Advertisement
ವೇ.ಮೂ. ವಿವೇಕಾನಂದ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಗಾಯಿತ್ರಿ ಹೋಮ, ಪಲ್ಲಕ್ಕಿ ಉತ್ಸವ, ಉಚ್ಚಯ್ಯ ಕಾರ್ಯಕ್ರಮಗಳು ಜರುಗಿದವು.
Related Articles
ಈ ಜಾತ್ರೆಯ ಅಂಗವಾಗಿ ರವಿವಾರ ಸಂಜೆ ರಥೋತ್ಸವದ ಕಳಸದ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಗಳೊಂದಿಗೆ, ಭಜನೆಯೊಂದಿಗೆ ನಡೆಸಲಾಯಿತು.
Advertisement
ಭಾರತ ಹುಣ್ಣುಮೆಯ ಜಾತ್ರೆಯ ದಿನವಾದ ಇಂದು ಬೆಳಿಗ್ಗೆಯಿಂದಲೆ ಬನಶಂಕರಿ ದೇವಿಗೆ ಅಭಿಶೇಕ , ಹೋಮ ಹವನಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಅಶೋಕ ಸಿನ್ನೂರ, ವೀರಪ್ಪ ಸಿನ್ನೂರ, ರಾಮನಗೌಡ, ಶಂಕ್ರಪ್ಪ ಸಪ್ಪಂಡಿ, ಬಸವರಾಜ ಸಿನ್ನೂರ, ರವಿ ಸಿನ್ನೂರ, ಮಹಾಂತೇಶ ಅಗಸಿಮುಂದಿನ, ಶ್ರೀನಿವಾಸ ಸಿನ್ನೂರ, ಮಹೇಶ ಹುಲಮನಿ, ರಾಘವೇಂದ್ರ, ಹನಮಂತಗೌಡ ಸಿನ್ನೂರ ಬಸವರಾಜ ಸಿನ್ನೂರ, ರುದ್ರಗೌಡಗೌಡಪ್ಪನವರ, ದೆವಸ್ಥಾನದ ಅರ್ಚಕರಾದ ರಾಘವೆಂದ್ರ ಸಿನ್ನೂರ, ಮಂಜುನಾಥ ಸಿನ್ನೂರ, ರಾಮನಗೌಡ ಸಿನ್ನೂರ, ಸೇರಿದಂತೆ ಪ್ರಮುಖರು ಇದ್ದರು ಬನಶಂಕರಿ ದೇವಿಯ ರಥೋತ್ಸವದ ಹಗ್ಗವನ್ನು ಮಡಿಕ್ಕೇರಿ ಗ್ರಾಮದ ಮೂಲಕ ಮೆರವಣಿಗೆಯಲ್ಲಿ ಬಂದ ಬಳಕ ಬುಧವಾರ ಸಾಯಂಕಾಲ ಬನಶಂಕರಿ ರಥೋತ್ಸವದಲ್ಲಿ ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರ ಪಾಲ್ಗೊಂಡರು.
ಈ ರಥೋತ್ಸವದಲ್ಲಿ “ಬನಶಂಕರಿ ನಿನ್ ಪಾದಕ್ ಶಂಬೂಕೋ” ಎಂಬ ವೇದಘೋಷಣೆ ಭಕ್ತರ ಕೂಗು ಮುಗಿಲು ಮುಟ್ಟಿತು ರಥೋತ್ಸವದ ಬಳಿಕ ಬಾನಂಗಳದಲ್ಲಿ ಪಟಾಕ್ಷಿಗಳ ಬಣ್ಣಬಣ್ಣದ ಚಿತ್ತಾರ ಜನರನ್ನು ಆಕರ್ಷಿಸಿತು.