Advertisement

ಜಮೈಕಾದಲ್ಲಿ ಓಡಲಿರುವ ಶ್ರಾಬಣಿ: ಕೋವಿಡ್ ಕಾಲದಲ್ಲಿ ಟ್ರಾಕ್ ಗೆ ಇಳಿದ ಭಾರತದ ಮೊದಲ ಕ್ರೀಡಾಪಟು

12:22 PM Jul 27, 2020 | keerthan |

ಕಿಂಗ್ ಸ್ಟನ್ ( ಜಮೈಕಾ): ಶ್ರಾಬಣಿ ನಂದಾ.. ಈ ಹೆಸರು ಭಾರತದ ಅತ್ಲೆಟಿಕ್ಸ್ ನಲ್ಲಿ ಅಷ್ಟೇನೂ ಸುದ್ದಿ ಮಾಡಿಲ್ಲ. ಆದರೆ ಒಡಶಾದ ಈ ಓಟಗಾರ್ತಿ ಇದೇ ವಾರ ಕಿಂಗ್ ಸ್ಟನ್ ನಡೆಯುವ 100 ಮೀ. ಓಟದ ಸ್ಪರ್ಧೆಯಲ್ಲಿ ಪ್ರತಿನಿಧಿಸುವ ಮೂಲಕ ಸದ್ದು ಮಾಡಲಿದ್ದಾರೆ. ಶ್ರಾಬಣಿ ಕೋವಿಡ್ ಕಾಲದಲ್ಲಿ ಅತ್ಲೆಟಿಕ್ಸ್ ಟ್ರ್ಯಾಕ್ ಗೆ ಇಳಿದ ಭಾರತದ ಮೊದಲ ಕ್ರೀಡಾಪಟು ಎನ್ನುವುದೇ ಇದಕ್ಕೆ ಕಾರಣ.

Advertisement

ಶ್ರಾಬಣಿ ನಂದಾ ಲಾಕ್ ಡೌನ್ ಗೂ ಮೊದಲೇ ಅಭ್ಯಾಸಕ್ಕಾಗಿ ಕಿಂಗ್ ಸ್ಟನ್ ಗೆ ತೆರಳಿದ್ದರು. ಆದರೆ ಲಾಕ್ ಡೌನ್ ಕಾರಣ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿಯೇ ಅಭ್ಯಾಸ ಮುಂದುವರಿಸತೊಡಗಿದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸವುದು ಅವರ ಕನಸು.

2017ರಿಂದಲೂ ಶ್ರಾಬಣಿ ನಂದಾ ಜಮೈಕಾ ಮೀಟ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ಅಲ್ಲಿ ಎಂವಿಪಿ ಟ್ರ್ಯಾಕ್ ಕ್ಲಬ್ ತಂಡವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ಭುವನೇಶ್ವರದಲ್ಲಿ ನಡೆದ 2017ರ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 4*100 ಮೀ. ರಿಲೇಯಲ್ಲಿ ಕೊನೆಯ ಸಲ ಅಂತಾರಾಷ್ಟ್ರೀಯ ಪದಕ ( ಕಂಚು) ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next