ಶಹಾಬಾದ: ಕ್ರೀಡೆ ಮನುಷ್ಯನ ನಡುವೆ ಬಾಂಧವ್ಯ ಬೆಳೆಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಲಿ ಎಂದು ಬಿಜೆಪಿ ಮುಖಂಡ ವಿಠ್ಠಲ ನಾಯಕ ಹೇಳಿದರು.
ರವಿವಾರ ಭಂಕೂರ ಗ್ರಾಮ ವ್ಯಾಪ್ತಿಯ ಯುವಕರ ವತಿಯಿಂದ ನಗರದ ಜಿಇ ಕಾರ್ಖಾನೆ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯ ಉದ್ಘಾಟಿಸಿ ಅವರು ಮಾತನಾಡಿದರು. ಎರಡು ವರ್ಷದಿಂದ ಕೋವಿಡ್-19 ಕಾರಣದಿಂದ ಕ್ರೀಡೆ ಎಂಬುದೇ ಮರೆತು ಹೋಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಬಹುತೇಕ ಯುವಕರು ಮೊಬೈಲ್‌ಗೆ ಹೆಚ್ಚು ಆದ್ಯತೆ ಕೊಡುತ್ತಿರುವುದು ಆತಂಕಕಾರಿ ಸಂಗತಿ. ಅದಾಗಿಯೂ ಕೆಲ ಯುವಕರು ಇಂತಹ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಚಿತ್ತಾಪುರ ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ ಮಾತನಾಡಿ, ಇತ್ತೀಚೆಯ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಗಿಂತ ತಂತ್ರಜ್ಞಾನದೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇದು ಆರೋಗ್ಯಕ್ಕೆ ಪೂರಕವಾಗಿಲ್ಲ ಎಂದು ಹೇಳಿದರು.
ಚಿತ್ತಾಪುರ ತಾಲೂಕು ಬಿಜೆಪಿ ಉಪಾಧ್ಯಕ್ಷ ವೀರಣ್ಣ ಯಾರಿ, ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತವೆ. ಎಲ್ಲ ಕ್ರೀಡಾಪಟುಗಳು ಸ್ಪೂರ್ತಿಯಿಂದ ಆಡಬೇಕು ಎಂದರು.
ಭಂಕೂರ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಧರಿ, ಮಾಜಿ ತಾಪಂ ಸದಸ್ಯ ಗೋಪಾಲ ರಾಠೊಡ, ಬಿಜೆಪಿ ಚಿತ್ತಾಪುರ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ಪಾಟೀಲ, ಭಂಕೂರ ಶಕ್ತಿ ಕೇಂದ್ರದ ಅಧ್ಯಕ್ಷ ಯಲ್ಲಾಲಿಂಗ ಪೂಜಾರಿ, ಮುಖಂಡರಾದ ಶಿವಶಂಕರ ಕಾಶೆಟ್ಟಿ, ಗುರುರಾಜ ನಾಯಕ, ಭೀಮರಾವ್ ಸುಬೇದಾರ, ಭರತ್ ಮುತ್ತಗಾ, ಬಸವರಾ (ಬಿಎಸ್‌ಟಿ), ಮಲ್ಲಿನಾಥ ಪಾಟೀಲ ಇದ್ದರು.