Advertisement

ಹೆಬ್ರಿ ಎಸ್‌.ಆರ್‌. ಸಮೂಹ ಶಿಕ್ಷಣ ಸಂಸ್ಥೆ

03:26 AM May 05, 2019 | Sriram |

ಹೆಬ್ರಿ: ಕಳೆದ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ, ಗುಣಮಟ್ಟ ಹಾಗೂ ಶಿಸ್ತುಬದ್ಧ ಶಿಕ್ಷಣದೊಂದಿಗೆ ಸತತ ದಾಖಲೆಯ ಫಲಿ ತಾಂಶ ನೀಡುತ್ತಿರುವ ಹೆಬ್ರಿಯ ಪ್ರತಿಷ್ಠಿತ ಎಸ್‌.ಆರ್‌. ಸಮೂಹ ಶಿಕ್ಷಣ ಸಂಸ್ಥೆ ಇದೀಗ ರಾಜ್ಯದಲ್ಲೇ ಗುರುತಿಸಿಕೊಂಡಿದೆ.

Advertisement

ಹೆಬ್ರಿ ಪೇಟೆಗೆ ಸಮೀಪ ಉಡುಪಿ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಿಶಾಲವಾದ ಪ್ರಶಾಂತ ಪರಿಸರದಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ದೊಂದಿಗೆ ಆರಂಭಗೊಂಡ ಎಸ್‌.ಆರ್‌. ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ 2,800ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಸತತ 12 ವರ್ಷಗಳಿಂದ ಖಖಔಇ ಹಾಗೂ ಸತತ 7 ವರ್ಷಗಳಿಂದ ಇಆಖಉ 10ನೇ ತರಗತಿಯಲ್ಲಿ 100% ಫಲಿತಾಂಶ, ದ್ವಿತೀಯ ಪಿಯುಸಿಯಲ್ಲಿ ಸತತ 5 ವರ್ಷಗಳಿಂದ ಶೇ. 100 ಫಲಿತಾಂಶ ಪಡೆದಿರುವುದು, ಮಾತ್ರವಲ್ಲದೇ ಈ ಬಾರಿಯ ದ್ವಿತೀಯ ಪಿಯು ವಿಜ್ಞಾನ ವಿಭಾಗದ ರಾಯಿಸಾ ರಾಜ್ಯಕ್ಕೆ 3ನೇ ರ್‍ಯಾಂಕ್‌ ಪಡೆದಿರು ವುದು ಎಸ್‌. ಆರ್‌. ಸಮೂಹ ಶಿಕ್ಷಣ ಸಂಸ್ಥೆಯ ಗುಣಮಟ್ಟದ ಶಿಸ್ತುಬದ್ಧ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

ಉತ್ತಮ ಪರಿಸರ, ಶಿಸ್ತು, ಅನುಭವ ಪ್ರಾಧ್ಯಾಪಕ ವೃಂದ, ಪಾರದರ್ಶಕ ಆಡಳಿತ ವ್ಯವಸ್ಥೆ , ಅತ್ಯಾಧುನಿಕ ಪ್ರಯೋಗಾಲಯಗಳು ಹಾಗೂ ವಿಶಾಲವಾದ ಕ್ಯಾಂಪಸ್‌ನೊಂದಿಗೆ ಕಲಿಕೆಗೆ ಪೂರಕವಾದ ವಾತಾವರಣ ವಿದೆ. ಪ್ರತಿ ವಿದ್ಯಾರ್ಥಿಗಳ ಮೇಲೆ‌ ವೈಯಕ್ತಿಕ ಗಮನ ಹರಿಸುವುದರೊಂದಿಗೆ ಪರಿಣತ ಉಪನ್ಯಾಸಕ ವೃಂದದಿಂದ ಸಿಇಟಿ ಕೋಚಿಂಗ್‌, ವಿಶೇಷವಾಗಿ ವಿದ್ಯಾರ್ಥಿನಿಯರ ಮೇಲೆ ಹೆಚ್ಚಿನ ಗಮನ ಇಲ್ಲಿನ ವೈಶಿಷ್ಟéತೆಯಾಗಿದೆ. ಹೆಚ್ಚಿನ ಮಾಹಿತಿ ಗಾಗಿ ಸಂಸ್ಥೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಅಧ್ಯಕ್ಷ ಎಚ್‌. ನಾಗರಾಜ ಶೆಟ್ಟಿ ಹಾಗೂ ಸಂಚಾಲಕಿ ಸಪ್ನಾ ಎನ್‌. ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರವೇಶಾತಿ ಆರಂಭ
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 3ನೇ ತರಗತಿಯಿಂದಲೇ ಪ್ರತ್ಯೇಕ ಸುಸಜ್ಜಿತ ಹಾಸ್ಟೆಲ್‌ ವ್ಯವಸ್ಥೆ ಇದ್ದು ಈಗಾಗಲೇ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ತನಕ ಪ್ರವೇಶಾತಿ ಆರಂಭ ಗೊಂಡಿದ್ದು ಕೆಲವೇ ಸೀಟುಗಳು ಲಭ್ಯವಿವೆ.

Advertisement

Udayavani is now on Telegram. Click here to join our channel and stay updated with the latest news.

Next