Advertisement

ಪಾಕಿಸ್ತಾನದ ಐಎಸ್‌ಐಗೆ ಗೂಢಚರ್ಯೆ: ಮೂವರಿಗೆ ಜೀವಾವಧಿ ಶಿಕ್ಷೆ

11:06 PM Jul 17, 2023 | Team Udayavani |

ಅಹಮದಾಬಾದ್‌: ಗೂಢಚರ್ಯೆ ಮತ್ತು ಪಾಕಿಸ್ತಾನದ ಐಎಸ್‌ಐಗೆ ಭಾರತದ ಮಿಲಿಟರಿ ನೆಲೆಗಳ ಕುರಿತು ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ಗುಜರಾತ್‌ನ ಸೆಷನ್ಸ್‌ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಸಿರಾಜುದ್ದೀನ್‌ ಆಲಿ ಫ‌ಕೀರ್‌, ಮೊಹಮ್ಮದ್‌ ಅಯೂಬ್‌ ಮತ್ತು ನೌಶಾದ್‌ ಆಲಿ ಶಿಕ್ಷೆಗೆ ಒಳಗಾದರು. ಈ ಮೂವರನ್ನು ಪೊಲೀಸರು 2012ರಲ್ಲಿ ಬಂಧಿಸಿದ್ದರು. ಫ‌ಕೀರ್‌ ಮತ್ತು ಅಯೂಬ್‌, ಅಹಮದಾಬಾದ್‌ ಮತ್ತು ಗಾಂಧಿನಗರದ ಸೇನಾ ನೆಲೆಗಳ ಗೌಪ್ಯ ಮಾಹಿತಿಯನ್ನು ಐಎಸ್‌ಐಗೆ ರವಾನಿಸುತ್ತಿದ್ದರು. ಜೋಧ್‌ಪುರ ನಿವಾಸಿ ನೌಶದ್‌ ಆಲಿ, ಜೋಧಪುರ ಆರ್ಮಿ ಕಂಟೋನ್ಮೆಂಟ್‌ ಮತ್ತು ಬಿಎಸ್‌ಎಫ್ ಪ್ರಧಾನ ಕಚೇರಿ ಕುರಿತು ಐಎಸ್‌ಐಗೆ ಮಾಹಿತಿ ಒದಗಿಸಿದ್ದ. ಇಮೇಲ್‌ ಮೂಲಕ ಇವರು ಮಾಹಿತಿಯನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ರವಾನಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next