Advertisement
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ಜನ್ಮದಿನೋತ್ಸವದ ಪ್ರಯುಕ್ತ ಸೋಮವಾರ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಗೆ ಶುಭ ಕಾಮನೆ ಸಲ್ಲಿಸಿ ಅವರು ಮಾತನಾಡಿದರು.
Related Articles
Advertisement
ಭಕ್ತಿ ವ್ಯಾಪಾರದ ಸರಕಲ್ಲ ಎಂಬುದನ್ನು ತಿಳಿಸಿಕೊಟ್ಟು ಭಕ್ತಿಯನ್ನು ಜಾಗೃತಿ ಗೊಳಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ.ಅವರು ಆಧ್ಯಾತ್ಮ,ಧಾರ್ಮಿಕ ಜೀವನವನ್ನು ಮುನ್ನಡೆಸಲು ಮಾರ್ಗದರ್ಶನ ಮಾಡುತ್ತಿದ್ದಾರೆ ಇಂತಹ ಶ್ರೀಗಳು ಇರುವುದರಿಂದಾಗಿ ನಾವೆಲ್ಲ ಮಾನಸಿಕ ನೆಮ್ಮದಿ ಪಡೆದಿದ್ದೇವೆ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಶ್ರೀಗಳಿಗೆ ಶುಭಾಶಯ ಸಲ್ಲಿಸಿ ಕೊರೊನ ಸಂಕಷ್ಟದ ದಿನಗಳಲ್ಲಿ ಸ್ವಾಮೀಜಿಯವರು ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಿಕೊಟ್ಟು ನಮಗೆ ಬಹಳವಾಗಿ ನೆರವಾದರು ಎಂದು ಸ್ಮರಿಸಿದರು.
ಕೊರೊನ ಕಾಲದಲ್ಲಿ ಯಾರು ಯಾರನ್ನೂ ಭೇಟಿಯಾಗಲಾರದ ಸಂದರ್ಭದಲ್ಲಿ ಸ್ವತಹಾ ಶ್ರೀಗಳು ತಮ್ಮ ಭೇಟಿಗೆ ಅವಕಾಶ ಕೊಟ್ಟು ಜನರ ಜೀವರಕ್ಷಣೆ ಮಾಡಿದರು ಎಂದು ಬಣ್ಣಿಸಿದರು.
ಯೋಗದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಗೆ ಬರಲು ಒಪ್ಪಿಗೆ ನೀಡುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ಪ್ರಮುಖ ಕಾರಣ ಎಂದು ಪ್ರತಾಪ್ ಸಿಂಹ ನುಡಿದರು.
ಈ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಶ್ರೀಚಕ್ರಪೂಜೆ , ನಾರಾಯಣ ಹೋಮ ನೆರವೇರಿಸಲಾಯಿತು.
ಮುಖ್ಯಅತಿಥಿ ಆಗಮಿಸಿದ್ದ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದೀಬೇನ್ ಪಟೇಲ್ ಅವರು ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ಅವಧೂತ ದತ್ತ ಪೀಠದ ನಾದನಿಧಿ ಪ್ರಶಸ್ತಿಯನ್ನು ಗಣಪತಿ ಶ್ರೀಗಳೊಂದಿಗೆ ಕರ್ನಾಟಕ ಸಂಗೀತ ವಿದ್ವಾನರುಗಳಾದ ಬೆಂಗಳೂರಿನ ಡಾ || ಟಿ.ಎಸ್.ಸತ್ಯವತಿ, ಚೆನ್ನೈನ ವಿ II ರಾಜ್ ಕುಮಾರ್ ಭಾರತಿ ,ಪಿಟೀಲು ವಿದ್ವಾನರುಗಳಾದ ಮೈಸೂರು ಬ್ರದರ್ಸ್ ಎಂದೇ ಖ್ಯಾತರಾದ ಮೈಸೂರು ಎಂ.ನಾಗರಾಜು ಮೈಸೂರು ಎಂ.ಮಂಜುನಾಥ್ , ಚಿತ್ರ ವೀಣೆ ಪ್ರವೀಣರಾದ
ಚೆನ್ನೈ ನ ವಿ.ಎನ್.ರವಿಕಿರಣ್ ಅವರುಗಳಿಗೆ ನೀಡಿ ಗೌರವಿಸಿದರು.
ಇದೇ ವೇಳೆ ವಿದ್ಯಾನಿಧಿ ಪ್ರಶಸ್ತಿಯನ್ನು ಸಂಸ್ಕೃತ ವಿದ್ವಾನ್ ಕೇಂದ್ರೀಯ ಸಂಸ್ಕೃತ ವಿವಿ ಉಪಕುಲಪತಿ ಶ್ರೀನಿವಾಸ ವರಖೇಡಿ ಅವರಿಗೆ ನೀಡಿ ಗೌರವಿಸಲಾಯಿತು.