿ, ಸರೋಜಿನಿ ಬಂಗೇರ, ಸಂಧ್ಯಾ ಶೆಟ್ಟಿ, ರಜನಿ ಹೆಗ್ಡೆ, ಶೋಭಾ ಆಳ್ವ, ಸ್ವರ್ಣಲತಾ ಜೆ. ಹೆಗ್ಡೆ, ಸ್ನೇಹಲತಾ ಆರ್‌. ಶೆಟ್ಟಿ, ಶ್ವೇತಾ ಎಚ್‌. ಎಂ. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next