Advertisement

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

04:13 PM Jun 16, 2024 | Team Udayavani |

ಹೈದರಾಬಾದ್:‌ ಮೆಗಾ ಸ್ಟಾರ್ ಚಿರಂಜೀವಿ ʼಭೋಲಾ ಶಂಕರ್ʼ ಬಳಿಕ ಫ್ಯಾಂಟಸಿ ಆ್ಯಕ್ಷನ್ ʼವಿಶ್ವಂಭರʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಪುತ್ರ ರಾಮ್‌ ಚರಣ್‌ ಹೇಳಿದ್ದಾರೆ.

Advertisement

ʼಫಾದರ್ಸ್‌ ಡೇʼ ಪ್ರಯುಕ್ತ ನೀಡಿರುವ ಸಂದರ್ಶನವೊಂದರಲ್ಲಿ ರಾಮ್‌ ಚರಣ್‌ ಚಿರಂಜೀವಿ ಅವರ ಹೊಸ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

“ಅವರು ನಾಲ್ಕು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ನಾನು ಒಂದೆರೆಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಆದರೆ ಯಾವ ಸಿನಿಮಾಗಳೆಂದು ರಾಮ್‌ ಚರಣ್‌ ಮಾಹಿತಿ ನೀಡಿಲ್ಲ.

ವಸಿಷ್ಠ ನಿರ್ದೇಶನದ ʼವಿಶ್ವಂಭರʼ ಚಿತ್ರದಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಆ ಬಳಿಕ ʼಗಾಡ್‌ ಫಾದರ್‌ʼ ನಿರ್ದೇಶಕ ಮೋಹನ್‌ ರಾಜಾ, ʼಸರ್ದಾರ್‌ʼ ನಿರ್ದೇಶಕ ಪಿ ಎಸ್ ಮಿತ್ರನ್ ಅವರೊಂದಿಗೂ ಚಿರಂಜೀವಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

Advertisement

ʼಭೋಲಾ ಶಂಕರ್ʼ ಬಳಿಕ ರಿಮೇಕ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದನ್ನು ಬಿಟ್ಟಿರುವ ಮೆಗಾಸ್ಟಾರ್‌ ಯುವ ನಿರ್ದೇಶಕರೊಂದಿಗೆ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದಾರೆ. ʼವಿಶ್ವಂಭರʼ 2025 ರ ಸಂಕ್ರಾಂತಿಗೆ ರಿಲೀಸ್‌ ಆಗಲಿದೆ.

ಚಿರಂಜೀವಿ ಅವರ ಹೊಸ ಸಿನಿಮಾಗಳು ಅವರ ಹುಟ್ಟುಹಬ್ಬ(ಆ.22 ರಂದು)ದಂದು ಅನೌನ್ಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next