ಇಸ್ಲಮಾಬಾದ್: ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಪಾಕಿಸ್ಥಾನದ ಮಾಜಿ ಆಟಗಾರ ನಾಸಿರ್ ಜಮ್ಶೆಡ್ ಅವರಿಗೆ 17 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಪಾಕಿಸ್ಥಾನ್ ಸೂಪರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಲ್ಲಿ ಜಮ್ಶೆಡ್ ಗೆ ಶಿಕ್ಷೆ ವಿಧಿಸಲಾಗಿದೆ. ರಾಷ್ಟ್ರೀಯ ಅಪರಾಧ ಸಂಸ್ಥೆ ಜಮ್ಶೆಡ್ ರನ್ನು ಬಂಧಿಸಿತ್ತು.
ನಾಸಿರ್ ಜಮ್ಶೆಡ್ ರೊಂದಿಗೆ ಬ್ರಿಟಿಷ್ ಪ್ರಜೆಗಳಾದ ಯೂಸುಫ್ ಅನ್ವರ್ ಮತ್ತು ಮೊಹಮ್ಮದ್ ಇಜಾಜ್ ರಿಗೂ ಶಿಕ್ಷೆ ವಿಧಿಸಲಾಗಿದೆ. ಅನ್ವರ್ ಗೆ 40 ತಿಂಗಳು, ಮತ್ತು ಇಜಾಜ್ ಗೆ 30 ತಿಂಗಳು ಜೈಲು ಶಿಕ್ಷೆಯಾಗಿದೆ.
33 ವರ್ಷದ ನಾಸಿರ್ ಜಮ್ಶೆಡ್ ರನ್ನು ಪಿಸಿಬಿ ಈಗಾಗಲೇ ಕ್ರಿಕೆಟ್ ನಿಂದ 10 ವರ್ಷದ ಮಟ್ಟಿಗೆ ನಿಷೇಧಿಸಿದೆ.
2018ರ ಫೆಬ್ರವರಿಯಲ್ಲಿ ನಡೆದಿದ್ದ ಪಿಎಸ್ ಎಲ್ ನ ಇಸ್ಲಮಬಾದ್ ಯುನೈಟೆಡ್ ಮತ್ತಯ ಪೇಶಾವರ ಝಾಲ್ಮಿ ನಡುವಿನ ಪಂದ್ಯದಲ್ಲಿ ಈ ಸ್ಪಾಟ್ ಫಿಕ್ಸಿಂಗ್ ನಡೆಸಲಾಗಿತ್ತು. ಮೂವರು ಆರೋಪಿಗಳು ಅದನ್ನು ಒಪ್ಪಿಕೊಂಡಿದ್ದಾರೆ.
ಪಾಕಿಸ್ಥಾನದ ಪರ ನಾಸಿರ್ ಜಮ್ಶೆಡ್ 48 ಏಕದಿನ ಮತ್ತು 18 ಟಿ20 ಪಂದ್ಯವನ್ನಾಡಿದ್ದಾರೆ.