Advertisement

35ಎ ವಿಧಿ ರದ್ದತಿ ವದಂತಿ: ಕಾಶ್ಮೀರದಲ್ಲಿ ವ್ಯಾಪಕ ಬಂದ್‌, ಗಲಭೆ

12:29 PM Aug 27, 2018 | Team Udayavani |

ಶ್ರೀನಗರ : ಸಂವಿಧಾನದ 35ಎ ವಿಧಿಯನ್ನು ಕಿತ್ತು ಹಾಕಲಾಗುತ್ತದೆ ಎಂಬ ವದಂತಿಯನ್ನು ಅನುಸರಿಸಿ ಕಾಶ್ಮೀರದಲ್ಲಿಂದು ವ್ಯಾಪಕ ಅಘೋಷಿತ ಬಂದ್‌ ಕಂಡು ಬಂದಿದೆ. 

Advertisement

ಉದ್ರಿಕ್ತ ಯುವಕರ ಗುಂಪು ಭದ್ರತಾ ಪಡೆಗಳೊಂದಿಗೆ ಕಾದಾಟದಲ್ಲಿ ನಿರತವಾಗಿರುವ ದೃಶ್ಯಗಳು ಕಂಡು ಬರುತ್ತಿವೆ. ಹಾಗಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಸಂವಿಧಾನದ 35ಎ ವಿಧಿಯು ಜಮ್ಮು ಕಾಶ್ಮೀರದಲ್ಲಿನ ಪೌರರಿಗೆ ವಿಶೇಷ ಹಕ್ಕು ಮತ್ತು ಸೌಕರ್ಯಗಳನ್ನು ನೀಡುತ್ತವೆ. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. 

ಜಮ್ಮು ಕಾಶ್ಮೀರದ ಬೇಸಗೆ ಕಾಲದ ರಾಜಧಾನಿಯಾಗಿರುವ ಶ್ರೀನಗರದಲ್ಲಿ ಮತ್ತು ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಬಂದ್‌ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next