ಪಡುಪಣಂಬೂರು: ಕ್ರೀಡೆಗೆ ಜಾತಿ, ಧರ್ಮದ ಕಟ್ಟುಪಾಡುಗಳಿಲ್ಲ, ಪ್ರತಿಭಾವಂತರಿಗೆ ಹಾಗೂ ಕ್ರೀಡಾ ಕ್ಷಮತೆಯನ್ನು ಹೊಂದಿರುವವರಿಗೆ ಫಲಿತಾಂಶವೇ ಉತ್ತರ ನೀಡುತ್ತದೆ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹೇಳಿದರು.
ಹಳೆಯಂಗಡಿ ಬಳಿಯ ಪಡುಪಣಂಬೂರು ಕದಿಕೆ ಫ್ರೆಂಡ್ಸ್‌ನ ಸಂಯೋಜನೆಯಲ್ಲಿ ನಡೆದ ಗ್ರಾಮೀಣ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಹುಮಾನವನ್ನು ವಿತರಿಸಿದರು.
ಕದಿಕೆಯ ಎಸ್.ಹೆಚ್. ಅಬ್ದುಲ್ ರಝಾಕ್ ಅಧ್ಯಕ್ಷತೆಯನ್ನು ವಹಿಸಿ, ಸಾಮಾಜಿಕ, ಕ್ರೀಡೆ ಹಾಗೂ ಶೈಕ್ಷಣಿಕ ಸಂಘಟನೆಯಲ್ಲಿ ತೊಡಗಿಕೊಂಡಿರುವ ಸಾಹುಲ್ ಹಮೀದ್‌ರಿಗೆ ಅರ್ಹವಾಗಿಯೇ ಉತ್ತಮ ಅವಕಾಶ ಸಿಕ್ಕಿದೆ. ಅವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಕೆ.ಸಾಹುಲ್ ಹಮೀದ್ ಕದಿಕೆ ಅವರನ್ನು ಸಂಸ್ಥೆಯ
ವತಿಯಿಂದ ಸಮ್ಮಾನಿಸಲಾಯಿತು.
ಪಡುಪಣಂಬೂರು ಗ್ರಾ.ಪಂ. ಸದಸ್ಯ ಉಮೇಶ್ ಪೂಜಾರಿ, ಕದಿಕೆ ಫ್ರೆಂಡ್ಸ್‌ನ ಗೌರವ ಅಧ್ಯಕ್ಷ ಅಬ್ದುಲ್ ಖಾದರ್ ಕೋಡಿಕಲ್, ಅಧ್ಯಕ್ಷ ಸಫ್ರಾಜ್ ದುಬಾಯಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ನಾಗೇಂದ್ರ ಕುಮಾರ್, ಕದಿಕೆ ಜುಮ್ಮಾ ಮಸೀದಿ ಉಪಾಧ್ಯಕ್ಷ ಮೊದಿನ್, ಕಾರ್ಯದರ್ಶಿ ಅಬ್ದುಲ್ ರಜಾಕ್, ಕೆ.ಮೊಹಮ್ಮದ್, ಅಬ್ದುಲ್ ಕರೀಮ್, ಶಶಿಕಾಂತ್ ಶೆಟ್ಟಿ, ಕಬೀರ್, ಸಫಾನ್, ಮುಸ್ತಾಫ, ಜಮಾಲುದ್ದಿನ್, ಅಬೂಬಕ್ಕರ್ ಸಿದೀಕ್ ಉಪಸ್ಥಿತರಿದ್ದರು.ಎಸ್.ಎಚ್.ಅಬ್ದುಲ್ ರಜಾಕ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಫಲಿತಾಂಶ
ಫ್ರೆಂಡ್ಸ್ ಇಂದಿರಾನಗರ (ಪ್ರ), ಶ್ರೀ ಸಾಯಿ ಚೆಕ್‌ಪೋಸ್ಟ್ ಮುಕ್ಕ (ದ್ವಿ), ಅಬ್ದುಲ್ ಅಜೀಜ್ (ಉತ್ತಮ ದಾಂಡಿಗ), ಸಚಿನ್
(ಉತ್ತಮ ಎಸೆತಗಾರ), ಶಬೀರ್ (ಸರಣಿ ಶ್ರೇಷ್ಠ ಮತ್ತು ಪಂದ್ಯಶ್ರೇಷ್ಠ) ಪ್ರಶಸ್ತಿಯನ್ನು ಪಡೆದಿದ್ದಾರೆ.