ಮುಂಬಯಿ: ಮೀರಾ ರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಆಷಾಢ ಏಕಾದಶಿ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರೀ ಸನ್ನಿಧಿಯಲ್ಲಿ ಜು. 23 ರಂದು ದಿನಪೂರ್ತಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಲಕ್ಷ ತುಳಸಿ ಅರ್ಚನೆ, ಮಹಾಪೂಜೆ ಮತ್ತು ಸೂರ್ಯಾಸ್ತದಿಂದ ಸೂರ್ಯೋದ ಯದ ವರೆಗೆ ಅಖಂಡ ಭಜನ ಕಾರ್ಯಕ್ರಮ ಜರಗಿತು. ಇದೇ ಸಂದರ್ಭ ದಲ್ಲಿ ಶ್ರೀ ಸನ್ನಿಧಿಯ ಪರಿವಾರ ದೇವರಿಗೆ ಆಂಜನೇಯ, ನಾಗದೇವರು, ಶ್ರೀ ಪದ್ಮಾಂಬಿಕಾ ದೇವಿ, ನವಗ್ರಹ, ಶ್ರೀ ಮಧ್ವಾಚಾರ್ಯರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಇವರು ಇದೇ ಸಂದರ್ಭದಲ್ಲಿ ಮಾತನಾಡಿ, ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಆಶೀರ್ವಾ ದದಿಂದ ಪ್ರತಿದಿನ ಸಂಜೆ ಭಜನೆ, ಪಂಚಾಂಗಾನುಸಾರವಾಗಿ ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆ, ನವರಾತ್ರಿ ಉತ್ಸವ, ದೀಪಾವಳಿ ಉತ್ಸವ, ಸುಬ್ರಹ್ಮಣ್ಯ ಷಷ್ಠಿ ಹಾಗೂ ಇನ್ನಿತರ ಅನೇಕ ಧಾರ್ಮಿಕ, ಆಧ್ಯಾತ್ಮಿಕ, ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
ಏಕಾದಶಿಯಿಂದ ಮುಂದಿನ ನಾಲ್ಕು ತಿಂಗಳವರೆಗೆ ಭಗವಂತ ಯೋಗ ನಿದ್ರೆಯಲ್ಲಿರುವುದರಿಂದ ಜಪ, ತಪ, ವೃತಾದಿಗಳ ಅನುಷ್ಠಾನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು. ಅಖಂಡ ಭಜನೆಯಲ್ಲಿ ಶ್ರೀ ಬಾಲಾಜಿ ಸನ್ನಿಧಿಯ ಭಜನಾ ಮಂಡಳಿಯ ಮಹಿಳಾ ಸದಸ್ಯೆಯರು ಕುಣಿತ ಭಜನೆ ನಡೆಸಿದರು.
ಇತರ ಭಜನ ತಂಡಗಳು ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂ ಡರು. ವಿದ್ವಾನ್ ರಾಧಾಕೃಷ್ಣ ಭಟ್, ಗೋಪಾಲ್ ಭಟ್, ವಿಷ್ಣು ಭಟ್, ಜಯರಾಮ ಭಟ್, ಗಣೇಶ್ ಭಟ್, ಯತಿರಾಜ ಉಪಾಧ್ಯಾಯ ಇವರು ವಿವಿಧ ಪೂಜಾ ವಿಧಿ-ವಿಧಾನಗಳಲ್ಲಿ ಸಹಕರಿಸಿದರು. ಅಹೋರಾತ್ರಿ ನಡೆದ ಅಖಂಡ ಭಜನೆಯಲ್ಲಿ ವಿವಿಧ ಪ್ರದೇಶಗಳ ಭಕ್ತರು, ತುಳು-ಕನ್ನಡಿಗರು ಪಾಲ್ಗೊಂಡರು.
ಚಿತ್ರ-ವರದಿ : ರಮೇಶ್ ಅಮೀನ್