Advertisement

Bajrang Punia ಆರ್ಥಿಕ ನೆರವಿಗೆ ಕ್ರೀಡಾ ಸಚಿವಾಲಯ ಒಪ್ಪಿಗೆ

11:20 PM Mar 26, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಲಭಿಸದೆ ಹೋದರೂ ಕುಸ್ತಿಪಟು ಬಜರಂಗ್‌ ಪೂನಿಯ ಅವರಿಗೆ ಆರ್ಥಿಕ ನೆರವು ನೀಡಲು ಕ್ರೀಡಾ ಸಚಿವಾಲಯ ಒಪ್ಪಿಗೆ ನೀಡಿದೆ. ಆರ್ಥಿಕ ನೆರವಿನ ಜತೆಗೆ ತನ್ನ “ಸ್ಟ್ರೆಂತ್‌ ಆ್ಯಂಡ್‌ ಕಂಡೀಶನಿಂಗ್‌’ ತರಬೇತುದಾರ ಖಾಜಿ ಕಿರಣ್‌ ಮುಸ್ತಫಾ ಹಸನ್‌ ಅವರ ಅವಧಿಯನ್ನು ಹೆಚ್ಚಿಸುವಂತೆ ಬಜರಂಗ್‌ ಕೋರಿದ್ದರು. ಇದಕ್ಕೂ ಸಚಿವಾಲಯ ಅನುಮೋದನೆ ನೀಡಿದೆ.

Advertisement

ಭಾರತೀಯ ಕುಸ್ತಿ ಪ್ರಾಧಿಕಾರದ (ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ಸುದೀರ್ಘ‌ ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಬಜರಂಗ್‌ ಪೂನಿಯ ಕೂಡ ಒಬ್ಬರಾಗಿದ್ದರು.

ಮುಂದಿನ ತಿಂಗಳು ನಡೆಯಲಿರುವ ಏಷ್ಯನ್‌ ಚಾಂಪಿಯನ್‌ಶಿಪ್‌ ಮತ್ತು ಏಷ್ಯನ್‌ ಒಲಿಂಪಿಕ್‌ ಕ್ವಾಲಿಫೈಯರ್‌ಗಾಗಿ ತಂಡವನ್ನು ಆರಿಸಲು ನಡೆಸಲಾಗಿದ್ದ 65 ಕೆ.ಜಿ. ವಿಭಾಗದ ಟ್ರಯಲ್ಸ್‌ನಲ್ಲಿ ಅಗ್ರ 4 ಸ್ಥಾನ ಪಡೆಯಲು ಕೂಡ ಬಜರಂಗ್‌ ವಿಫ‌ಲರಾಗಿದ್ದರು. ಆದರೂ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ಗೆದ್ದ ಬಜರಂಗ್‌ಗೆ ಆರ್ಥಿಕ ಸಹಾಯ ನೀಡಲು ಕ್ರೀಡಾ ಸಚಿವಾಲಯ ಒಪ್ಪಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next