ಮೈಸೂರು: ಕ್ರೀಡೆ ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಅಂಶ. ನಾನು ಕ್ರೀಡೆಯಿಂದಲೇ ಬದುಕು ಕಟ್ಟಿಕೊಂಡಿದ್ದೇನೆ. ಮಕ್ಕಳು ಓದಿನ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಂಡರೆ ಆರೋಗ್ಯ, ದೈಹಿಕ ಸದೃಢತೆ ಕಾಪಾಡಿಕೊಳ್ಳ ಬಹುದು ಎಂದು ಅಂತಾರಾಷ್ಟ್ರೀಯ ಅಥ್ಲೀಟ್ ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಹರಿ ವಿದ್ಯಾಲಯದ ವತಿಯಿಂದ ಅಲ ಯನ್ಸ್, ಡಿಕ್ಯಾತಲಾನ್, ಕಾಮಾಕ್ಷಿ ಆಸ್ಪತ್ರೆ, ರ್ಟಾಕ್ಯೂ, ಶಿವ ಕೇಟರರ್ಸ್ ಸಹಯೋಗದಲ್ಲಿ 15ನೇ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ “ವಿದ್ಯಾರ್ಥಿ ರನ್’ ಮ್ಯಾರಥಾನ್‌ನಲ್ಲಿ ಮಾತನಾಡಿದರು.
ಮಕ್ಕಳಿಗೆ ಪ್ರೋತ್ಸಾಹಿಸಿ: ವಿದ್ಯಾರ್ಥಿ ದೆಸೆಯಲ್ಲಿ ಓದಿನ ಜೊತೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಸಹ ಬಹಳ ಮುಖ್ಯ. ಈ ದಿನದ ಕಾರ್ಯ ಕ್ರಮ ದಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಸೇರಿರುವುದನ್ನು ನೋಡಿದರೆ ಸಂತಸವಾಗುತ್ತದೆ. ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಉತ್ತೇ ಜಿಸಬೇಕು. ಕೆಲವರು ಅದರಿಂದಲೇ ಬದುಕು ರೂಪಿಸಿಕೊಳ್ಳುತ್ತಾರೆ, ಸಾಧನೆ ಮಾಡುತ್ತಾರೆ. ಅದ ರಲ್ಲಿ ದೈಹಿಕ ಶಿಕ್ಷಕರು ಹಾಗೂ ಪೋಷಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳು ಪೂರಕ: ಸೇಫ್ ವ್ಹೀಲ್ಸ್ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಮಾತ್ರವಲ್ಲದೆ ಕ್ರೀಡೆ ಯಲ್ಲೂ ತೊಡಗಿಸಿಕೊಳ್ಳಬೇಕು. ಮೈಸೂರಿನಲ್ಲಿ ಶಾಲೆಯೊಂದರ ವತಿಯಿಂದ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಒಳ್ಳೆಯ ವಿಚಾರ. ಈಗಿನ ಮಕ್ಕಳು ಬಹುಪಾಲು ಆನ್‌ಲೈನ್ ಗೈಮ್‌ಗಳಲ್ಲಿ ಸಮಯ ಕಳೆಯುತ್ತಾರೆ. ಅವರಿಗೆ ದೈಹಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದು ಅಭಿಪ್ರಾಯಪಟ್ಟರು.
350 ಮಂದಿ ಮ್ಯಾರಥಾನ್‌ನಲ್ಲಿ ಭಾಗಿ: ಹರಿ ವಿದ್ಯಾಲಯದ ಅಧ್ಯಕ್ಷ ಶ್ರೀನಿವಾಸ ಹೊಸಮನೆ ಮಾತನಾಡಿ, ವಿದ್ಯಾರ್ಥಿ ರನ್ ಅನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈ ಬಾರಿ ಬಂದಿರುವ ಪ್ರತಿಕ್ರಿಯೆ ನೋಡಿ ನಮಗೆ ಬಹಳ ಸಂತಸವಾಗಿದೆ. ಸುಮಾರು 350 ಮಂದಿ ಮ್ಯಾರ ಥಾನ್‌ನಲ್ಲಿ ಭಾಗಿಯಾಗಿರುವುದನ್ನು ನೋಡಿ ಖುಷಿಯಾಗಿದೆ. ಇನ್ನು ಮುಂದೆ ಪ್ರತಿವರ್ಷ ಈ ಕಾರ್ಯಕ್ರಮ ಮಾಡುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು. 350 ಜನರು ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದರು.
ಹರಿ ವಿದ್ಯಾಲಯದಿಂದ ಆರಂಭವಾದ ಮ್ಯಾರಥಾನ್ ನಾಲ್ಕು ವಸತಿ ಬಡಾವಣೆಗಳನ್ನು ದಾಟಿ ಮತ್ತೆ ಹರಿ ವಿದ್ಯಾಲಯಕ್ಕೆ ಬಂದು ತಲುಪಿತು. ಸದಸ್ಯರಾದ ಎಚ್.ಆರ್.ಭಗವಾನ್, ನಿರ್ದೇ ಶಕರಾದ ಶ್ರೀ ಕೆ.ವಿ.ಸತ್ಯನ್, ಪ್ರಾಂಶುಪಾಲ ರಾದ ಡಾ.ಎಸ್.ಭಾರತಿ ಶಂಕರ್, ಆಡಳಿತ ಮಂಡಳಿ ಸದ ಸ್ಯರು, ಶಿಕ್ಷಕರು, ಸುಮಾರು 20 ಶಾಲೆಗಳ ವಿದ್ಯಾರ್ಥಿಗಳು, ಅವರ ಪೋಷಕರು ಹಾಜರಿದ್ದರು.