Advertisement

14 ಎಸೆತಗಳಿಂದ 40 ರನ್‌: ವಾಷಿಂಗ್ಟನ್‌ ಸಾಧನೆಯನ್ನು ಪ್ರಶಂಸಿಸಿದ ಮೂಡಿ

10:55 PM Mar 30, 2022 | Team Udayavani |

ಪುಣೆ: ರಾಜಸ್ಥಾನ್‌ ರಾಯಲ್ಸ್‌ ಎದುರಿನ ಐಪಿಎಲ್‌ ಕಾಳಗದಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ಸನ್‌ರೈಸರ್ ಹೈದರಾಬಾದ್‌ 61 ರನ್ನುಗಳ ಭಾರೀ ಅಂತರದಿಂದ ಸೋತಿರಬಹುದು, ಆದರೆ ತಂಡದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ತಮ್ಮ ನಿರ್ಭೀತ ಬ್ಯಾಟಿಂಗ್‌ ಮೂಲಕ ಕೋಚ್‌ ಟಾಮ್‌ ಮೂಡಿ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

ಅಮೋಘ ಆಲ್‌ರೌಂಡರ್‌
“ವಾಷಿಂಗ್ಟನ್‌ ಓರ್ವ ಅಮೋಘ ಆಲ್‌ರೌಂಡರ್‌. ಮೆಗಾ ಹರಾಜಿನಲ್ಲಿ ಅವರನ್ನು ಪಡೆಯುವುದೇ ನಮ್ಮ ಗುರಿ ಆಗಿತ್ತು. ಬ್ಯಾಟ್‌ ಮತ್ತು ಬಾಲ್‌ ಎರಡರಲ್ಲೂ ಅವರು ನಿರ್ಣಾಯಕ ಪಾತ್ರ ವಹಿಸುವ ಬಗ್ಗೆ ಅನುಮಾನವಿಲ್ಲ. ಈ ಪಂದ್ಯದಲ್ಲಿ ವಾಷಿಂಗ್ಟನ್‌ 8ರಷ್ಟು ಕೆಳ ಕ್ರಮಾಂಕದಲ್ಲಿ ಆಡಲಿಳಿದಿರಬಹುದು, ಆದರೆ ಅವರಿಗೆ ಇದೇ ಖಾಯಂ ಜಾಗ ಆಗಿರುವುದಿಲ್ಲ’ ಎಂದು ಟಾಮ್‌ ಮೂಡಿ ಹೇಳಿದರು.

ಎಸ್‌ಆರ್‌ಎಚ್‌ ತೀವ್ರ ಕುಸಿತ ಅನುಭವಿಸಿದ ವೇಳೆ ಸಿಡಿದು ನಿಂತ ವಾಷಿಂಗ್ಟನ್‌ ಸುಂದರ್‌ ಕೇವಲ 14 ಎಸೆತಗಳಿಂದ 40 ರನ್‌ ಬಾರಿಸಿದ್ದರು (5 ಬೌಂಡರಿ, 2 ಸಿಕ್ಸರ್‌). ಆದರೆ ಬೌಲಿಂಗ್‌ನಲ್ಲಿ ಅತ್ಯಂತ ದುಬಾರಿಯಾಗಿದ್ದರು. ಅವರ 3 ಓವರ್‌ಗಳಿಂದ 47 ರನ್‌ ಸೋರಿ ಹೋಗಿತ್ತು.

ಇದನ್ನೂ ಓದಿ:ವಿರಾಟ್‌ ಕೊಹ್ಲಿ ಫಾರ್ಮ್ ಬಗ್ಗೆ ಅನುಮಾನ ಬೇಡ: ಎಬಿಡಿ

ತಂಡದ ಬೌಲಿಂಗ್‌ ವೈಫ‌ಲ್ಯದ ಬಗ್ಗೆ ಟಾಮ್‌ ಮೂಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ನೋಬಾಲ್‌ ಎಸೆಯುವುದನ್ನು ಯಾವ ಕಾರಣಕ್ಕೂ ಸಮರ್ಥಿಸಲಾಗದು. ಇದಕ್ಕೆ ತಂಡ ಭಾರೀ ದಂಡ ತೆರಬೇಕಾಗುತ್ತದೆ. ಭುವನೇಶ್ವರ್‌ ಕುಮಾರ್‌ ಪರಿಣಾಮಕಾರಿಯಾಗಿದ್ದರು. ರೊಮಾರಿಯೊ ಶೆಫ‌ರ್ಡ್‌ ಅವರ ಮೊದಲ ಓವರ್‌ ಅಮೋಘವಾಗಿತ್ತು. ಆದರೆ ಇಷ್ಟೇ ಸಾಲದು…’ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next