Advertisement

ಡಿಕೆಶಿ- ರಾಮುಲು ವಾಕ್ಸಮರ

06:00 AM Oct 17, 2018 | Team Udayavani |

ಬಳ್ಳಾರಿ: ಲೋಕಸಭೆ ಉಪಚುನಾವಣೆಯ ಹೈ ವೋಲ್ಟೆಜ್‌ ಕ್ಷೇತ್ರವಾಗಿರುವ ಬಳ್ಳಾರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ  ಡಿ.ಕೆ.ಶಿವಕುಮಾರ್‌ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಶ್ರೀರಾಮುಲು ಮಧ್ಯೆ ಪರಸ್ಪರ ವಾಕ್ಸಮರ ನಡೆದಿದೆ. 

Advertisement

ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್‌: “ಶ್ರೀರಾಮುಲುಗೆ ದೊಡ್ಡ ನಮಸ್ಕಾರ. ಅವರು ರಾಮಾಯಣದ ರಾಮನ ವಂಶಸ್ಥರು. ಅವರೊಬ್ಬ ದೊಡ್ಡ ನಾಯಕರು. ಅವರು ಎಲ್ಲಿ ಕಳುಹಿಸಿದ್ರೂ ಒಪ್ಪುತ್ತೇನೆ. ನ.6ಕ್ಕೆ ನನ್ನ ಬಂಧನವಾಗುತ್ತದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಅಂದು ಜನರೇ ಇವರಿಗೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದರು. ಇದಕ್ಕೆ ತಿರುಗೇಟು ನೀಡಿದ ಶಾಸಕ ಬಿ.ಶ್ರೀರಾಮುಲು: “ಡಿ.ಕೆ.ಶಿವಕುಮಾರ್‌ ಅವರಂತೆ ನಾಟಕೀಯ ಮಾತುಗಳನ್ನು ಹೇಳಿ ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ನೇರವಾಗಿ ನುಡಿದಂತೆ ನಡೆದುರಾಜಕೀಯ ಮಾಡಿದವನು. ಬೆಳಗಾವಿಯಲ್ಲಿ ರಾಜಕೀಯ ಮಾಡಲು ಹೋಗಿ, ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ ವಿರುದಟಛಿ ಸೋತು ಸುಣ್ಣವಾಗಿ ಜಿಲ್ಲೆಯಲ್ಲಿ ವಾಲ್ಮೀಕಿ ಮುಖಂಡರನ್ನು ತುಳಿಯಬೇಕೆಂಬ
ಉದ್ದೇಶದಿಂದ ಕನಕಪುರ ಗೌಡರು ಬಳ್ಳಾರಿಗೆ ಬಂದಿದ್ದಾರೆ. ಕಳೆದ ಬಾರಿ ಭ್ರಷ್ಟಾಚಾರ ಬಗ್ಗೆ ಸತ್ಯಹರಿಶ್ಚಂದ್ರರಂತೆ
ಮಾತನಾಡಿದ್ದ ಡಿಕೆಶಿ, ಇಂದು ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ.

ಅವರ ಮನೆಯಲ್ಲಿ ಸಿಕ್ಕ ಹಣ ಬಡವರ ಹಣ. ತಪ್ಪು ಮಾಡಿದ್ದೇನೆ. ತೊಂದರೆಯಲ್ಲಿ ಸಿಲುಕುತ್ತೇನೆ ಎಂಬ ಭಯ ಅವರಲ್ಲಿದ್ದರೂ, ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಇದ್ದಾರೆ. ನಾವು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ರಾಜಕೀಯ ಮಾಡುವಂತವರು. ಅವರಿಂದಲೇ ಜೆ.ಶಾಂತಾ ಜಯಗಳಿಸಲಿದ್ದಾರೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next