Advertisement

ಒಲಿಂಪಿಕ್ಸ್‌ ಬಳಿಕವೇ ಕ್ರೀಡಾ ಪ್ರಶಸ್ತಿಗೆ ಆಯ್ಕೆ

11:38 PM Jul 12, 2021 | Team Udayavani |

ಹೊಸದಿಲ್ಲಿ : ಪ್ರಸಕ್ತ ಸಾಲಿನ ರಾಷ್ಟ್ರೀಯ ಕ್ರೀಡಾ ಪುರಸ್ಕಾರಕ್ಕೆ ಈಗಾಗಲೇ ಬಹಳಷ್ಟು ಮಂದಿಯ ಹೆಸರನ್ನು ಸೂಚಿಸಲಾಗಿದೆ. ಖೇಲ್‌ರತ್ನ, ಅರ್ಜುನ, ದ್ರೋಣಾಚಾರ್ಯ ಮೊದಲಾದ ಪ್ರಶಸ್ತಿಗಳಿಗೆ ಅನೇಕ ಕ್ರೀಡಾ ಸಾಧಕರ ಹೆಸರು ನಾಮ ನಿರ್ದೇಶನಗೊಂಡಿದೆ. ಆದರೆ ಪ್ರಶಸ್ತಿಯ ಆಯ್ಕೆಗೆ ಈ ಬಾರಿಯ ಒಲಿಂಪಿಕ್ಸ್‌ ಸಾಧನೆಯನ್ನೂ ಮಾನದಂಡವಾಗಿ ಬಳಸಿಕೊಳ್ಳಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಹೀಗಾಗಿ ಟೋಕಿಯೊ ಒಲಿಂಪಿಕ್ಸ್‌ ಬಳಿಕವೇ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದೆ.

Advertisement

ಕ್ರೀಡಾ ಪ್ರಶಸ್ತಿಯನ್ನು ರಾಷ್ಟ್ರೀಯ ಕ್ರೀಡಾದಿನವಾದ ಆ. 29ರಂದು ನೀಡಲಾಗುವುದು. ಟೋಕಿಯೊ ಒಲಿಂಪಿಕ್ಸ್‌ ಜು. 23ರಿಂದ ಆ. 8ರ ತನಕ ನಡೆಯುವುದರಿಂದ ಕ್ರೀಡಾ ಪಟುಗಳ ಆಯ್ಕೆಗೆ ಸಾಕಷ್ಟು ಕಾಲಾವಕಾಶ ಸಿಗಲಿದೆ.

ವಿಳಂಬ ಸಾಧ್ಯತೆ
“ಸದ್ಯಕ್ಕೆ ನಾಮ ನಿರ್ದೇಶನ ಪ್ರಕ್ರಿಯೆಯ ಅಂತಿಮ ದಿನಾಂಕ ಮುಗಿದಿದೆ. ಸಾಕಷ್ಟು ಹೆಸರುಗಳು ನಮ್ಮ ಕೈ ಸೇರಿವೆ. ಆದರೆ ಒಲಿಂಪಿಕ್ಸ್‌ ಪದಕ ವಿಜೇತರನ್ನೂ ಆಯ್ಕೆಗೆ ಪರಿಗಣಿಸಲು ಕಳೆದ ಸಭೆಯಲ್ಲಿ ನಿರ್ಧ ರಿಸಲಾಗಿದೆ. ಒಲಿಂಪಿಕ್ಸ್‌ ಮುಗಿದು 10 ದಿನಗಳ ಒಳಗೆ ಆಯ್ಕೆ ಅಂತಿಮಗೊಂಡರೆ ಆ. 29ರಂದೇ ಪ್ರಶಸ್ತಿ ನೀಡಲಾಗುವುದು. ಇಲ್ಲವಾದರೆ ಕೆಲವು ದಿನ ವಿಳಂಬ ವಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next