Advertisement

ಜನ್ಮಾಷ್ಟಮಿಗೆ ಮುಂಡೇವು ಎಲೆಯ ಮೂಡೆ ಘಮಘಮ

06:00 AM Sep 02, 2018 | |

ಮಲ್ಪೆ: ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಲು ಆರಂಭಿಸಿದೆ. ಇದರೊಂದಿಗೆ ಸಾಂಪ್ರದಾಯಿಕ ಮುಂಡೇವು ಎಲೆಯ ಮೂಡೆ ಘಮಘಮ ಮನೆಗಳಲ್ಲಿ ವ್ಯಾಪಿಸಲಿದೆ. 

Advertisement

ತುಳುನಾಡಿನ ಜನ ಹಬ್ಬಗಳ ಸಮಯದಲ್ಲಿ ವಿಶೇಷವಾದ ತಿಂಡಿ ತಿನಿಸುಗಳನ್ನು  ಸಿದ್ಧಪಡಿಸುತ್ತಾರೆ. ಅಂತಹ ತಿನಿಸುಗಳ ಪೈಕಿ ಮೂಡೆಯೂ ಒಂದು.  ಅಷ್ಟಮಿಗೂ ಮೂಡೆಗೂ ಅವಿನಾಭಾವ ಸಂಬಂಧ. ಇತ್ತೀಚಿನ ದಿನಗಳಲ್ಲಿ ಮೂಡೆ ವರ್ಷದ ಎಲ್ಲ ದಿನಗಳಲ್ಲೂ ಲಭ್ಯವಾಗಿದ್ದರೂ ಅಷ್ಟಮಿಯ ಮೂಡೆಗೆ ವಿಶೇಷವಿದೆ. ಪ್ರಕೃತಿದತ್ತ ಪರಿಕರದ ಸಹಾಯದಿಂದ ತಯಾರಿಸಲಾಗುವ ಮೂಡೆ ರುಚಿಕರ ಹಾಗೂ ಆರೋಗ್ಯಕ್ಕೂ ಹಿತಕರ. ಆಧುನಿಕ ಭರಾಟೆಯಿಂದಾಗಿ ಇಂತಹ ಹಲವಾರು  ತಿನಿಸುಗಳು ಮರೆತು ಹೋದರೂ ಮೂಡೆ ಮಾತ್ರ ಹಲವಾರು ಮನೆಗಳಲ್ಲಿ ಇನ್ನೂ ಉಳಿದುಕೊಂಡಿದೆ.

ಮೂಡೆ ಎಲೆ ದುಬಾರಿ
ಸಾಂಪ್ರದಾಯಿಕ ಮೂಡೆ ಎಲೆ ಕೂಡ  ದುಬಾರಿಯಾಗಿದೆ.  ಉಡುಪಿಯಲ್ಲಿ  ಶುಕ್ರವಾರ 100 ರೂಪಾಯಿಗೆ  8 ಸಿಗುತ್ತಿದ್ದು ಮುಂಡೇವು ಎಲೆ ಶನಿವಾರದಂದು 100 ರೂ.ಗೆ 6 ಮಾತ್ರ ಸಿಗುತ್ತಿದೆ. ಇನ್ನು ಹಲಸಿನ ಎಲೆ ಕೊಟ್ಟೆಗಳು 20 ರೂ.ಗೆ 6ರಂತೆ ಮಾರಾಟವಾಗುತ್ತಿದೆ.

ಪ್ರಕೃತಿದತ್ತವಾಗಿ ಸಿಗುವ ಮುಂಡೇವು ಎಲೆ ಮೂಡೆ ತಯಾರಿಕೆ ಮೂಲ ವಸ್ತು.  ಹಿಂದೆ ಪ್ರತಿ ಮನೆಯಲ್ಲಿ  ತಮಗೆ ಬೇಕಾದ ಎಲೆಯಲ್ಲಿ ತಾವೇ  ತಯಾರಿಸುತ್ತಿದ್ದರು. ಈಗ ಬೇಕಿದ್ದರೆ ಮಾರುಕಟ್ಟೆಗೆ ಹೋಗಬೇಕು. ಅದೂ ಕೂಡ ಎಲ್ಲ ಕಡೆ ಲಭ್ಯ ವಿರುವುದಿಲ್ಲ.  ಇದನ್ನು ತಯಾರಿಸುತಿದ್ದವರ ಸಂಖ್ಯೆ ಇಂದು ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತದೆ. ಆಧುನಿಕರಣದ ಧಾವಂತದಲ್ಲಿ ಇಂದು ಮೂಡೆ ಕಟ್ಟುವ  ಕಲೆಗಾರಿಕೆಯಲ್ಲಿ ಯಾರಿಗೂ ಆಸಕ್ತಿ ಇಲ್ಲ.

ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರು ಒಂದಷ್ಟು  ಮೂಡೆ ಒಲಿಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಬ್ರಹ್ಮಾವರದ ಹೇರೂರು ಸಮೀಪದಲ್ಲಿ  ಎರಡು ಕುಟುಂಬಗಳು ಈಗಲೂ ಈ ಮೂಡೆ ಒಳಿಯನ್ನು ತಯಾರಿಸುತ್ತಿದೆ.

Advertisement

ಅಷ್ಟಮಿಗೆ ಒಂದೆರಡು ದಿನ ಉಡುಪಿ ರಥಬೀದಿಯ ಕಾಣ ಸಿಗುತ್ತದೆ. ಕೆಲವಡೆ ಅಂಗಡಿಗಳ ಮುಂದೆ ಕೇದಗೆಯ ಗರಿ ಮಾಡಿಕೊಂಡು ಮೂಡೆ ಒಲಿಯಲ್ಲಿ ಕಟ್ಟಿ ಮಾರುವವರು ಕಂಡುಬರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next