Advertisement

ಕ್ರೀಡೆಯಿಂದ ಆರೋಗ್ಯ ವೃದ್ಧಿ,  ಜಡತ್ವ ನಿವಾರಣೆ: ಕೃಷ್ಣ ಭಟ್‌

03:34 PM Apr 11, 2017 | Team Udayavani |

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್‌ ವತಿಯಿಂದ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೋಳುಕಟ್ಟೆಯಲ್ಲಿ ನಿರ್ಮಿಸಿದ ಫುಟ್ಬಾಲ್‌ ಗೋಲ್‌ ಪೋಸ್ಟ್‌ನ್ನು ಬದಿಯಡ್ಕ ಗ್ರಾಮಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ವಿಕಾಸಕ್ಕೆ  ಕ್ರೀಡೆಯೂ ಕಾರಣವಾಗಿದೆ. ಮನುಷ್ಯನಿಗೆ ವ್ಯಾಯಾಮ ಅತೀ ಅಗತ್ಯ. ಕ್ರೀಡೆಯಿಂದ ಆರೋಗ್ಯ ವೃದ್ಧಿ ಹಾಗೂ ಜಡತ್ವ ನಿವಾರಣೆಯಾಗುತ್ತದೆ ಎಂದರು.

Advertisement

ಗ್ರಾಮಪಂಚಾಯತ್‌ ಸದಸ್ಯೆ ಶಾಂತಾ ಬಾಬು ಅಧ್ಯಕ್ಷತೆ ವಹಿಸಿದ್ದರು. ಕ್ರೀಡೆಗಾಗಿ ಬದಿಯಡ್ಕ ಪಂಚಾಯತ್‌ ವ್ಯಾಪ್ತಿಯಲ್ಲಿ ಯುವ ಕ್ರೀಡಾಪಟುಗಳ ತರಬೇತಿಗೆ ಕೇರಳ ರಾಜ್ಯ ಯುವಜನ ಕ್ಷೇಮ ಬೋರ್ಡ್‌ನ ಬದಿಯಡ್ಕ ಪಂಚಾಯತ್‌ ಯೂತ್‌ ಸೆಂಟರಿನ ಬದಿಯಡ್ಕ ನ್ಪೋರ್ಟ್ಸ್ ಅಕಾಡೆಮಿಯ ಲಾಂಛನವನ್ನು ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್‌ ಓಝೋನ್‌ ಬಿಡುಗಡೆಗೊಳಿಸಿ ಮಾತನಾಡಿ, ಜಾತಿ ಮತ ಭೇದವಿಲ್ಲದೆ ಸ್ಪರ್ಧಾತ್ಮಕವಾಗಿ ನಡೆಯುವ ಕ್ರೀಡೆಗೆ ಪ್ರೋತ್ಸಾಹವನ್ನು ಮನಗಂಡು ಗ್ರಾಮಪಂಚಾಯತ್‌ ನೀಡಿದ ಈ ಗೋಲ್‌ ಬಾಕ್ಸ್‌ ಕ್ರೀಡಾ ವಿಕಾಸಕ್ಕೆ ನಾಂದಿಯಾಗಲಿ ಎಂದರು. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್‌ ಮಾನ್ಯ, ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ, ಹನೀಫ್‌, ಕೆ.ಕೆ.ಇಬ್ರಾಹಿಂ, ಸಕೀರ್‌ ಮೊದಲಾದವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next