ಪುತ್ತೂರು: ಪಡ್ಡಾಯೂರು ಓಂ ಫ್ರೆಂಡ್ಸ್ ಆಶ್ರಯದಲ್ಲಿ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ಹಿಂದೂ ಬಾಂಧವರಿಗಾಗಿ ಅಂತರ್ ಜಿಲ್ಲಾ ಮುಕ್ತ ಕಬಡ್ಡಿ ಪಂದ್ಯಾಟ ನೆಹರೂನಗರ ಬಳಿಯ ಪಡ್ಡಾಯೂರು ಮೈದಾನದಲ್ಲಿ ನಡೆಯಿತು. ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ
ವಾಗಲು ಕ್ರೀಡೆ ಹಾಗೂ ಯೋಗ ಸಹಕಾರಿ. ಶಕ್ತಿಯ ಜತೆಗೆ ಯುಕ್ತಿಯನ್ನು ನೀಡುತ್ತದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಪ್ರ. ಕಾರ್ಯ ದರ್ಶಿ ಕೇಶವ ಬಜತ್ತೂರು, ಉಪಾಧ್ಯಕ್ಷ ನವೀನ್ ಪಟ್ನೂರು, ತಾ.ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಬಿಜೆಪಿ ನಗರ ಮಂಡಲದ ಪ್ರ. ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ, ನಗರ ಮಹಿಳಾ ಮೋರ್ಚಾದ ಕಾರ್ಯದರ್ಶಿ ಗೌರಿ ಬನ್ನೂರು, ಯುವ ಮೋರ್ಚಾದ ಅಧ್ಯಕ್ಷ ಸುನೀಲ್ ದಡ್ಡು, ನಗರಸಭಾ ಸದಸ್ಯರಾದ ಯಶೋದಾ ಹರೀಶ್, ವನಿತಾ ಕೆ.ಟಿ., ನಂದನ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಸುದರ್ಶನ್, ಜಯರಾಮ ಪೂಜಾರಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸರ್ಫಿಂಗ್ ಕ್ರೀಡಾಪಟು ಸಿಂಚನ ಡಿ. ಗೌಡ ಪಂದ್ಯಾಟವನ್ನು ಉದ್ಘಾಟಿಸಿದರು. ಮಂಗಳೂರು ವಿವಿಯ ಶಟಲ್ ಬ್ಯಾಡ್ಮಿಂಟನ್ ತಂಡದ ನಾಯಕ ವರುಣ್ ಮೂವಪ್ಪು ಮುಖ್ಯ ಅತಿಥಿಯಾಗಿದ್ದರು. ಅರ್ಚಕ ಚಂದ್ರಶೇಖರ್ ಮಯ್ಯ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ವಿಮಲಾ ಸುರೇಶ್, ಮನೋಜ್, ಉಮೇಶ್ ಕೆಮ್ಮಾಯಿ, ವಿಶ್ವ ಕುಲಾಲ್, ಪ್ರಸಾದ್, ದಿನೇಶ್, ಲಕ್ಷ್ಮೀ ನಾಗೇಶ್ ಟೈಲರ್, ಜ್ಯೋತಿ ಪಡ್ಡಾಯೂರು, ಸಂತೋಷ್ ಪಡ್ಡಾಯೂರು, ವಿಜಯ ನೆಲ ಪ್ಪಾಲು ಅವರನ್ನು ಸಮ್ಮಾನಿಸಲಾಯಿತು. ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಓಂ ಫ್ರೆಂಡ್ಸ್‌ನ ಅಧ್ಯಕ್ಷ ಗಣೇಶ್ ಗೌಡ ಪಡ್ಡಾಯೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಗಿರೀಶ್ ಪಡ್ಡಾಯೂರು ವಂದಿಸಿದರು. ಲಿಟ್ಲ ಪ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, ಕಬಡ್ಡಿ ಪಂದ್ಯಾಟ ನಡೆಯಿತು.