ಕ್ರೀಡಾ ಶಿಕ್ಷಣದಿಂದ ವಿದ್ಯಾರ್ಥಿಗಳ ಮಾನಸಿಕ ಸದೃಢತೆ ಹೆಚ್ಚುತ್ತದೆ. ಅಲ್ಲದೆ, ಆರೋಗ್ಯವಂತರಾಗಿರಲು ಕ್ರೀಡಾ ಶಿಕ್ಷಣದ ಅಗತ್ಯವಿದೆ. ಶಾಲೆಗಳಲ್ಲಿ ಪಾಠದ ಜತೆ ಪಠ್ಯೇತರ ಚಟುವಟಿಕೆ ಕಲಿಸುವುದರಿಂದ ವಿದ್ಯಾರ್ಥಿಗಳ ದೃಷ್ಟಿ ಒಂದೇ ಕಡೆಗೆ ಇರುವುದಿಲ್ಲ.
Advertisement
Q ಕ್ರೀಡಾ ಚಟುವಟಿಕೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ಶೈಕ್ಷಣಿಕ ಸಾಧನೆ ಮೇಲೆ ಪರಿಣಾಮ ಬೀರುವುದಿಲ್ಲವೇ?ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮಕ್ಕಳ ಶಿಕ್ಷಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕ್ರೀಡೆಯಲ್ಲಿ ಮುಂದಿದ್ದ ಹೆಚ್ಚಿನ ಮಂದಿ ಓದಿನಲ್ಲಿಯೂ ಮುಂದಿರುತ್ತಾರೆ. ಪಾಠದ ಜತೆ ಆಟವನ್ನು ಸಮತೋಲನವಾಗಿ ಕೊಂಡೊಯ್ಯಬೇಕಾದ ಗುಣ ವಿದ್ಯಾರ್ಥಿಗಳಲ್ಲಿರಬೇಕು.
ಖಂಡಿತವಾಗಿಯೂ ಇದೆ. ಸರಕಾರ ಶಾಲಾ- ಕಾಲೇಜುಗಳಲ್ಲಿ ಕ್ರೀಡಾ ನೀತಿ ಅಳವಡಿಸಿದರೆ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಲು ಪೋಷಕರು ಕೂಡ ಮುಂದೆ ಬರಬಹುದು. ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿಯೂ ಕ್ರೀಡಾನೀತಿಯ ಆವಶ್ಯಕತೆ ಇದೆ. ಕ್ರೀಡಾ ನೀತಿ ರಚನೆಯಾದರೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭಿಸುತ್ತದೆ. ಹೊಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಇದು ಸಹಕಾರಿ. Q ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡೆಯತ್ತ ಒತ್ತು ಕೊಡುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎನಿಸುವುದಿಲ್ಲವೇ?
ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ಕ್ರೀಡೆಯತ್ತ ಆಸಕ್ತಿ ಸ್ವಲ್ಪ ಕಡಿಮೆಯಾಗಿದೆ. ಕೆಲವೊಂದು ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಶಾಲಾ-ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ಪ್ರೋತ್ಸಾಹದ ಆವಶ್ಯಕತೆ ಇದೆ.
Related Articles
ದೈಹಿಕವಾಗಿ ದುರ್ಬಲರಾಗಿದ್ದರವರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಳಿಕ ಸದೃಢರಾದ ಅನೇಕ ಉದಾಹರಣೆಗಳಿವೆ. ಅಲ್ಲದೆ, ಪ್ರತೀ ದಿನ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮಕ್ಕಳಲ್ಲಿ ಚುರುಕುತನ ಹೆಚ್ಚಾಗಿ ಬೆಳೆಯುತ್ತದೆ. ಕೆಲವೊಂದು ರೋಗಗಳನ್ನು ಗುಣಪಡಿಸುವ ಶಕ್ತಿ ಕ್ರೀಡೆಗಳಿಗಿದೆ.
Advertisement
ನವೀನ್ ಭಟ್ ಇಳಂತಿಲ