Advertisement
ದೆಹಲಿ-ಎನ್‌ಸಿಆರ್ ಪ್ರದೇಶದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ರಷ್ಯಾದ ಕೋವಿಡ್ -19 ಲಸಿಕೆ ‘ಸ್ಪುಟ್ನಿಕ್ ವಿ’ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. “ಲಸಿಕೆ ಯಾವಾಗ ಪೂರೈಸಲಾಗುತ್ತದೆ ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ” ಎಂದು ಇಂದು(ಭಾನುವಾರ, ಜೂನ್ 27) ಅಪೊಲೊ ಆಸ್ಪತ್ರೆಗಳ ವಕ್ತಾರರು ತಿಳಿಸಿದ್ದಾರೆ.
Related Articles
Advertisement
ಇನ್ನು, ಈ ಬಗ್ಗೆ ಡಾ. ರೆಡ್ಡಿ’ಸ್ ಲ್ಯಾಬೊರೇಟರೀಸ್ ನಿಂದ ಲಸಿಕೆಯ ಪೂರೈಕೆಯಲ್ಲಿನ ವಿಳಂಬದ ಬಗ್ಗೆ ಯಾವುದೇ ಕಾರಣಗಳು ದೊರಕಿಲ್ಲ. ಯಾವುದೇ ರೀತಿಯಲ್ಲಿ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ. ಎರಡೂ ಡೋಸ್ ಗಳು ಒಟ್ಟಿಗೆ ಪೂರೈಸುವ ಕಾರಣದಿಂದಾಗ ವಿಳಂಭವಾಗುತ್ತಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ತನ್ನ ಗುರಗಾಂವ್ ಮತ್ತು ಮೊಹಾಲಿ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ವಿ ಲಭ್ಯವಾಗಲಿದೆ ಎಂದು ಹೇಳಿದ್ದ ಫೋರ್ಟಿಸ್ ಹೆಲ್ತ್‌ಕೇರ್, ರಷ್ಯಾದ ಲಸಿಕೆಯನ್ನು ಇಲ್ಲಿಯವರೆಗೆ ಜನರಿಗೆ ನೀಡಲು ಪ್ರಾರಂಭಿಸಿಲ್ಲ.
ರಷ್ಯಾದ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್ ಡಿ ಐ ಎಫ್) ಇದನ್ನು ಜಾಗತಿಕವಾಗಿ ಮಾರಾಟ ಮಾಡುತ್ತಿದೆ.
ಡಾ. ರೆಡ್ಡಿ ಅವರ ಲ್ಯಾಬೋರೆಟರೀಸ್ ರಷ್ಯಾದಿಂದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಕಾಲಕ್ರಮೇಣ, ಲಸಿಕೆ ಭಾರತದಲ್ಲಿಯೂ ತಯಾರಾಗಲಿದೆ.
ಖಾಸಗಿ ಕೋವಿಡ್ -19 ವ್ಯಾಕ್ಸಿನೇಷನ್ ಕೇಂದ್ರಗಳಿಗೆ (ಸಿವಿಸಿ) ಸ್ಪುಟ್ನಿಕ್ ವಿ ಲಸಿಕೆಯ ಬೆಲೆಯನ್ನು ಕೇಂದ್ರವು ಪ್ರತಿ ಡೋಸ್ ಗೆ 1,145 ರೂ. ನಿಗದಿಗೊಳಿಸಿದ್ದು, ಕೋವಿಶೀಲ್ಡ್ ನ ಗರಿಷ್ಠ ಬೆಲೆಯನ್ನು ಪ್ರತಿ ಡೋಸ್ ಗೆ 780 ರೂ, ಕೋವಾಕ್ಸಿನ್ ನ ಪ್ರತಿ ಡೋಸ್ ಗೆ 1,410 ರೂ. ನಿಗದಿಗೊಳಿಸಿದೆ.
ಇದನ್ನೂ ಓದಿ : ಮುಂದಿನ ಸಿಎಂ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಅಧಿಕಾರ ಶಾಸಕರಿಗಿಲ್ಲ: ಕಾಂಗ್ರೆಸ್ ಶಿಸ್ತುಸಮಿತಿ