Advertisement
ಒಂದು ಅಗಲವಾದ ಗಟ್ಟಿ ಪಿವಿಸಿ ಪೈಪ್‌ನ ಒಂದು ಬದಿಗೆ ಲೈಟರ್ ಕೂಡ್ರಿಸಿದ್ದಾರೆ. ಅದಕ್ಕೆ ಜೋಡಿಸುವಂತೆ ಇನ್ನೊಂದು ಕಡಿಮೆ ಅಗಲದ ಪೈಪ್ ತುಂಡು ಸಿದ್ಧಪಡಿಸಿದ್ದಾರೆ. ಮೊದಲು ಕಡಿಮೆ ಅಗಲದ ಪೈಪ್‌ಗೆ ಒಂದು ಪುಟ್ಟ ರದ್ದಿ ಕಾಗದವನ್ನು ಒತ್ತಿ ತುಂಬಬೇಕು. ನಂತರ ಇನ್ನೊಂದು ಕಾಗದವನ್ನು ಒದ್ದೆಮಾಡಿ ತುಂಬಿ, ಕೆಲವು ಚಿಕ್ಕಚಿಕ್ಕ ಕಲ್ಲುಗಳನ್ನು ಸೇರಿಸಿ, ಜೊತೆಗೆ ನೀಡಿದ ಕೋಲಿನಿಂದ ಗಟ್ಟಿಮಾಡಬೇಕು. ನಂತರ ಅಗಲದ ಪೈಪ್‌ಗೆ ಅವರು ನೀಡುವ ಸ್ಪ್ರೇ ಸಿಂಪಡಿಸಿ ಎರಡೂ ಕೊಳವೆಯನ್ನು ಜೋಡಿಸಬೇಕು. ನಂತರ ಮಂಗ ಇದ್ದ ಕಡೆ ಮುಖಮಾಡಿ ದೊಡ್ಡ ಪೈಪ್‌ನ ಹಿಂಬದಿಯ ಲೈಟರ್ ಅದುಮಿದಾಗ ದೊಡ್ಡ ಸಪ್ಪಳದೊಂದಿಗೆ ಕಾಗದದ ಚೂರುಗಳು ಹಾರಿ ತೂರಿಹೋದರೆ ಕಲ್ಲುಗಳು 150ಅಡಿ ಚಿಮ್ಮಿ ಮಂಗಗಳಿಗೆ ತಗಲುತ್ತದೆ. ಶಬ್ಧ ಮತ್ತು ಕಾಗದದ ಚೂರಿನ ಹಾರಾಟ ಮತ್ತು ಕಲ್ಲಿನ ಪೆಟ್ಟಿನಿಂದ ಮಂಗಗಳು ದಿಕ್ಕೆಟ್ಟು ಓಡಿ ಹೋಗುತ್ತದೆ.
1400ರೂಪಾಯಿಗಳಿಗೆ ಒಂದು ಗನ್, ಸ್ಪ್ರೇ ಜೊತೆ ಸಿಗುತ್ತದೆ. 350ಸಲ ಸ್ಪ್ರೇ ಪ್ರಯೋಗಿಸಬಹುದು. ನಂತರ ಸ್ಪ್ರೇ ತರಿಸಿಕೊಳ್ಳಬುದು. ಒಂದು ರೂ.ಗಿಂತ ಕಡಿಮೆ ವೆಚ್ಚದಲ್ಲಿ ಒಮ್ಮೆ ಮಂಗನನ್ನು ಬೆದರಿಸಬಹುದಾಗಿದೆ. ಸದ್ಯ ಈ ಉಪಕರಣ ಭಾರೀ ಬೇಡಿಕೆಯಲ್ಲಿದೆ. ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಹಲವು ಗಣ್ಯರು, ಮಠಾಧೀಶರು, ರೈತರು ಇದನ್ನು ಬಳಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊನ್ನಾವರದಲ್ಲಿ ನಡೆದ ಕೃಷಿ ಮೇಳ ಮತ್ತು ಮಲೆನಾಡು ಗಿಡ್ಡ ಹಬ್ಬದಲ್ಲಿ ಈ ಬಂದೂಕಿನ ಸಪ್ಪಳ, ಮಾರಾಟ ಜೋರಾಗಿತ್ತು. ಸಂಪರ್ಕ ಮೊ.9483246036 ಮತ್ತು 9448623696.
Related Articles
Advertisement