ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಧರ್ಮಗುರು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ತಮ್ಮ ಪಟ್ಟಶಿಷ್ಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರೊಂದಿಗೆ ಅಮ್ಮೆಂಬಳ ಸೋನಾ ಕಾಮತ್ ಕುಟುಂಬದ ಶ್ರೀ ಗೋಪಾಲ ಕೃಷ್ಣ ದೇವರ ಪ್ರತಿಷ್ಠಾ ಮಹೋತ್ಸವದ 40ನೇ ವರ್ಧಂತಿ ಪ್ರಯುಕ್ತ ಮುಡಿಪು ಅಮ್ಮೆಂಬಳಕ್ಕೆ ಆಗಮಿಸಲಿದ್ದಾರೆ. ಶ್ರೀಗಳ ಉಪಸ್ಥಿತಿಯಲ್ಲಿ ಎ. 17ರಿಂದ 21ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವೇ|ಮೂ| ಜೋಡುಮಠ ಅಚ್ಯುತ್ ಭಟ್ ಅವರಿಗೆ ಸಮ್ಮಾನ , ಶ್ರೀಗಳ ಆಶೀರ್ವಚನ ಎ. 19ರಂದು ಸಂಜೆ 4 ಗಂಟೆಗೆ ಜರಗಲಿದೆ ಎಂದು
ದೇವಸ್ಥಾನದ ಅಧ್ಯಕ್ಷ ಅಮ್ಮೆಂಬಳ ನಾಗೇಶ ಕಾಮತ್ ತಿಳಿಸಿದ್ದಾರೆ.