ಕುದೂರು: ಕಠಿಣ ಪರಿಶ್ರಮ, ಸಂಕಲ್ಪ ಮತ್ತು ಅರ್ಪಣಾ ಮನೋಭಾವ ಯಾವುದೇ ಕ್ರೀಡೆಯನ್ನು ಉನ್ನತ ಸಾಧನೆಗೆ ಕೊಂಡೊಯ್ಯಬಲ್ಲದು. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿ ಶ್ರಮದ ಮಹತ್ವ ಅರಿತು ಸಂಕಲ್ಪ ಮಾಡುತ್ತಾ ಸಂಪೂರ್ಣವಾಗಿ ತೊಡಗಿಸಿಕೊಂಡು ಕ್ರೀಡಾ ಚಟುವಟಿಕೆಯಲ್ಲಿ ಅರ್ಪಣಾ ಮನೋಭಾವ ಹೊಂದಬೇಕೆಂದು ತಿಳಿಸಿದರು.
ನೀಲಮ್ಮ ಕುದೂರು ಮತ್ತು ಕೆಎ ಸತ್ಯನಾರಾಯಣಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುದೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ 2023 – 24 ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡೆ ನಾಯಕತ್ವದ ಗುಣವನ್ನು ವಿದ್ಯಾರ್ಥಿಗಳಲ್ಲಿ ಸಹಭಾಗಿತ್ವದ ತತ್ವವನ್ನು, ಪರಸ್ಪರ ಕ್ಷೇಮದ ಆದರ್ಶದ ನೆಲೆಯನ್ನು, ಸ್ಪೂರ್ತಿಯ ಚಿಲುಮೆಯನ್ನು, ವ್ಯಕ್ತಿತ್ವ ವಿಕಸಿತ ಮನಸ್ಸನ್ನು ತುಂಬುವಲ್ಲಿ ಬಹು ಮುಖ್ಯ ಪಾತ್ರವನ್ನು ಹೊಂದುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಇಂದು ಅತಿ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಎಸ್. ಕುಸುಮ ಹೊನ್ನರಾಜು ಇಂದಿನ ಈಗ ವೇಗವಾಗಿ ಬೆಳೆಯುತ್ತಿರುವ ಜೊತೆಯಲ್ಲಿ ಕ್ರೀಡೆಯು ಅಷ್ಟೇ ಉನ್ನತ ಮಟ್ಟದ ವೈಜ್ಞಾನಿಕ ತಂತ್ರಜ್ಞಾನ ಹೊಂದುತ್ತಿರುವುದು ಬಹಳ ಸಂತೋಷದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷರಾದ ಡಾ.ನಾಗೇಂದ್ರ, ಗಂ. ದಯಾನಂದ, ಕುದೂರಿನ ಮುಖಂಡ ಚಂದ್ರಶೇಖರ್, ಬೆಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು. ಡಾ. ಮುರಳಿ ಕೂಡ್ಲೂರು ಕಾರ್ಯಕ್ರಮ ನಿರ್ವಹಿಸಿ, ಕೃಷ್ಣವೇಣಿ ಸ್ವಾಗತಿಸಿದರು.