ನಾರಾಯಣಪುರ: ಆರೋಗ್ಯಕರ ಜೀವನ ಹಾಗೂ ದೈಹಿಕ, ಮಾನಸಿಕವಾಗಿ ಸದೃಢರಾಗಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದು ಪಿಎಸ್‌ಐ ಸಿದ್ದೇಶ್ವರ ಗೆರಡೆ ಹೇಳಿದರು.
ಇಲ್ಲಿನ ಎಂಪಿಎಸ್ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ಕ್ರೀಡಾಪಟುವೂ ಗೆದ್ದನೆಂದು ಹಿಗ್ಗದೆ ಸೋತನೆಂದು ಕುಗ್ಗದೆ ಕ್ರೀಡಾ ಸ್ಫೂರ್ತಿಯಿಂದ ಆಟವಾಡಬೇಕು. ಗೆಲುವು ಸೋಲುಗಳನ್ನು ಸಮನಾಗಿ ಸ್ವೀಕರಿಸಬೇಕು. ತಾವು ಆಡುವ ಆಟದಲ್ಲಿ ಪ್ರಾಮಾಣಿಕತೆ, ಶಿಸ್ತು, ಸಮಯ, ಏಕಗ್ರತೆಗೆ ಮಹತ್ವ ನೀಡಬೇಕು. ಇವೆಲ್ಲ ಗುಣಲಕ್ಷಣಗಳಿರುವ ಕ್ರೀಡಾಪಟು ಮಾದರಿ ಆಟಗಾರನಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ಟೂರ್ನಿಯಲ್ಲಿ ಭಾಗವಹಿಸಿದ 8 ತಂಡಗಳ ಆಟಗಾರರು ರೋಚಕ ಆಟ ಪ್ರದರ್ಶಿಸಿದರು. ಕೊನೆಯಲ್ಲಿ ರನ್ನ ತಂಡವು ಪ್ರಥಮ ಬಹುಮಾನ ಪಡೆದರೆ, ಜನ್ನ ತಂಡ ದ್ವಿತೀಯ, ಪೊನ್ನ ತಂಡವು ತೃತೀಯ ಬಹುಮಾನ ಪಡೆಯಿತು.
ಸಿಆರ್‌ಪಿ ಮೌನೇಶ ಬಡಿಗೇರ, ಮುಖ್ಯಶಿಕ್ಷಕಿ ಬಸಮ್ಮ ಬಿರಾದಾರ, ಉಪನ್ಯಾಸಕ ದ್ಯಾಮಣ್ಣ ಕೊಡೇಕಲ್, ಎಚ್.ಸಿ. ಸಂಗಪ್ಪ ಮೇಗಲಮನಿ, ಶಿಕ್ಷಕರ ಸಂಘದ ಹಾಜಿಮಲ್ಲಿಂಗ್ ಬಿಜಲಿ, ಬಸವರಾಜ ಯಾದವಾಡ, ಟಿಎಲ್‌ಸಿ ಕೇಂದ್ರದ ಮುಖ್ಯಸ್ಥ ಅಮೃತ್, ಮಂಜುನಾಥ, ಶ್ರವಣಕುಮಾರ, ನಾಗನಗೌಡ, ಗುರುಮೂರ್ತಿ ಗದ್ದೆಪ್ಪ, ಶಂಕರ, ರಮೇಶ, ವಿನಯ, ಸುಭಾಷ, ಸಿದ್ದಣ್ಣ, ಅಬ್ದುಲ್ ಖಾದಿರ್ ಚೌದ್ರಿ ಇದ್ದರು. ಶಿಕ್ಷಕರಾದ ಮರಿಯಪ್ಪ ಸ್ವಾಗತಿಸಿದರು. ಭೀಮಾಶಂಕರ ನಿರೂಪಿಸಿದರು. ಗದ್ದೆಪ್ಪ ವಂದಿಸಿದರು.