Advertisement

ಚಿತ್ರೀಕರಣ ಪೂರೈಸಿದ “ಶ್ರೀ ಅಲ್ಲಮಪ್ರಭು’

01:00 PM Oct 15, 2021 | Team Udayavani |

12ನೇ ಶತಮಾನದ ಶಿವಶರಣ ಶ್ರೀ ಅಲ್ಲಮಪ್ರಭು ಅವರ ಜೀವನದ ಕಥಾ ಹಂದರ ಹೊಂದಿರುವ “ಶ್ರೀ ಅಲ್ಲಮಪ್ರಭು’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯ ಗೊಂಡಿತು. ಡಾ. ಸಂಜಯ್‌ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ ಅಭಿನಯಿಸಿದ ವಿಭಿನ್ನವಾದ ಹಾಡನ್ನು ಚಿತ್ರೀಕರಣದ ಕೊನೆಯ ಭಾಗವಾಗಿ ಬೆಂಗಳೂರಿನಲ್ಲಿ ಚಿತ್ರಿಸಲಾಯಿತು.

Advertisement

ಇನ್ನು “ಶ್ರೀ ಅಲ್ಲಮಪ್ರಭು’ ಚಿತ್ರವು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. “ಶ್ರೀ ಅಲ್ಲಮಪ್ರಭು’ ಚಿತ್ರವನ್ನು ಶರಣ್‌ ಗದ್ವಾಲ್‌ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಆರ್‌. ಗಿರಿ ಛಾಯಾಗ್ರಹಣ, ಬಿ.ಎಸ್‌ ಕೆಂಪರಾಜ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಕುಮಾರ್‌ ಈಶ್ವರ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ;- ಎಲ್ಲರ ಸುಖದ ಕಲ್ಪನೆಯಿಂದ ಬೇಧ ರಹಿತ ಸ್ವಾತಂತ್ರ್ಯ :ಆರ್ ಎಸ್ಎಸ್ ಸರಸಂಘ ಚಾಲಕ ಭಾಗವತ್

ಚಿತ್ರಕ್ಕೆ ಮಾಧವಾನಂದ. ವೈ ಕಥೆ-ಚಿತ್ರಕಥೆಯನ್ನು ಬರೆದಿದ್ದು, ರಮೇಶ್‌ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ ವೀರೇಂದ್ರ ವಸ್ತ್ರಾಲಂಕಾರವಿದೆ. “ಶ್ರೀ ಅಲ್ಲಮಪ್ರಭು’ ಚಿತ್ರದಲ್ಲಿ ಸಚಿನ್‌ ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ್‌ ಪಂಡಿತ್‌, ಗಣೇಶ್‌ ರಾವ್‌ ಕೇಸರ್‌ಕರ್‌, ನಾರಾಯಣಸ್ವಾಮಿ, ವಿಕ್ರಂ ಸೂರಿ, ರಘು ಭಟ್‌, ಯತಿರಾಜ್‌, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್‌, ಕಾವೇರಿ ಶ್ರೀಧರ್‌, ಶಿವಕುಮಾರ್‌ ಆರಾಧ್ಯ, ಡಾ. ಚಿಕ್ಕಹೆಜ್ಜಾಜಿ ಮಹದೇವ್‌, ಸುರೇಶ್‌ ರಾಜ್‌, ಸಂದೀಪ್‌ ಮಲಾನಿ, ಗುಬ್ಬಿ ನಟರಾಜ್‌, ಅವಿನಾಶ್‌ ಪಾಟೀಲ್, ರಮಣಾಚಾರ್ಯ, ರಾಧಾಕೃಷ್ಣ ರಾವ್‌, ರಾಜ್‌ ಉದಯ್, ಸಂಭ್ರಮಶ್ರೀ, ಅಮೃತಾ, ವರ್ಷಿಣಿ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.‌

Advertisement

ಮಾಧವಾನಂದ. ವೈ ಮತ್ತು ಮಹಾವೀರ ಪ್ರಭು ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಶ್ರೀ ಅಲ್ಲಮಪ್ರಭು’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸದಲ್ಲಿ ನಿರತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next