Advertisement

ಬಿರು ಬೇಸಿಗೆಗೆ ತಂಪಾದ ಪಾನೀಯಗಳು

06:00 AM May 04, 2018 | |

ಅಬ್ಟಾ ! ಬೇಸಿಗೆ ಬಂತೆಂದರೆ ಒಂದು ತರಹ ಯಮಯಾತನೆ.ಸುಡುವ ಬಿಸಿಲು, ನೀರಿನಂತೆ ದೇಹದಿಂದ ಹರಿದು ಹೋಗುವ ಬೆವರು, ದೇಹವನ್ನು ಹಿಂಡಿ ಹಿಪ್ಪೆ ಮಾಡುವ ಸುಸ್ತು. ಅತಿಯಾದ ಬಾಯಾರಿಕೆ ಇದೆಲ್ಲಾ ಸಮಸ್ಯೆಗಳು ಉಂಟಾಗುವುದೇ ಬೇಸಿಗೆಯಲ್ಲಿ. ಈ ಬೇಸಿಗೆಯಲ್ಲಿ ಪಾನೀಯಗಳು ನಮ್ಮನ್ನು ತಣಿಸಲಿದೆ. ಈ ಪಾನೀಯಗಳು ಬೇಸಿಗೆಯ ದಾಹವನ್ನು ತಣಿಸುವುದರ ಜೊತೆಗೆ ತಂಪಿನ ಅನುಭವವನ್ನು ನೀಡುತ್ತವೆ. 

Advertisement

ಪುದೀನ-ಮಾವಿನಕಾಯಿ ಪಾನಕ
ಬೇಕಾಗುವ ಸಾಮಗ್ರಿ: ಸಕ್ಕರೆ, ನೀರು, ಹಸಿ ಮಾವಿನಕಾಯಿ, ಪುದೀನ ಸೊಪ್ಪು, ಕ್ರಶ್‌ ಮಾಡಿದ ಐಸ್‌.

ತಯಾರಿಸುವ ವಿಧಾನ: ಮೊದಲಿಗೆ ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ನೀರು ಹಾಕಿರಿ. ನಂತರ ಸಕ್ಕರೆ ಕರಗುವವರೆಗೆ ಮಿಶ್ರ ಮಾಡಿಕೊಳ್ಳಿ. ಈ ಮಿಶ್ರಣ ತಣ್ಣಗಾದ ನಂತರ ಮಾವಿನಕಾಯಿಯ ಸಿಪ್ಪೆ ತೆಗೆದು ತುಂಡು ಮಾಡಿ ಮಿಕ್ಸಿಗೆ ಹಾಕಿ. ಇದರೊಂದಿಗೆ ಸ್ವಲ್ಪ ಪುದಿನ ಸೊಪ್ಪನ್ನು ಸೇರಿಸಿ ನುಣ್ಣಗೆ ಮಿಶ್ರಣವನ್ನು ತಯಾರಿಸಿಕೊಳ್ಳಿ. ನುಣ್ಣಗೆ ಮಾಡಿದ ಮಿಶ್ರಣ, ಸಕ್ಕರೆ ನೀರು ಒಟ್ಟಿಗೆ ಸೇರಿಸಿ ಕ್ರಶ್‌ ಮಾಡಿದ ಐಸ್‌ನೊಂದಿಗೆ ಕುಡಿಯಲು ಕೊಡಿ.

ಸೌತೆಕಾಯಿ-ಶುಂಠಿ ಜ್ಯೂಸ್‌
ಬೇಕಾಗುವ ಸಾಮಗ್ರಿ:
ಸೌತೆಕಾಯಿ, ಶುಂಠಿ, ಸಕ್ಕರೆ, ಜೀರಿಗೆ ಪುಡಿ, ಕಪ್ಪುಪ್ಪು, ನೀರು.

ತಯಾರಿಸುವ ವಿಧಾನ: ಮಿಕ್ಸರ್‌ನಲ್ಲಿ ಸೌತೆಕಾಯಿ ಹೋಳುಗಳು, ಶುಂಠಿ ಹಾಗೂ ನೀರನ್ನು ಚೆನ್ನಾಗಿ ಬೆರೆಸಿ ಒಂದು ನಯವಾದ ಪೇಸ್ಟ್‌ ರೂಪಕ್ಕೆ ತಂದುಕೊಳ್ಳಿರಿ.  ಈ ಮಿಶ್ರಣಕ್ಕೆ ನೀರು, ಕಪ್ಪುಪ್ಪು$, ಸಕ್ಕರೆ, ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸವಿಯಲು ನೀಡಿ.

Advertisement

ಕಲ್ಲಂಗಡಿ ಯೋಗರ್ಟ್‌
ಬೇಕಾಗುವ ಸಾಮಗ್ರಿ:
ಕಲ್ಲಂಗಡಿ, ಬಾಳೆಹಣ್ಣು, ಗ್ರೀಕ್‌ ವೆನಿಲ್ಲಾ ಯೋಗರ್ಟ್‌, ಸಕ್ಕರೆ, ನೀರು, ಐಸ್‌ಪೀಸ್‌ಗಳು.

ತಯಾರಿಸುವ ವಿಧಾನ: ಬ್ಲೆಂಡರ್‌ನಲ್ಲಿ ಕಲ್ಲಂಗಡಿ, ಬಾಳೆಹಣ್ಣು, ವೆನಿಲಾ ಯೋಗರ್ಟ್‌ ಸಕ್ಕರೆ, ನೀರು ಸೇರಿಸಿ ಬ್ಲೆಂಡ್‌ ಮಾಡಿ ಗ್ಲಾಸ್‌ಗೆ ಐಸ್‌ ಕ್ಯೂಬ್‌ ಹಾಕಿ ಮಿಶ್ರಣವನ್ನು ಸೇರಿಸಿ. ಸವಿಯಲು ಸಿದ್ಧ.

ಪೈನಾಪಲ್‌ ಲೆಮನೇಡ್‌
ಬೇಕಾಗುವ ಸಾಮಗ್ರಿ:
ಪೈನಾಪಲ್‌, ಲಿಂಬೆ ರಸ, ಜೇನು, ನೀರು, ಐಸ್‌, ಸಕ್ಕರೆ.

ತಯಾರಿಸುವ ವಿಧಾನ: ಮೊದಲಿಗೆ ಪೈನಾಪಲ್‌ ತುಂಡುಗಳನ್ನು ಮಿಕ್ಸಿಗೆ ಹಾಕಿ ಜ್ಯೂಸ್‌ ಮಾಡಿಕೊಳ್ಳಿ.  ನೀರನ್ನು ಕುದಿಯಲು ಇಡಿ, ನೀರು ಕುದಿ ಬರುತ್ತಿರುವವಾದ ಪೈನಾಪಲ್‌ ಜ್ಯೂಸ್‌, ಲಿಂಬೆರಸ, ಸಕ್ಕರೆ ಜೇನು ಸೇರಿಸಿ. ಸಕ್ಕರೆ ಕರಗುವ ತನಕ ಕರಗಿಸಿ ಮತ್ತೆ ಅದನ್ನು ಕುದಿಸಿ. ನಂತರ ಉರಿಯಿಂದ ತೆಗೆದು ತಣ್ಣಗಾದ ಮೇಲೆ 3-4 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಡಿ. ಐಸ್‌ ಕ್ಯೂಬ್ಸ್ನೊಂದಿಗೆ ಸವಿಯಲು ನೀಡಿ.

ಗುಲಾಬಿ ಜ್ಯೂಸ್‌
ಬೇಕಾಗುವ ಸಾಮಗ್ರಿ:
ಗುಲಾಬಿ ಎಸಳುಗಳು, ಸಕ್ಕರೆ, ಬಿಸಿನೀರು, ಏಲಕ್ಕಿ, ಲಿಂಬೆ. ದಾಳಿಂಬೆ, ಐಸ್‌ಕ್ಯೂಬ್ಸ್ .

ತಯಾರಿಸುವ ವಿಧಾನ: ಗುಲಾಬಿ ಎಸಳುಗಳನ್ನು ಪೇಸ್ಟ್‌ ಮಾಡಿ ಅದಕ್ಕೆ ಬಿಸಿನೀರು ಸೇರಿಸಿ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ ಬಟ್ಟಲು ಮುಚ್ಚಿ ಒಂದು ರಾತ್ರಿ ಇಡಬೇಕು. ಬೆಳಗ್ಗೆ ದ್ರಾವಣವನ್ನು ಸೋಸಬೇಕು. ನಂತರ ಸಕ್ಕರೆ ಹಾಕಿ ಅದು ಕರಗುವವರೆಗೆ ತಿರುಗಿಸಿ. ಸಕ್ಕರೆ ಕರಗಿದ ನಂತರ ದಾಳಿಂಬೆ  ಜ್ಯೂಸ್‌ ಮತ್ತು ಲಿಂಬೆ ರಸ ಸೇರಿಸಿ ಮಿಶ್ರ ಮಾಡಿ . ಈ ಮಿಶ್ರಣಕ್ಕಿ ಐಸ್‌ ಕ್ಯೂಬ್ಸ್ , ತಣ್ಣನೆಯ ನೀರು ಸೇರಿಸಿ ಕುಡಿಯಲು ನೀಡಿ 

ಸುಲಭಾ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next