Advertisement

ರವಿತೇಜ ಜೊತೆ ಶ್ರೀಲೀಲಾ ಡ್ಯುಯೆಟ್‌!: ಧಮಾಕಾ ಸಿನಿಮಾಕ್ಕೆ ಕಿಸ್‌ ನಾಯಕಿ

12:22 PM Jan 26, 2022 | Team Udayavani |

“ಕಿಸ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಶ್ರೀಲೀಲಾ ಈಗ ಕನ್ನಡದ ಜೊತೆ ತೆಲುಗಿನಲ್ಲೂ ನಾಯಕ ನಟಿಯಾಗಿ ಭರವಸೆ ಮೂಡಿಸಿರುವ ನಟಿ. ಈಗಾಗಲೇ ತೆಲುಗಿನಲ್ಲಿ “ಪೆಳ್ಳಿ ಸಂದಡಿ’ ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್‌ನ‌ಲ್ಲಿ ಅಕೌಂಟ್‌ ಓಪನ್‌ ಮಾಡಿರುವ ಶ್ರೀಲೀಲಾ, ಈಗ ತೆಲುಗಿನ ಮತ್ತೂಂದು ಬಿಗ್‌ಬಜೆಟ್‌ ಸ್ಟಾರ್‌ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Advertisement

ಹೌದು, ತೆಲುಗು ಚಿತ್ರರಂಗದ ಮೂಲಗಳ ಪ್ರಕಾರ, ಶ್ರೀಲೀಲಾ ಟಾಲಿವುಡ್‌ ನಟ ರವಿತೇಜ ಅಭಿನಯದ ಹೊಸ ಸಿನಿಮಾ “ಧಮಾಕಾ’ದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್‌ ಶುರುವಾಗಿದ್ದು, ಶೀಘ್ರದಲ್ಲಿಯೇ ಶ್ರೀಲೀಲಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:ತೋತಾಪುರಿ ಆಡಿಯೋ ಟೀಸರ್‌ ಬಂತು: ‌ಕನ್ನಡವಿಲ್ಲ, ಉರ್ದು ಹಿಂದಿಯೇ ಎಲ್ಲಾ…

ಇನ್ನು ತೆಲುಗಿನಲ್ಲಿ ಶ್ರೀಲೀಲಾ ಅಭಿನಯದ ಮೊದಲ ಸಿನಿಮಾ “ಪೆಳ್ಳಿ ಸಂದಡಿ’ ಬಾಕ್ಸಾಪೀಸ್‌ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಹಿಟ್‌ ಆಗದಿದ್ದರೂ, ಈ ಸಿನಿಮಾದಲ್ಲಿ ಶ್ರೀಲೀಲಾ ಅವರ ಗ್ಲಾಮರ್‌ ಮತ್ತು ಅಭಿನಯ ಟಾಲಿವುಡ್‌ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

“ಪೆಳ್ಳಿ ಸಂದಡಿ’ ಬಳಿಕ ತೆಲುಗಿನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಆಫ‌ರ್‌ ಶ್ರೀಲೀಲಾ ಅವರನ್ನು ಹುಡುಕಿಕೊಂಡು ಬರುತ್ತಿರುವುದರಿಂದ, ಶ್ರೀಲೀಲಾ ಅವರ ಸಂಭಾವನೆಯಲ್ಲೂ ಏರಿಕೆಯಾಗಿದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next