Advertisement

ಪಿ ವಿ ಸಿಂಧುಗೆ ಪದ್ಮಭೂಷಣ: ಕ್ರೀಡಾ ಸಚಿವಾಲಯದ ಶಿಫಾರಸು

12:11 PM Sep 25, 2017 | udayavani editorial |

ಹೊಸದಿಲ್ಲಿ : ಒಲಿಂಪಿಕ್‌ ರಜತ ಪದಕ ವಿಜೇತೆಯಾಗಿರುವ ಶಟ್ಲರ್‌ ಪಿ ವಿ ಸಿಂಧು ಅವರ ಹೆಸರನ್ನು ಕ್ರೀಡಾ ಸಚಿವಾಲಯವು ದೇಶದ ಮೂರನೇ ಅತ್ಯುನ್ನತ ಪದ್ಮ ಭೂಷಣ ಪೌರ ಪ್ರಶಸ್ತಿಗೆ ಶಿಫಾರಸು ಮಾಡಿದೆ. 

Advertisement

ಸಿಂಧು ಅವರು ವಿಶ್ವ ಶಟಲ್‌ ಚಾಂಪ್ಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅಲ್ಲಿಯ ಬಳಿಕ ಹಿಂದಿರುಗಿ ನೋಡದ ಸಿಂಧು ಅವರು ಕಳೆದ ವರ್ಷ ರಯೋ ಗೇಮ್ಸ್‌ನಲ್ಲಿ ರಜತ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಳು ಎನಿಸಿಕೊಂಡಿದ್ದಾರೆ.

22ರ ಹರೆಯದ ಹೈದರಾಬಾದಿನ ಸಿಂಧು ಅವರು 2016 ಚೀನ ಓಪನ್‌ ಸೂಪರ್‌ ಸೀರಿಸ್‌ ಪ್ರೀಮಿಯರ್‌, ಇಂಡಿಯಾ ಓಪನ್‌ ಸೂಪರ್‌ ಸೀರೀಸ್‌ ಗೆದ್ದುಕೊಂಡಿದ್ದಾರೆ. ಕಳೆದ ತಿಂಗಳಲ್ಲಿ  ಗ್ಲಾಸ್‌ಗೊà ವಿಶ್ವ ಚಾಂಪ್ಯನ್‌ಶಿಪ್‌ನಲ್ಲಿ ಐತಿಹಾಸಿಕ ರಜತ ಪದಕವನ್ನು ಪಡೆದಿದ್ದ ಸಿಂಧು, ಈ ತಿಂಗಳಲ್ಲಿ ನಡೆದಿದ್ದ ಕೊರಿಯ ಓಪನ್‌ ಸೂಪರ್‌ ಸೀರೀಸ್‌ ಗೆದ್ದುಕೊಂಡು ಅಮೋಘ ಸಾಧನೆಯನ್ನು ದಾಖಲಿಸಿದ್ದಾರೆ. 

ಮೂರು ಬಾರಿಯ ಮಕಾವು ಓಪನ್‌ ಚಾಂಪ್ಯನ್‌ ಆಗಿರುವ ಸಿಂಧು ಅವರು ಈ ವರ್ಷ ಲಕ್ನೋದಲ್ಲಿ ನಡೆದಿದ್ದ ಸಯ್ಯದ್‌ ಮೋದಿ ಗ್ರ್ಯಾನ್‌ ಪ್ರೀ ಗೋಲ್ಡ್‌ ಪ್ರಶಸ್ತಿಯನ್ನೂ ಗೆದುದಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next