Advertisement

ಸೇವೆಯಿಂದ ಸಮಾಜದ ಋಣ ತೀರಿಸುವ ಅವಕಾಶ: ಐಕಳ ಹರೀಶ್‌ ಶೆಟ್ಟಿ

11:36 AM Apr 11, 2022 | Team Udayavani |

ಮುಂಬಯಿ: ಬಿಎಸ್‌ಕೆಬಿ ಅಸೋಸಿ ಯೇಶನ್‌ ಮತ್ತು ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಸಂಸ್ಥೆ  ವತಿಯಿಂದ ನಿರ್ಮಾಣಗೊಂಡ ಗೋಕುಲ ಭವನ ಮತ್ತು ಗೋಕುಲ ಶ್ರೀ ಗೋಪಾಲಕೃಷ್ಣ  ಮಂದಿರದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ, ಹೊರೆಕಾಣಿಕೆ ಪ್ರಯುಕ್ತ ಪೂರ್ವಭಾವಿ ಸಭೆ ಎ. 9ರಂದು ಸಾಯನ್‌ ಪೂರ್ವದ ಗೋಕುಲ್‌ ಸಭಾಗೃಹದಲ್ಲಿ  ಬಿಎಸ್‌ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಅಧ್ಯಕ್ಷತೆಯಲ್ಲಿ  ಜರಗಿತು.

Advertisement

ಪೂರ್ವಭಾವಿ ಸಭೆಯಲ್ಲಿ ಮೇ 8ರಿಂದ 16ರ ವರೆಗೆ ಸಯಾನ್‌ನ ಗೋಕುಲದಲ್ಲಿ  ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಸಾಂಪ್ರದಾಯಿಕ ಹಾಗೂ ವಿಧಿವತ್ತಾಗಿ ನೆರವೇರಿಸಲು ನಿರ್ಧರಿಸ

ಲಾಯಿತು. ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಪೂಜಾವಿಧಿಗಳು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಆಯೋಜಿ ಸಲಿದ್ದು, ಈ ಕಾರ್ಯಕ್ರಮಗಳಿಗೆ ರಾಷ್ಟ್ರದ ಹಾಗೂ ರಾಜ್ಯಗಳ ಧುರೀಣರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಗಳ ಯಶಸ್ಸಿಗಾಗಿ ವಿವಿಧ ಉಪ ಸಮಿತಿ ಗಳನ್ನು ರಚಿಸಲಾಗಿದೆ ಎಂದು ಡಾ| ಸುರೇಶ್‌ ರಾವ್‌ ತಿಳಿಸಿದರು.

ಸಾಯನ್‌ ಪೂರ್ವದಲ್ಲಿ  ಅತ್ಯಾಧುನಿಕ ನವಕಾಲೀನ ಸೌಲಭ್ಯಗಳೊಂದಿಗೆ ಪುನರ್‌ ನಿರ್ಮಿಸಲಾದ ಈ ಭವ್ಯ ಕಟ್ಟಡದ ವೈಶಿಷ್ಟéಗಳನ್ನು ತಿಳಿಸಿದ ಡಾ| ಸುರೇಶ್‌ ರಾವ್‌, ಮೇ 8 ರಿಂದ ಆರಂಭವಾಗುವ ಬ್ರಹ್ಮಕಲಶೋತ್ಸವಕ್ಕೆ ದೇಶ-ವಿದೇಶಗಳಲ್ಲಿನ ಶ್ರೀಕೃಷ್ಣನ ಎಲ್ಲ ಭಕ್ತರು, ಕೊಡುಗೈ ದಾನಿಗಳು, ಮುಂಬಯಿಯಲ್ಲಿನ ಎಲ್ಲ  ಸಂಘ ಸಂಸ್ಥೆಗಳ ಮುಖ್ಯಸ್ಥರು, ಪ್ರತಿಯೊಬ್ಬ ಸದಸ್ಯರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಉಭಯ ಸಂಸ್ಥೆಗಳ ಪರವಾಗಿ ಆಹ್ವಾನಿಸಿದರು.

ಸಭೆಯಲ್ಲಿ  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ  ಐಕಳ ಹರೀಶ್‌ ಶೆಟ್ಟಿ  ಮಾತನಾಡಿ, ಮುಂಬಯಿಯಲ್ಲಿ  ತುಳುಕನ್ನಡಿಗರು ಯಾವುದೇ ವಿಷಯಕ್ಕೆ ಒಟ್ಟಾಗಿ ಏಕತೆ ತೋರಿಸುತ್ತಾರೆ. ಅಂತೆಯೇ ಸಮಾಜದ ಋಣ ತೀರಿಸಲು ಇಂತಹ ಸೇವೆಗಳ ಮೂಲಕ ಅವಕಾಶ ದೊರೆತಿದೆ. ಡಾ| ಸುರೇಶ್‌ ರಾವ್‌ ಈ ಮಂದಿರ ನಿರ್ಮಾಣದ ಮೂಲಕ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಎಲ್ಲರ ಸಹಯೋಗದಿಂದ ಬ್ರಹ್ಮಕಲ ಶವು ವೈಭವೋಪೇತವಾಗಿ ನಡೆಯಲಿದೆ. ಶೀಕೃಷ್ಣ ದೇವರ ಅನುಗ್ರಹದಿಂದ ಕಾರ್ಯಕ್ರಮ ಸಾಂಗ ವಾಗಿ ನೆರವೇರಲಿದೆ. ದೇವರ ಸೇವೆಗಳಲ್ಲಿ ಎಲ್ಲರೂ ನೇತೃತ್ವ ವಹಿಸಬೇಕು ಎಂದು ತಿಳಿಸಿದರು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಹರೀಶ್‌ ಜಿ. ಅಮಿನ್‌, ದೇವಾಡಿಗರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಧರ್ಮಪಾಲ್‌ ಯು.ದೇವಾಡಿಗ, ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ, ಜಿಎಸ್‌ಬಿ ಸೇವಾ ಮಂಡಳಿ ಮುಂಬಯಿ ಇದರ ಸತೀಶ್‌ ರಾಮ ನಾಯಕ್‌, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್‌.ಎಂ. ಭಂಡಾರಿ, ಫೈನ್‌ ಆರ್ಟ್ಸ್ ಆ್ಯಂಡ್‌ ಸಂಗೀತ ಸಭಾ (ಶ್ರೀ ಷಣ್ಮುಖಾನಂದ) ಇದರ ಗೌರವ ಕೋಶಾಧಿಕಾರಿ ಆರ್‌. ಶ್ರೀಧರ್‌, ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ತುಳು ಕೂಟ ಫೌಂಡೇಶನ್‌ (ರಿ.) ನಲಸೋಪಾರ ಗೌರವಾಧ್ಯಕ್ಷ ಶಶಿಧರ್‌ ಕೆ. ಶೆಟ್ಟಿ, ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ ವಿಶ್ವಸ್ತ ಸದಸ್ಯ ವಿದ್ವಾನ್‌ ಎಸ್‌.ಎನ್‌. ಉಡುಪ ಜೆರಿಮೆರಿ, ಬಿಎಸ್‌ಕೆಬಿಎ ಉಪಾಧ್ಯಕ್ಷೆ ಶೈಲಿನಿ ಎ. ರಾವ್‌, ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಮಹಿಳಾ ವಿಭಾಗದ ಅಧ್ಯಕ್ಷೆ ಐ.ಕೆ. ಪ್ರೇಮಾ ಎಸ್‌. ರಾವ್‌ ಉಪಸ್ಥಿತರಿದ್ದರು.

ಸಭೆಯಲ್ಲಿ ಬಿಎಸ್‌ಕೆಬಿಎ ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್‌, ಡಾ| ಸದಾನಂದ ಆರ್‌. ಶೆಟ್ಟಿ ಸಾಯನ್‌, ಜಯರಾಮ ಬಿ. ಶೆಟ್ಟಿ ಇನ್ನ (ಅಜಂತಾ), ಸುಧೀರ್‌ ಆರ್‌.ಎಲ್‌. ಶೆಟ್ಟಿ, ಅಶೋಕ್‌ ಶೆಟ್ಟಿ ಪೆರ್ಮುದೆ ಉಪಸ್ಥಿತರಿದ್ದರು. ಅತಿಥಿಗಳನ್ನು ಶಾಲು ಹೊದೆಸಿ ಪುಷ್ಪಗುತ್ಛ ನೀಡಿ ಗೌರವಿಸಲಾಯಿತು.  ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ ಹೊಳ್ಳ ಸ್ವಾಗತಿಸಿ, ಕೋಶಾಧಿಕಾರಿ ಸಿಎ ಹರಿದಾಸ ಭಟ್‌ ವಂದಿಸಿದರು.

ಹೊರೆಕಾಣಿಕೆ ಸಮಿತಿ ರಚನೆ :

ಬ್ರಹ್ಮಕಲಶೋತ್ಸವದ ಸಲುವಾಗಿ ವಿಶೇಷವಾಗಿ ಹೊರೆಕಾಣಿಕೆ ಸಮಿತಿ ರಚಿಸಿದ್ದು, ಇದರ ಸಾರಥ್ಯವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರಿಗೆ ವಹಿಸಲಾಯಿತು. ಉಭಯ ಸಂಸ್ಥೆಗಳ ಪರವಾಗಿ ಡಾ| ಸುರೇಶ್‌ ರಾವ್‌ ಮತ್ತು ಪದಾಧಿಕಾರಿಗಳು  ಐಕಳ ಹರೀಶ್‌ ಅವರಿಗೆ ಪೇಟ ತೊಡಿಸಿ, ಅಡಿಕೆ ವೀಳ್ಯದೆಲೆಯನ್ನಿತ್ತು ಸಾಂಪ್ರದಾಯಿಕವಾಗಿ ಜವಾಬ್ದಾರಿಯನ್ನು ವಹಿಸಿ ಬೃಹನ್ಮುಂಬಯಿ ಹಾಗೂ ಮಹಾರಾಷ್ಟ್ರದಾದ್ಯಂತದ ವಿಶೇಷವಾಗಿ ತುಳುಕನ್ನಡಿಗರ ಎಲ್ಲ ಸಂಘ-ಸಂಸ್ಥೆಗಳು ಹೊರೆಕಾಣಿಕೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

 

ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next