Advertisement
ಇದು ಭಾರತೀಯರು ಸೇರಿದಂತೆ ಸಾವಿರಾರು ಮಂದಿ ಟೆಕಿಗಳಿಗೆ ಅನುಕೂಲವಾಗಿ ಪರಿಣಮಿಸಲಿದೆ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸಂಗಾತಿಗಳಿಗೆ ಕೆಲಸ ಮಾಡಲು ಅನುವು ಮಾಡಿಕೊಡಲಾಗಿತ್ತು. ಇದಕ್ಕೆ ” ಸೇವ್ ಜಾಬ್ಸ್ ಇನ್ ಯುಎಸ್‌ಎ’ ಎಂಬ ಗುಂಪು ವಿರೋಧ ವ್ಯಕ್ತಪಡಿಸಿತ್ತು. ಜತೆಗೆ ಕೊಲಂಬಿಯಾ ಜಿಲ್ಲಾ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ವೀಸಾ ಹೊಂದಿರುವ ಟೆಕಿಗಳ ಸಂಗಾತಿ (ಪತ್ನಿ ಅಥವಾ ಪತಿ) ದೇಶದಲ್ಲಿ ಕೆಲಸ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗದ ಕೊರತೆ ಉಂಟಾಗುತ್ತದೆ ಎಂದು ಅದು ವಾದಿಸಿತ್ತು. ಜತೆಗೆ, ಆ ನಿಯಮವನ್ನು ರದ್ದು ಮಾಡುವಂತೆ ಕೋರಿತ್ತು. ಆದರೆ, ಈಗ ಕೋರ್ಟ್, ಆ ಅರ್ಜಿಯನ್ನೇ ವಜಾ ಮಾಡಿದೆ. Advertisement
ಟೆಕ್ಕಿಗಳ ಸಂಗಾತಿಗೂ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ
08:13 PM Mar 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.