Advertisement

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

01:43 PM May 29, 2024 | Team Udayavani |

ಬೆಂಗಳೂರು: ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಚಂದನವನ ಈ ವರ್ಷ ಸಪ್ಪೆಯಾಗಿದೆ. ಇದುವರೆಗೆ ಹತ್ತಾರು ಸಿನಿಮಾಗಳು ತೆರೆಕಂಡರೂ ಬಾಕ್ಸ್‌ ಆಫೀಸ್‌ ಶೇಕ್‌ ಮಾಡುವಂಥ ಯಾವ ಸಿನಿಮಾನೂ ತೆರೆಕಂಡಿಲ್ಲ ಅನ್ನೋದು ನಿರಾಸೆ ಮೂಡಿಸುವ ಅಂಶ.

Advertisement

ಈ ವರ್ಷ ರಿಲೀಸ್‌ ಆಗಿರುವ ಕನ್ನಡದ ಕೆಲ ಸಿನಿಮಾಗಳು ಹೊಸ ಪ್ರಯೋಗದಲ್ಲಿ ಬಂದಿವೆ. ಅದರಲ್ಲಿ ʼಬ್ಲಿಂಕ್‌ʼ ಹಾಗೂ ʼಶಾಖಾಹಾರಿʼ ಫಸ್ಟ್‌ ಲಿಸ್ಟ್‌ ಗೆ ಬರುತ್ತದೆ. ಈ ಎರಡು ಸಿನಿಮಾಗಳು ಥಿಯೇಟರ್‌ ನಲ್ಲಿ ಎರಡು ವಾರ ಮೇಲಿದ್ದರೂ, ಬಾಕ್ಸ್‌ ಆಫೀಸ್‌ ನಲ್ಲಿ ಅಷ್ಟಾಗಿ ಕಮಾಯಿ ಮಾಡಿಲ್ಲ. ಆದರೆ ಓಟಿಟಿಗೆ ಬಂದ ಬಳಿಕ ಪರಭಾಷೆಗರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ಥಿಯೇಟರ್‌ ನಲ್ಲಿ ಇಂಥ ಸಿನಿಮಾವನ್ನು ಮಿಸ್‌ ಮಾಡಿಕೊಂಡೆ ಅಂಥ ಕೆಲವರು ಹೇಳುತ್ತಿದ್ದಾರೆ. ವರ್ಷದ ಮೊದಲಾರ್ಧ ಸೈಲೆಂಟ್‌ ಆಗಿದ್ದ ಚಂದನವನ ದ್ವಿತೀಯಾರ್ಧದಲ್ಲಿ ದೊಡ್ಡ ಸ್ಟಾರ್‌ ಗಳ ಸಿನಿಮಾ ರಿಲೀಸ್‌ ನಲ್ಲಿ ಕಮಾಲ್‌ ಮಾಡುವ ಸಾಧ್ಯತೆಯಿದೆ.

ಉಪ್ಪಿ, ದುನಿಯಾ ವಿಜಯ್‌,  ಶಿವರಾಜ್‌ ಕುಮಾರ್‌ ಸಿನಿಮಾಗಳು ತೆರೆ ಕಾಣಲಿದೆ. ಇದರ ಜೊತೆಗೆ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಅತೀ ಹೆಚ್ಚು ಸದ್ದು ಮಾಡಿರುವಂಥದ್ದು ದರ್ಶನ್‌, ಧ್ರುವ ಸರ್ಜಾ ಅವರ ಸಿನಿಮಾಗಳು.

ಈಗಾಗಲೇ ದರ್ಶನ್‌ ಅವರ ʼಡೆವಿಲ್‌ʼ ಸಿನಿಮಾ ಇದೇ ವರ್ಷದ ಕ್ರಿಸ್ಮಸ್‌ ಹಬ್ಬದಂದು ರಿಲೀಸ್‌ ಆಗಲಿದೆ ಎಂದು ಅನೌನ್ಸ್‌ ಮಾಡಲಾಗಿದೆ. ʼಕಾಟೇರʼ ಬಳಿಕ ದರ್ಶನ್‌ ಮತ್ತೊಂದು ಮೆಗಾ ಹಿಟ್‌ ಕೊಡುವ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆಗೆ ಜೋಗಿ ಪ್ರೇಮ್‌ – ಧ್ರುವ ಸರ್ಜಾ ಅವರ ʼಕೆಡಿʼ ಇದೇ ಡಿಸೆಂಬರ್‌ ನಲ್ಲಿ ರಿಲೀಸ್‌ ಆಗಲಿದೆ.

Advertisement

ʼಡೆವಿಲ್‌ʼ – ʼಕೆಡಿʼ ಜೊತೆ ಜೊತೆಯಾಗಿ ರಿಲೀಸ್‌ ಆದರೆ ಬಾಕ್ಸ್‌ ಆಫೀಸ್‌ ಉಡೀಸ್‌ ಆಗುವುದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಸ್ಟಾರ್‌ ನಟನ ಸಿನಿಮಾ ಕೂಡ ಡಿಸೆಂಬರ್‌ ನಲ್ಲಿ ರಿಲೀಸ್‌ ಆಗಲಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಜೋರಾಗಿ ಹರಿದಾಡಿದೆ.

ರೋಹಿತ್‌ ಪದಕಿ ನಿರ್ದೇಶನದ, ಡಾಲಿ ಧನಂಜಯ್‌ ಅಭಿನಯದ ʼಉತ್ತರಕಾಂಡʼ ಡಿಸೆಂಬರ್‌ ನಲ್ಲಿ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಕಲಾವಿದರ ದಂಡಿನಿಂದ ಗಮನ ಸೆಳೆದಿರುವ ಮಾಸ್‌ ಕಥಾಹಂದರವುಳ್ಳ ʼಉತ್ತರಕಾಂಡʼ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

ಶಿವರಾಜ್‌ ಕುಮಾರ್‌,ಭಾವನಾ, ದಿಗಂತ್‌, ಚೈತ್ರ ಆಚಾರ್‌, ಹಾಗೂ ಮಾಲಿವುಡ್‌ ಬೆಡಗಿ ಐಶ್ವರ್ಯಾ ರಾಜೇಶ್‌  ʼಉತ್ತರಕಾಂಡʼ ಮೂಲಕ ಚಂದನವನಕ್ಕೆ ಬರಲಿದ್ದಾರೆ.

ʼಡೆವಿಲ್‌ʼ, ʼಕೆಡಿʼ ಜೊತೆಯೇ ʼಉತ್ತರಕಾಂಡʼ ರಿಲೀಸ್‌ ಆಗಲಿದೆ ಎನ್ನುವ ಮಾತು ಹರಿದಾಡುತ್ತಿದೆ. ಆದರೆ ಚಿತ್ರತಂಡ ಇನ್ನು ಕೂಡ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಒಂದೊಮ್ಮೆ ಈ ಮೂರು ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆದರೆ ಇಷ್ಟು ತಿಂಗಳು ಸುಮ್ಮನಿದ್ದ ಸ್ಯಾಂಡಲ್‌ ವುಡ್‌ ನಲ್ಲಿ ಪ್ರೇಕ್ಷಕರ ತೂಫಾನ್‌ ಬರುವುದು ಖಂಡಿತ. ಆದರೆ ಈ ತೂಫಾನ್‌ ನಲ್ಲಿ ಯಾವ ಸಿನಿಮಾ ನೆಲೆಯಾಗಿ ಬಾಕ್ಸ್‌ ಆಫೀಸ್‌ ನಲ್ಲಿ ನಿಲ್ಲುತ್ತದೆ ಎನ್ನುವುದು ಮಾತ್ರ ನಿಗೂಢ.

Advertisement

Udayavani is now on Telegram. Click here to join our channel and stay updated with the latest news.

Next