Advertisement
ಬೆಳಗ್ಗೆ ದಿ| ಕೈಕುರೆ ರಾಮಣ್ಣ ಗೌಡ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಕ್ರೀಡಾ ದೀಪ ಪ್ರಜ್ವಲನೆಗೊಳಿಸಿ, ಆಶೀರ್ವಚನ ನೀಡಿದರು. ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಕ್ರೀಡಾ ಮನೋವೃತ್ತಿ, ಮನೋಧರ್ಮ ಬೆಳೆಸಬೇಕು. ಮಕ್ಕಳಲ್ಲಿ ಕ್ರೀಡಾಸ್ಫೂರ್ತಿ ತುಂಬಬೇಕೆಂದು ನುಡಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಗುರುವಿನ ಮಾರ್ಗದರ್ಶನ ದೊರೆತಿರುವುದರಿಂದ ರಾಜ್ಯದಲ್ಲಿಯೇ ಗೌಡ ಸಮಾಜ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದ್ದು ಇತರ ಸಮಾಜಗಳೂ ಒಪ್ಪಿಕೊಳ್ಳುವಂತಾಗಿದೆ. ಗುರುವಿನ ಮಾರ್ಗದರ್ಶನದಿಂದ ಸಮಾಜ ಸನ್ನಡತೆ, ಸ್ವಾಭಿಮಾನದಿಂದ ಜೀವನ ನಡೆಸುವಂತಾಗಿದೆ. ಮಕ್ಕಳಿಗೆ ಸಂಸ್ಕಾರ ಕೊಡಿಸುವ ಕೆಲಸ ಸಂಘಟನೆಯಿಂದ ಆಗಬೇಕು ಎಂದು ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮುಂತಾದವರು ದೇಶಕ್ಕೆ ನೀಡಿದ ಕೊಡುಗೆಯಿಂದಲೇ ಗೌಡ ಸಮಾಜವೂ ಮುಂದೆ ಬಂದಿದೆ. ಆರ್ಥಿಕವಾಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ಮುಂದುವರಿಯುತ್ತಿದೆ ಎಂದರು.
Related Articles
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಅಧ್ಯಕ್ಷತೆ ವಹಿಸಿ, ಸಂಸ್ಕಾರ, ಸಂಸ್ಕೃತಿಗೆ ಒಳಪಟ್ಟದ್ದು ಗೌಡ ಸಮಾಜ. ಸಂಸ್ಕೃತಿ ಸಮಾಜದ ಆತ್ಮವಿದ್ದಂತೆ. ಮನೆ, ಸಮಾಜದಿಂದ ಸಂಸ್ಕಾರ ಸಿಗಬೇಕು. ಕ್ರೀಡೆ ಮತ್ತು ಯೋಗ ನಾಣ್ಯದ ಎರಡು ಮುಖಗಳಿದ್ದಂತೆ. ಕ್ರೀಡೆ ಮೂಲಕ ಸಮಾಜದ ಒಗ್ಗಟ್ಟು ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದರು.
Advertisement
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಮೋಹನ ಗೌಡ ಇಡ್ಯಡ್ಕ, ಹೆಬ್ರಿ ಎಸ್.ಆರ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ ಎನ್., ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಚಿದಾನಂದ ಬೈಲಾಡಿ, ಸದರ್ನ್ ರೈಲ್ವೇ ಅಧಿಕಾರಿ ಜಯಪ್ರಕಾಶ್ ನೆಟ್ಟಣ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪಿಡ್ಲು$Âಡಿ ಸಹಾಯಕ ಎಂಜಿನಿಯರ್ ಪ್ರಮೋದ್ ಕುಮಾರ್, ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ, ತಾಲೂಕು ಕ್ರೀಡಾ ಕಾರ್ಯದರ್ಶಿ ಮಾಧವ ಗೌಡ ಪೆರಿಯತ್ತೋಡಿ, ನೆಲ್ಯಾಡಿ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಕುದೊRàಳಿ, ಕಾರ್ಯದರ್ಶಿ ಮಹೇಶ್ ಡೆಬ್ಬೇಲಿ, ಕ್ರೀಡಾ ಉಸ್ತುವಾರಿ ಸುಂದರ ಗೌಡ ಅತ್ರಿಜಾಲು, ಕ್ರೀಡಾ ಕಾರ್ಯದರ್ಶಿ ತೀರ್ಥೇಶ್ವರ ಉರ್ಮಾನು, ಕ್ರೀಡಾ ಸಂಯೋಜಕರಾದ ನಾಗೇಶ್ ನಳಿಯಾರು, ಪ್ರವೀಣ್ ಕುಮಾರ್ ದೋಂತಿಲ, ರವಿಚಂದ್ರ ಹೊಸವೊಕ್ಲು ಉಪಸ್ಥಿತರಿದ್ದರು.
ಕ್ರೀಡಾ ಸಂಯೋಜಕ ರಾಧಾಕೃಷ್ಣ ಕೆರ್ನಡ್ಕ ಸ್ವಾಗತಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ನಂದಿಲ ವಂದಿಸಿದರು. ಶಿಕ್ಷಕ ಗುಡ್ಡಪ್ಪ ಗೌಡ ಬಲ್ಯ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಜ್ಯೋತಿನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಆಗಮಿಸಿದ ಕ್ರೀಡಾ ಜ್ಯೋತಿಯ ಮೂಲಕ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ದೀಪಪ್ರಜ್ವಲನೆ ಮಾಡಿದರು. ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಲೋಲಾಕ್ಷಿ, ಪುಷ್ಪಲತಾ, ಅನಘಾ ಕೆ.ಎನ್., ಅನಘಾ ಕೆ., ಅನುಶ್ರೀ, ಸುಶಾನ್ ಕ್ರೀಡಾಜ್ಯೋತಿ ತಂದರು. ಕ್ರೀಡಾಪಟು ಸುಕನ್ಯಾ ಗೌಡ ಕುಡ್ತಾಜೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ನಗದು ಬಹುಮಾನ ಘೋಷಿಸಿದ ಸ್ವಾಮೀಜಿ
ಕ್ರೀಡಾಕೂಟದಲ್ಲಿ ಪ್ರಥಮ ವಿಜೇತ ವಲಯಕ್ಕೆ 5 ಸಾವಿರ ರೂ., ದ್ವಿತೀಯ ವಲಯಕ್ಕೆ 2 ಸಾವಿರ ರೂ.ಹಾಗೂ ತೃತೀಯ ವಿಜೇತ ವಲಯಕ್ಕೆ 1,500 ರೂ. ನಗದು ಬಹುಮಾನವನ್ನು ಆದಿಚುಂಚನಗಿರಿ ಮಠದ ವತಿಯಿಂದ ನೀಡುವುದಾಗಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಘೋಷಿಸಿದರು. ಸಾಧಕರಿಗೆ ಸಮ್ಮಾನ
ನಿವೃತ್ತ ಯೋಧರಾದ ಚಿದಾನಂದ ಇಚ್ಲಂಪಾಡಿ, ಗಿರಿಯಪ್ಪ ಕೊಂಬ್ಯಾನ, ದೇವಪ್ಪ ಕೌಕ್ರಾಡಿ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಎ.ವಿ. ನಾರಾಯಣ, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಲೋಲಾಕ್ಷಿ, ಸಮಾಜ ಸೇವಕ ನೋಣಯ್ಯ ಗೌಡ ಡೆಬ್ಬೇಲಿ, ಗುಮ್ಮಣ್ಣ ಗೌಡ ಪುಚ್ಚೇರಿ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನೆಲ್ಯಾಡಿ ವಲಯ ಮೇಲ್ವಿಚಾರಕ ವಾಸುದೇವ ಗೌಡ, ರಾಷ್ಟ್ರಮಟ್ಟದ ಕರಾಟೆ ಪಟು ಮನ್ವಿತ್, ಶಾಸಕ ಸಂಜೀವ ಮಠಂದೂರು, ವಿಟ್ಲ ಸರಕಾರಿ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ, ಪಿಎಚ್‌ಡಿ ಪದವೀಧರ ರಾಮಚಂದ್ರ ಗೌಡ, ನಿರೂಪಕ ಸುರೇಶ್ ಪಡಿಪಂಡ ಇವರನ್ನು ಸಮ್ಮಾನಿಸಲಾಯಿತು.