Advertisement

ಜೂನ್‌ನಲ್ಲಿ ಕಾಲಿವುಡ್‌/ಟಾಲಿವುಡ್‌ ಫುಲ್‌ ಬ್ಯುಸಿ: ರಿಲೀಸ್‌ ಆಗಲಿದೆ ಸಾಲು ಸಾಲು ಚಿತ್ರಗಳು

10:58 AM Jun 06, 2024 | Team Udayavani |

ಚೆನ್ನೈ/ಹೈದರಾಬಾದ್:‌ ಕಳೆದ ಐದು ತಿಂಗಳಿನಲ್ಲಿ ಮಾಲಿವುಡ್‌ ದೊಡ್ಡಮಟ್ಟದಲ್ಲಿ ಯಶಸ್ಸುಗಳಿಸಿದೆ. ಬಂದ ಸಿನಿಮಾಗಳೆಲ್ಲ ಕನಿಷ್ಠವೆಂದರೆ 100 ಕೋಟಿ ಗಳಿಸಿ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿದೆ.

Advertisement

ಇದೀಗ ಟಾಲಿವುಡ್‌ ಹಾಗೂ ಕಾಲಿವುಡ್‌ ಸರದಿ. ಐಪಿಎಲ್‌ ಹಾಗೂ ಚುನಾವಣಾ ಜಂಜಾಟದಲ್ಲಿ ಮಾಲಿವುಡ್‌ ಬಿಟ್ಟರೆ ಇತರೆ ಚಿತ್ರರಂಗ ಸಿನಿಮಾಗಳ ರಿಲೀಸ್‌ ಗೆ ಕೊಂಚ ಬ್ರೇಕ್‌ ಹಾಕಿತ್ತು. ಆದರೆ ಇದೀಗ ಸಾಲು ಸಾಲು ಚಿತ್ರಗಳ ರಿಲೀಸ್‌ ಗೆ ದಿನಾಂಕ ನಿಗದಿಯಾಗಿದೆ.

ಜೂನ್‌ ತಿಂಗಳಿನಲ್ಲಿ ಕಾಲಿವುಡ್‌ ಹಾಗೂ ಟಾಲಿವುಡ್‌ ನಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್‌ ಆಗಲಿವೆ. ಆ ಮೂಲಕ ಥಿಯೇಟರ್‌ಗಳು ಮತ್ತೆ ಹೌಸ್‌ ಫುಲ್‌ ಕಾಣುವ ನಿರೀಕ್ಷೆಯಲ್ಲಿದೆ.

ಜೂನ್‌ನಲ್ಲಿ ರಿಲೀಸ್‌ ಆಗಲಿರುವ ಪ್ರಮುಖ ಚಿತ್ರಗಳು: ಜೂನ್‌ ತಿಂಗಳಿನಲ್ಲಿ ಕಾಲಿವುಡ್‌ ಹಾಗೂ ಟಾಲಿವುಡ್‌ ನಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ತೆರೆಕಾಣಲಿದೆ. ಸ್ಟಾರ್‌ ಸಿನಿಮಾಗಳೊಂದಿಗೆ ಪ್ಯಾನ್‌ ಇಂಡಿಯಾ ಚಿತ್ರಗಳೂ ರಿಲೀಸ್‌ ಆಗಲಿವೆ. ಯಾವೆಲ್ಲ ಸಿನಿಮಾಗಳು ಜೂನ್‌ ನಲ್ಲಿ ಬರಲಿವೆ ಎನ್ನುವುದರ ಒಂದು ವರದಿ ಇಲ್ಲಿದೆ..

ಸತ್ಯಭಾಮಾ(ತೆಲುಗು): ನಟಿ ಕಾಜಲ್ ಅಗರ್ವಾಲ್ ಕಂಬ್ಯಾಕ್‌ ಮಾಡುತ್ತಿರುವ ಸಿನಿಮಾವೆಂದೇ ಹೇಳಲಾಗುತ್ತಿರುವ ʼಸತ್ಯಭಾಮಾʼ ಇದೇ ಶುಕ್ರವಾರ(ಜೂ.7 ರಂದು) ತೆರೆ ಕಾಣಲಿದೆ. ಇದು ಕಾಜಲ್‌ ಅವರ 60ನೇ ಸಿನಿಮಾವಾಗಿದ್ದು, ಸುಮನ್ ಚಿಕ್ಕಾಳ ನಿರ್ದೇಶನದ ಈ ಸಿನಿಮಾದಲ್ಲಿ ಕಾಜಲ್‌ ಪೊಲೀಸ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

Advertisement

ರಾಯನ್:(ತಮಿಳು): ಬಹು ಸಮಯದ ಬಳಿಕ ನಟ ಧನುಷ್‌ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿರುವ ʼರಾಯನ್‌ʼ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ನಿರ್ದೇಶನದ ಜೊತೆಗೆ ಲೀಡ್‌ ರೋಲ್‌ ನಲ್ಲೂ ಧನುಷ್‌ ಕಾಣಿಸಿಕೊಳ್ಳಲಿದ್ದಾರೆ.

ಕ್ರೈಮ್‌ – ಥ್ರಿಲ್ಲರ್‌ ʼರಾಯನ್‌ʼ ನಲ್ಲಿ ಎಸ್ ಜೆ ಸೂರ್ಯ, ಸಂದೀಪ್ ಕಿಶನ್, ಕಾಳಿದಾಸ್ ಜಯರಾಂ, ಸೆಲ್ವರಾಘವನ್, ಪ್ರಕಾಶ್ ರಾಜ್, ದುಷಾರ ವಿಜಯನ್, ಅಪರ್ಣಾ ಬಾಲಮುರಳಿ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ. ಇದೇ ಜೂ.13 ರಂದು ಚಿತ್ರ ರಿಲೀಸ್‌ ಆಗಲಿದೆ.

ಡಬಲ್ iSmart: (ತೆಲುಗು): 2019 ರಲ್ಲಿ ಬಂದ ʼಸ್ಮಾರ್ಟ್‌ ಶಂಕರ್‌ʼ ಸಿನಿಮಾದ ರಿಮೇಕ್‌ ಆಗಿರುವ ʼಡಬಲ್‌ ಸ್ಮಾರ್ಟ್‌ʼ ನಲ್ಲಿ ಈ ಬಾರಿ ಟೈಟಲ್‌ ತಕ್ಕಂತೆ ದೊಡ್ಡಮಟ್ಟದ ಕಲಾವಿದರು ಇದ್ದಾರೆ. ಪುರಿ ಜಗನ್ನಾಥ್ ನಿರ್ದೇಶನ ಈ ಸಿನಿಮಾ ಮಾಸ್‌ ಕಥೆಯನ್ನೊಳಗೊಂಡಿದ್ದು, ಸಂಜಯ್‌ ದತ್‌ ವಿಲನ್‌ ಆಗಿ ರಾಮ್ ಪೋತಿನೇನಿ ಮುಂದೆ ಅಬ್ಬರಿಸಲಿದ್ದಾರೆ. ಜೂನ್‌ 14 ರಂದು ಚಿತ್ರ ರಿಲೀಸ್‌ ಆಗಲಿದೆ.

ತಂಗಲಾನ್‌(ತಮಿಳು): ಚಿಯಾನ್‌ ವಿಕ್ರಮ್‌ ಅವರ ʼತಂಗಲಾನ್‌ʼ ಇಷ್ಟು ಹೊತ್ತಿಗೆ ರಿಲೀಸ್‌ ಆಗಿ ಎಷ್ಟೋ ಸಮಯ ಕಳೆದಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದೂಡಿಕೆ ಆಗುತ್ತಲೇ ಬಂದಿದೆ. ʼಕೆಜಿಎಫ್‌ʼನ ಐತಿಹಾಸಿಕ ಕಥೆಯನ್ನೊಳಗೊಂಡಿರುವ ʼತಂಗಲಾನ್‌ʼ ಈಗಾಗಲೇ ಹೈಪ್‌ ಹೆಚ್ಚಿಸಿದೆ. ವಿಕ್ರಮ್‌ ವಿಭಿನ್ನ ಲುಕ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಪೋಸ್ಟರ್‌ ಹಾಗೂ ಟೀಸರ್‌ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಈ ಹಿಂದೆನೇ ರಿಲೀಸ್‌ ಆಗಬೇಕಿದ್ದ ʼತಂಗಲಾನ್‌ʼ ಈಗ ಜೂನ್‌ ನಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ. ಆದರೆ ದಿನಾಂಕ ಇದುವರೆಗೆ ಅಧಿಕೃತವಾಗಿಲ್ಲ.

ಮಾಳವಿಕಾ ಮೋಹನನ್, ಪಾರವತಿ ತಿರುವೋತ್ತು, ಪಶುಪತಿ, ಡೇನಿಯಲ್ ಕ್ಯಾಲ್ಟಗಿರೋನ್, ಹರಿಕೃಷ್ಣನ್ ಅಂಬುದುರೈ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಲ್ಕಿ 2898 ಎಡಿ:(ತೆಲುಗು): ಈ ವರ್ಷದ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ʼ ಕಲ್ಕಿ 2898 ಎಡಿʼ  ಅನೌನ್ಸ್‌ ಆದ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆದಿದೆ.  ಸೈನ್ಸ್‌ ಫೀಕ್ಷನ್‌ ಸಿನಿಮಾದಲ್ಲಿ ಪ್ರಭಾಸ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತದ ಮೊದಲ ಪೌರಾಣಿಕ ಸೈನ್ಸ್‌ ಫೀಕ್ಷನ್‌ ಸಿನಿಮಾವಾಗಿರಲಿದೆ.

ನಾಗ್‌ ಅಶ್ವಿನ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ʼಭೈರವʼನಾಗಿ ಮುಖ್ಯ ಪಾತ್ರದಲ್ಲಿ ನಟಿಸಿದರೆ, ದೀಪಿಕಾ ಪಡುಕೋಣೆ ದೇವತೆಯಾಗಿ ʼಲಕ್ಷ್ಮಿʼ, ಅಮಿತಾಬ್ ಬಚ್ಚನ್ ʼಅಶ್ವತ್ಥಾಮʼ ಮತ್ತು ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ಜೂನ್.27‌ ರಂದು ಚಿತ್ರ ಅದ್ಧೂರಿಯಾಗಿ  ರಿಲೀಸ್‌ ಆಗಲಿದೆ.

ಮಹಾರಾಜ: ವಿಜಯ್‌ ಸೇತುಪತಿ ವಿಭಿನ್ನ ಲುಕ್‌ ನಲ್ಲಿ, ಮಾಸ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ  ʼಮಹಾರಾಜʼ ಈಗಾಗಲೇ ತನ್ನ ಟ್ರೇಲರ್‌ ನಿಂದ ಗಮನ ಸೆಳೆದಿದೆ. ಕ್ಷೌರಿಕನೊಬ್ಬನ ಹಿಂದೆ ಸಾಗುವ ಥ್ರಿಲ್ಲರ್‌ ಕಥೆ ಸಿನಿಮಾದಲ್ಲಿರಲಿದೆ.

ನಿಥಿಲನ್ ಸಾಮಿನಾಥನ್ ನಿರ್ದೇಶನದ ಈ ಚಿತ್ರದಲ್ಲಿ ಅನುರಾಗ್ ಕಶ್ಯಪ್ , ಮಮತಾ ಮೋಹನ್ ದಾಸ್, ನಟ್ಟಿ (ನಟರಾಜ್), ಭಾರತಿರಾಜ, ಅಭಿರಾಮಿ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next