Advertisement

ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರೀಡೆಯೂ ಪ್ರಮುಖ

02:18 PM Nov 15, 2021 | Team Udayavani |

ಕಲಬುರಗಿ: ಶೈಕ್ಷಣಿಕ ಚಟುವಟಿಕೆ ಹಾಗೂ ಜೀವನದಲ್ಲಿ ಕ್ರೀಡಾ ಚಟುವಟಿಕೆಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಮಹಾನಗರ ಪೊಲೀಸ್‌ ಉಪ ಆಯುಕ್ತ ಅಡೂxರು ಶ್ರೀನಿವಾಸುಲು ಹೇಳಿದರು.

Advertisement

ನಗರದ ಶರಣಬಸವ ವಿಶ್ವವಿದ್ಯಾಲಯದ ಮೈದಾನದಲ್ಲಿ ರವಿವಾರ ಆರಂಭವಾದ ನಾಲ್ಕು ದಿನಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿಗಳ ವೃತ್ತಿಪರ ಜೀವನದಲ್ಲಿ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ಸ್ಥೈರ್ಯ ನೀಡುತ್ತದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುತ್ತದೆ. ಭಾರತೀಯ ಪೊಲೀಸ್‌ ಸೇವೆಗೆ (ಐಪಿಎಸ್‌) ಆಯ್ಕೆಯಾದ ನಂತರ ಪೊಲೀಸ್‌ ಅಕಾಡೆಮಿಯಲ್ಲಿ ಕಠಿಣ ತರಬೇತಿ ಸಮಯದಲ್ಲಿ ಪ್ರಶಿಕ್ಷಣಾರ್ಥಿಗಳು ಇಂತಹ ಕಠಿಣ ಪರೀಕ್ಷೆಗಳು ಮತ್ತು ಕಾರ್ಯಗಳಿಗೆ ಏಕೆ ಒಳಗಾಗುತ್ತಾರೆ ಎಂದು ಆಶ್ಚರ್ಯವಾಯಿತು ಎಂದು ತಮ್ಮ ಸ್ವಂತ ಅನುಭವ ಉಲ್ಲೇಖೀಸಿ ಮಾತನಾಡಿದರು.

ಪೊಲೀಸ್‌ ಅಕಾಡೆಮಿಯಲ್ಲಿನ ಈ ಕಠಿಣ ತರಬೇತಿ ನಂತರ ನನ್ನ ನಿಯಮಿತ ಪೋಸ್ಟಿಂಗ್‌ನಲ್ಲಿ ತೀವ್ರ ಒತ್ತಡ ನಿಭಾಯಿಸಲು ಸಹಾಯವಾಯಿತು ಎಂದು ಹೇಳಿದರು.

ಶಾಲೆ-ಕಾಲೇಜುಗಳಲ್ಲಿನ ಕ್ರೀಡಾ ಚಟುವಟಿಕೆಗಳ ಪ್ರಮುಖ ಪ್ರಯೋಜನ ವೆಂದರೆ ವಿದ್ಯಾರ್ಥಿ ಗಳಲ್ಲಿ ನಾಯಕತ್ವದ ಗುಣಗಳನ್ನು ಮತ್ತು ಸೌಹಾರ್ದತೆ ಬೆಳೆಸಲು ಸಹಾಯವಾಗುತ್ತದೆ ಎಂದರು.

Advertisement

ವಿಶ್ವವಿದ್ಯಾಲಯದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌, ಫುಟ್ಬಾಲ್‌, ಕ್ರಿಕೆಟ್‌, ಬ್ಯಾಡ್ಮಿಂಟನ್‌, ಕಬಡ್ಡಿ, ಖೋ-ಖೋ, ವಾಲಿಬಾಲ್‌, ಬಾಸ್ಕೆಟ್‌ಬಾಲ್‌, ಟೇಬಲ್‌ ಟೆನ್ನಿಸ್‌, ಚೆಸ್‌, ಕೇರಂ ಮತ್ತು ಇತರ ಕ್ರೀಡಾಕೂಟಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರ ಮತ್ತು ಟ್ರ್ಯಾಕ್‌ ಈವೆಂಟ್‌ಗಳನ್ನು ಆಯೋಜಿಸಿದೆ.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ|ನಿರಂಜನ ವಿ.ನಿಷ್ಠಿ, ಸಮ ಕುಲಪತಿ ಪ್ರೊ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಕುಲಸಚಿವ ಡಾ| ಬಸವರಾಜ ಮಠಪತಿ, ಹಣಕಾಸು ಅಧಿಕಾರಿ ಪ್ರೊ| ಕಿರಣ ಮಾಕಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next