Advertisement

Sreeleela; ಬ್ರೇಕ್‌ ಕೆ ಬಾದ್‌ ಎಂಟ್ರಿ… ರವಿತೇಜ ಚಿತ್ರದಲ್ಲಿ ಶ್ರೀಲೀಲಾ

02:23 PM Jun 01, 2024 | Team Udayavani |

“ಕಿಸ್‌’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಿಝಿ ನಟಿಯಾಗಿರೋದು ನಿಮಗೆ ಗೊತ್ತೇ ಇದೆ. ಅದರಲ್ಲೂ “ಗುಂಟೂರು ಖಾರಂ’ ಸಿನಿಮಾದ ಬಳಿಕ ಶ್ರೀಲೀಲಾ ಬೇಡಿಕೆ ಕೂಡಾ ಹೆಚ್ಚಾಗಿದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗದೇ ಹೋದರೂ ಶ್ರೀಲೀಲಾ ಡ್ಯಾನ್ಸ್‌, ಅವರ ಬೋಲ್ಡ್‌ ಸ್ಟೆಪ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇದರಿಂದ ಬರುವ ಆಫ‌ರ್‌ಗಳು ಕೂಡಾ ಹೆಚ್ಚಾಗಿವೆ. ಆದರೆ, ಶ್ರೀಲೀಲಾ ಮಾತ್ರ ಈಗ ಚೂಸಿಯಾಗಿದ್ದಾರೆ. ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೇ ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ.

Advertisement

ಅಂದಹಾಗೆ, ಇತ್ತೀಚೆಗೆ ಬಿಡುಗಡೆಯಾಗಿರುವ “ಟ್ವಿಲ್ಲು ಸ್ಕ್ವೇರ್‌’ ಸಿನಿಮಾದಿಂದಲೂ ಶ್ರೀಲೀಲಾಗೆ ಬಂದಿತ್ತಂತೆ. ಆದರೆ, ಸಿಕ್ಕಾಪಟ್ಟೆ ರೊಮ್ಯಾಂಟಿಕ್‌ ದೃಶ್ಯಗಳಿರುವುದರಿಂದ ಶ್ರೀಲೀಲಾ ಅದನ್ನು ಒಪ್ಪಿಕೊಂಡಿಲ್ಲ. ಸ್ವಲ್ಪ ದಿನ ಬ್ರೇಕ್‌ ಪಡೆದಿದ್ದ ಶ್ರೀಲೀಲಾ ಈಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ರವಿತೇಜ ನಟನೆಯ ಹೊಸ ಸಿನಿಮಾ ಎನ್ನಲಾಗಿದೆ. ಈಗಾಗಲೇ ಶ್ರೀಲೀಲಾ “ಧಮಾಕಾ’ ಸಿನಿಮಾದಲ್ಲಿ ರವಿತೇಜ ಜೊತೆ ನಟಿಸಿದ್ದಾರೆ.

ಇನ್ನು ಶ್ರೀಲೀಲಾ ಅವರದ್ದು ಅತ್ಯಂತ ಸುಶಿಕ್ಷಿತ ಕುಟುಂಬ. ಶ್ರೀಲೀಲಾ ಅವರ ತಂದೆ ಉದ್ಯಮಿಯಾದರೆ, ತಾಯಿ ವೃತ್ತಿಯಲ್ಲಿ ವೈದ್ಯೆ (ಗೈನೋಕಾಲಜಿಸ್ಟ್‌). ಇನ್ನು ವಿದೇಶದಲ್ಲಿರುವ ಇಬ್ಬರು ಅಣ್ಣಂದಿರಲ್ಲಿ ಒಬ್ಬರು ವೈದ್ಯಕೀಯ ವೃತ್ತಿಯಲ್ಲಿ ಮತ್ತೂಬ್ಬರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಶ್ರೀಲೀಲಾ ಕೂಡ ಮೆಡಿಕಲ್‌ ಶಿಕ್ಷಣವನ್ನು ಪಡೆಯುತ್ತಿದ್ದು, ಡಾಕ್ಟರ್‌ ಆಗುವ ಮೊದಲೇ ಸಿಕ್ಕ ಅವಕಾಶ ಅವರನ್ನು ಆ್ಯಕ್ಟರ್‌ ಆಗಿ ಮಾಡಿದೆ. ಸದ್ಯ ಶ್ರೀಲೀಲಾ ಎಂಬಿಬಿಎಸ್‌ ಪರೀಕ್ಷೆ ಬರೆಯುವಲ್ಲಿ ಬಿಝಿಯಾಗಿದ್ದರಿಂದ ಸಿನಿಮಾದಿಂದ ಬ್ರೆಕ್‌ ಪಡೆದಿದ್ದರು ಎನ್ನಲಾಗಿದೆ. “ಉಸ್ತಾದ್‌ ಭಗತ್‌ ಸಿಂಗ್‌’ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿದ್ದು, ಪವನ್‌ ಕಲ್ಯಾಣ್‌ ಈ ಸಿನಿಮಾದ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next