Advertisement
ಮತ್ತೊಂದೆಡೆ ನಾಯಕ ಡೇವಿಡ್ ವಾರ್ನರ್ ಮಂಗಳವಾರದ ಗೆಲುವಿನ ಮೂಲಕ ಭರ್ಜರಿ ಬರ್ತ್ ಡೇ ಗಿಫ್ಟ್ ಪಡೆದಿದ್ದಾರೆ. ರಶೀದ್ ಖಾನ್, ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ದುಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಕ್ಷರಶಃ ಮುಗಿಬಿದ್ದಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 219 ರನ್ ಗಳ ದಾಖಲೆಯ ಮೊತ್ತವನ್ನು ಪೇರಿಸಿತು. ಇದರಲ್ಲಿ ವಾರ್ನರ್ -66, ಸಹಾ- 87, ಪಾಂಡೆ-44 ರನ್ ಗಳ ಕಾಣಿಕೆ ನೀಡಿದ್ದರು.
Related Articles
Advertisement
- ಘಾತಕ ಬೌಲಿಂಗ್ ನಡೆಸಿದ ರಷೀದ್ ಖಾನ್ ಸನ್ ರೈಸರ್ಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 4 ಓವರ್ ಗಳಲ್ಲಿ ಕೇವಲ 7 ರನ್ ನೀಡಿದ ರಷೀದ್ ಖಾನ್, ಡೆಲ್ಲಿಯ ಪ್ರಮುಖ 3 ವಿಕೆಟ್ ಉರುಳಿಸಿರು. ಐಪಿಎಲ್ ಇತಿಹಾಸದಲ್ಲಿ ಇದು 6ನೇ ಎಕಾನಾಮಿಕಲ್ 4 ಓವರ್ ಬೌಲಿಂಗ್ ಎನಿಸಿಕೊಂಡಿದೆ.
- ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಗಿಸೋ ರಬಾಡ ಐಪಿಎಲ್ ನಲ್ಲಿ ಆಡಿದ 26 ಇನ್ನಿಂಗ್ಸ್ ನಲ್ಲಿ ಇದೇ ಮೊದಲ ಬಾರಿಗೆ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು. ಆ ಮೂಲಕ ತಮ್ಮದೇ “ಐಪಿಎಲ್ ನಲ್ಲಿ ಸತತವಾಗಿ ವಿಕೆಟ್” ಪಡೆದ ದಾಖಲೆಯನ್ನು ಕೊನೆಗೊಳಿಸಿಕೊಂಡರು.
- ಸನ್ ರೈಸರ್ಸ್ ಆರಂಭಿಕರಾದ ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಮೊದಲ 6 ಓವರ್ ಗಳಲ್ಲಿ 77 ರನ್ ಗಳ ಭರ್ಜರಿ ಜೊತೆಯಾಟ ನಡೆಸಿದರು. ಇದು ಐಪಿಎಲ್ 13ನೇ ಆವೃತ್ತಿಯ ಪವರ್ ಪ್ಲೇ ನಲ್ಲಿ ಮೂಡಿಬಂದ ದಾಖಲೆಯ ಮೊತ್ತವಾಗಿದೆ.
- ಐಪಿಎಲ್ ಇತಿಹಾಸದಲ್ಲೇ ಸನ್ ರೈಸರ್ಸ್ ಹೈದರಾಬಾದ್ ಪಡೆದ ಅತೀ ದೊಡ್ಡ ಗೆಲುವು(88 ರನ್) ಇದಾಗಿದೆ. ಇದಕ್ಕೂ ಮೊದಲು 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 118 ರನ್ ಗಳ ಜಯಗಳಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.
- 219 ರನ್ ಗಳು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 2020ರಲ್ಲಿ ಮೂಡಿಬಂದ ಅತೀ ದೊಡ್ಡ ಮೊತ್ತ. ಇದಕ್ಕೂ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್, ಬೆಂಗಳೂರು ವಿರುದ್ಧ 206 ರನ್ ಪೇರಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. 219 ರನ್ ಗಳು 2020ರ ಐಪಿಎಲ್ ಕ್ರೀಡಾಕೂಟದಲ್ಲಿ ಸನ್ ರೈಸರ್ಸ್ ದಾಖಲಿಸಿದ ಅತೀ ದೊಡ್ಡ ಮೊತ್ತ ಕೂಡ ಹೌದು.