Advertisement

ಒಳಚರಂಡಿ ಕಾಮಗಾರಿಗೆ ಗುದ್ದಲಿಪೂಜೆ 

11:15 AM Jan 18, 2018 | Team Udayavani |

ಮಹಾನಗರ: ನಗರದ ಭವಿಷ್ಯದ ಮುಖ್ಯ ರಸ್ತೆಗಳಲ್ಲೊಂದಾದ ಯೆಯ್ನಾಡಿ ಜಂಕ್ಷನ್‌ನಿಂದ ದಂಡೇಕೇರಿ ಶಕ್ತಿನಗರ ಕೂಡು ರಸ್ತೆಗೆ ಕಾಂಕ್ರೀಟ್‌ ಹಾಗೂ ಒಳಚರಂಡಿ ಕಾಮಗಾರಿಗೆ ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್‌. ಲೋಬೋ ಹಾಗೂ ಮೇಯರ್‌ ಕವಿತಾ ಸನಿಲ್‌ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.

Advertisement

ಇದೇ ಸಂದರ್ಭ ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಕೆಲವು ವರ್ಷಗಳ ಹಿಂದಿನಿಂದಲೂ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಇರಾದೆ ಪಾಲಿಕೆಗೆ ಇತ್ತು. ಭವಿಷ್ಯದ ಮಂಗಳೂರಿಗೆ ಇದೊಂದು ಮುಖ್ಯವಾದ ರಸ್ತೆ ಯಾಗಲಿದೆ. ಶಕ್ತಿನಗರ ಪ್ರದೇಶವು ಭವಿಷ್ಯದ ದಿನಗಳಲ್ಲಿ ನಗರದ ಸ್ಯಾಟ್‌ಲೈಟ್‌ ನಗರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಗೆ ವಿಶೇಷವಾದ ಒತ್ತು ಕೊಡಲಾಗುತ್ತದೆ ಎಂದರು.

ಶಕ್ತಿನಗರ ಪ್ರದೇಶದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಈ ರಸ್ತೆಯು ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಈ ರಸ್ತೆ ಪೂರ್ಣಗೊಂಡ ಅನಂತರ ನಂತೂರು ಮುಖ್ಯ ರಸ್ತೆಯಲ್ಲಿ ವಾಹನಗಳ ಒತ್ತಡ ಕಡಿಮೆಯಾಗುವ ಸಾಧ್ಯತೆಯಿದೆ. ರಾಜ್ಯ ಸರಕಾರ ಮುಖ್ಯಮಂತ್ರಿಯವರ 100 ರೂ. ಕೋಟಿ ಅನುದಾನದ ನಿಧಿಯಿಂದ 1.50 ಕೋಟಿ ರೂ. ಹಣವನ್ನು ಈ ರಸ್ತೆಯ ಕಾಂಕ್ರೀಟ್‌ ಕಾಮಗಾರಿಗೆ ಬಳಸಲಾಗುವುದು ಎಂದು ಹೇಳಿದರು.

15 ಲಕ್ಷ ರೂ. ಅನುದಾನ ಮಂಜೂರು
ಸುಮಾರು 290 ಮೀಟರ್‌ ಉದ್ದವಿರುವ ಈ ರಸ್ತೆಯು 7 ಮೀಟರ್‌ ವಿಸ್ತಾರವಾಗಿರುತ್ತದೆ. ಅದಲ್ಲದೇ ಈ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ ಮುಖ್ಯಮಂತ್ರಿಯವರ 100 ಕೋಟಿ ರೂ. ಅನುದಾನದ ನಿಧಿಯಿಂದ ಉಳಿಕೆ ಅನುದಾನದಿಂದ 15 ಲಕ್ಷ ರೂ. ಈ ಕಾಮಗಾರಿ ಮಂಜೂರಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಮಾಜಿ ಮೇಯರ್‌ ಮಹಾಬಲ ಮಾರ್ಲ, ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷ ಸಬಿತಾ ಮಿಸ್ಕಿತ್‌, ಕಾರ್ಪೊರೇಟರ್‌ಗಳಾದ ರೂಪಾ ಡಿ. ಬಂಗೇರ, ಅಖೀಲ ಆಳ್ವ, ಮುಖ್ಯ ಸಚೇತಕ ಶಶಿಧರ ಹೆಗ್ಡೆ ಪ್ರಮುಖರಾದ ಉಮೇಶ ದಂಡೇಕೇರಿ, ಗಿರಿಧರ ಶೆಟ್ಟಿ, ಮೋಹನ್‌ ಶೆಟ್ಟಿ ಹಾಗೂ ಪಾಲಿಕೆಯ ಉಪಾಯುಕ್ತ ಲಿಂಗೇಗೌಡ, ಅಭಿಯಂತರರಾದ ರಘುಪಾಲ್‌, ಲಕ್ಷ್ಮಣ್‌ ಪೂಜಾರಿ, ಗುತ್ತಿಗೆದಾರ ಅಬ್ದುಲ್‌ ರೆಹಮಾನ್‌, ಕೆ.ಸಿ. ರಜಾಕ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next