Advertisement

ಕ್ರೀಡಾ ನೀತಿ ಶೀಘ್ರ ಅನುಷ್ಠಾನ: ವಂ|ಗೋಮ್‌

02:37 PM Dec 03, 2017 | Team Udayavani |

ಪುತ್ತೂರು: ಕ್ರೀಡಾ ನೀತಿ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ಕರಡು ಸಲ್ಲಿಸಲಾಗಿದೆ. ಇದು ಶೀಘ್ರ ಅನುಷ್ಠಾನಗೊಳ್ಳಲಿದ್ದು, ಮುಂದಿನ ಮಾರ್ಚ್‌ ಬಜೆಟ್‌ನಲ್ಲಿ ಕ್ರೀಡೆಗಾಗಿ ಹಣ ಬಿಡುಗಡೆ ಯಾಗುವ ಭರವಸೆ ಇದೆ ಎಂದು ಮೂಲ್ಕಿ ಇಮ್ಯಾ ಕ್ಯುಲೇಟ ಕನ್ಸೆಪ್ಷನ್‌ ಚರ್ಚ್‌ನ ಧರ್ಮ ಗುರು, ಸಂತ ಫಿಲೋಮಿನಾ ಕಾಲೇಜಿನ ವಿಶ್ರಾಂತಿ ಪ್ರಾಂಶುಪಾಲ ವಂ| ಫ್ರಾನ್ಸಿಸ್‌ ಕ್ಸೇವಿಯರ್‌ ಗೋಮ್ಸ್‌ ಹೇಳಿದರು. ಪುತ್ತೂರಿನ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಶನಿವಾರ ಆರಂಭವಾದ ಪದವಿಪೂರ್ವ ಕಾಲೇಜಿನ ರಾಜ್ಯಮಟ್ಟದ ಹಾಕಿ ಟೂರ್ನಮೆಂಟ್‌ ಉದ್ಘಾಟಿಸಿ ಮಾತನಾಡಿದರು.

Advertisement

ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಆರ್‌.
ತಿಮ್ಮಯ್ಯ ಅವರು ಫಿಲೋಮಿನಾ ಪ.ಪೂ. ಕಾಲೇಜಿನ ಕ್ರೀಡಾ ಧ್ವಜಾರೋಹಣಗೈದರು. ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಚೇಯರ್‌ಮ್ಯಾನ್‌ ಡಾ| ಜೆರಾಲ್ಡ್‌ ಸಂತೋಷ್‌ ಡಿ’ಸೋಜಾ ಅವರು ರಾಜ್ಯ ಪ.ಪೂ. ಶಿಕ್ಷಣ ಇಲಾಖೆಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ವಂ| ಫ್ರಾನ್ಸಿಸ್‌ ಕ್ಸೇವಿಯರ್‌ ಗೋಮ್ಸ್‌ ಅವರನ್ನು ಸಮ್ಮಾನಿಸಲಾಯಿತು.

ಮಾಯಿದೆ ದೇವುಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಆಲ್ಫ್ರೆಡ್ ಜಾನ್‌ ಪಿಂಟೋ, ಫಿಲೋಮಿನಾ ಪದವಿ
ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹಾ ಶುಭ ಹಾರೈಸಿದರು. 

ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಜಗಜೀವನ್‌ ದಾಸ್‌ ಭಂಡಾರಿ, ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೋ, ಪದವಿಪೂರ್ವ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ಪ್ರೇಮನಾಥ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕಿ ಸೌಮ್ಯಲತಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ನಾಡ ಗೀತೆ ಹಾಡಿದರು. ಕಾಲೇಜ್‌ ಪ್ರಾಂಶುಪಾಲ ವಂ| ವಿಜಯ್‌ ಲೋಬೋ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್‌ ಡಿ’ಸೋಜಾ ವಂದಿಸಿದರು. ಉಪನ್ಯಾಸಕಿ ಉಷಾ ಯಶ್ವಂತ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಪರೋಕ್ಷವಾಗಿ ಪ್ರಚಾರ
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಈಗಾಗಲೇ ಎರಡು ಬಾರಿ ಗೋಲು ಹೊಡೆದಿದ್ದೇನೆ.
ಮೂರನೇ ಗೋಲು ಹೊಡೆಯಲು ಸಿದ್ಧಳಾಗಿದ್ದೇನೆ. ಈ ಬಗ್ಗೆ ಫಾದರ್‌ ಈಗಾಗಲೇ ಮಾತನಾಡಿದ್ದು, ಇನ್ನೊಂದು ಗೋಲು ಈಡೇರಿಸಲು ಸಹಕಾರ ಕೇಳಿಕೊಂಡಿದ್ದಾರೆ ಎಂದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಮತ ಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next