Advertisement
ಪ್ರಾಣಿಗಳು ಬಿಸಿಲಿನ ಬೇಗೆ ತಾಳಲಾರದೆ ಸಮಸ್ಯೆ ಅನುಭವಿಸುತ್ತಿವೆ. ಅದರಲ್ಲೂ ಪ್ರಸ್ತುತ ಮೈಸೂರಿನಲ್ಲಿ ಉಷ್ಣಾಂಶವೂ 40 ಡಿಗ್ರಿ ಸೆ.ಗಿಂತ ಹೆಚ್ಚಾಗಿ ದಾಖಲೆ ಯನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಣಿಗಳನ್ನು ಬಿಸಿಲಿನ ಝಳದಿಂದ ರಕ್ಷಿಸಿ, ತಂಪಾಗಿಸುತ್ತಿದ್ದಾರೆ. ಮುಖ್ಯವಾಗಿ ಪ್ರಾಣಿಗಳಿಗೆ ನೀರು ಸಿಂಪಡಣೆ, ಕೊಳಗಳ ನಿರ್ಮಾಣ ಮಾಡಲಾಗಿದೆ. ತಾಜಾ ಹಣ್ಣು ಹಾಗೂ ತಂಪಾದ ಪಾನೀಯ ನೀಡಲಾಗುತ್ತಿದೆ. ಚಿಂಪಾಂಜಿಗಳಿಗೆ ಎಳನೀರು ನೀಡಲಾಗುತ್ತಿದ್ದು, ಕರಡಿಗಳಿಗೆ ಕಲ್ಲಂಗಡಿ, ಕಿತ್ತಳೆ ಇನ್ನಿತರ ತಾಜಾ ಹಣ್ಣುಗಳನ್ನು ಹಾಗೂ ಐಸ್‌ಕ್ಯೂಬ್‌ಗಳನ್ನು ಐಸ್ ಬಾಕ್ಸ್‌ನಲ್ಲಿ ಇಟ್ಟು ಪ್ರತಿನಿತ್ಯ ನೀಡಲಾಗುತ್ತಿದೆ. ಇನ್ನು ಹುಲಿ, ಸಿಂಹ, ಚಿರತೆಗಳಿಗೆ ಅವುಗಳ ಪ್ರಾಂಗಣದಲ್ಲಿ ಕೊಳಗಳನ್ನು ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಅಲ್ಲದೆ, ಪ್ರತಿದಿನ ಎರಡು ಬಾರಿ ಕೊಳದ ನೀರನ್ನು ಬದಲಾಯಿಸಲಾಗುತ್ತಿದ್ದು, ಪ್ರಾಣಿಗಳು ಕೊಳದಲ್ಲಿಯೇ ಸ್ನಾನ ಮಾಡುತ್ತಿವೆ.
Related Articles
Advertisement
ನಿರ್ಜಲೀಕರಣ: ಮುನ್ನೆಚ್ಚರಿಕೆ: ಪ್ರಾಣಿಗಳಲ್ಲಿ ನಿರ್ಜಲೀಕರಣ ಆಗಬಾರದೆಂದು ಮುನ್ನೆಚ್ಚರಿಕೆ ವಹಿಸಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಕರ್ಬೂಜ, ಕಲ್ಲಂಗಡಿ.ಕಿತ್ತಲೆ, ದ್ರಾಕ್ಷಿ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಜತೆಗೆ ಒಆರ್‌ಎಸ್ ದ್ರಾವಣವನ್ನು ಕೊಡಲಾಗುತ್ತಿದೆ. ಪ್ರಾಣಿಗಳಿಗೆ ನಿತ್ಯ ನೀಡಲಾಗುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಹ್ಯವಾಗಿ ವಿಟಮಿನ್ ಹಾಗೂ ಮಿನರಲ್ ಸೇರಿಸಲಾಗುತ್ತಿದೆ.
ಮೃಗಾಲಯದಲ್ಲಿ ತಂಪು ವಾತಾ ವರಣ ಸೃಷ್ಟಿಸಲಾಗುತ್ತಿದೆ ಮತ್ತು ಎಲ್ಲ ಪ್ರಾಣಿಗಳ ಆವರಣಕ್ಕೆ ಸ್ಪ್ರಿಂಕ್ಲರ್ ಮೂಲಕ ನೀರು ಚಿಮುಕಿಸಲಾಗುತ್ತಿದೆ. ಅಲ್ಲದೆ ಕೆಲ ಪ್ರಾಣಿಗಳಿಗೆ ಎಳನೀರು, ಕಲ್ಲಂಗಡಿ, ಕಿತ್ತಳೆ ಹಣ್ಣುಗಳನ್ನು ನೀಡುತ್ತಿದ್ದು, ಮಾಂಸಾಹಾರಿ ಪ್ರಾಣಿಗಳಿಗೆ ಅವುಗಳ ಜಾಗದಲ್ಲಿಯೇ ಕೊಳ ನಿರ್ಮಾಣ ಮಾಡಲಾಗಿದೆ. ಪ್ರಾಣಿಗಳಿಗೆ ನೀರು ಮತ್ತು ನೆರಳು ಒದಗಿಸಲು ಮುತುವರ್ಜಿ ವಹಿಸಲಾಗಿದೆ.-ಡಿ.ಮಹೇಶ್ ಕುಮಾರ್, ಕಾರ್ಯ ನಿರ್ವಾಹಕ ನಿರ್ದೇಶಕ, ಚಾಮರಾಜೇಂದ್ರ ಮೃಗಾಲಯ