Advertisement
ಪ್ರಸಕ್ತ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಶಾಲಾ ವಿಶೇಷ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಸೇರಿಸಲಾಗಿದ್ದು 1ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ದಿನ 40 ನಿಮಿಷಗಳ ತರಗತಿ ನಡೆಸಲು ಯೋಜಿಸಿದೆ. ಈ ವಿಶೇಷ ತರಗತಿಗೆ ಬೇಕಾಗುವ ನ್ಪೋಕನ್ ಇಂಗ್ಲಿಷ್ ಕೈಪಿಡಿಯನ್ನು ಸರ್ಕಾರಿ ಪ್ರಾಥಮಿಕ ಶಾಲಾ ಆಂಗ್ಲ ಭಾಷಾ ಸಂಪನ್ಮೂಲ ಶಿಕ್ಷಕರ ತಂಡ ದಿಂದ ತಯಾರಿಸಿಕೊಳ್ಳಲು ಸೂಚನೆ ನೀಡಿದೆ.
Related Articles
Advertisement
ಮೀನಾ ಕ್ಲಬ್‌ಗಳ ಮೂಲಕ ವಿದ್ಯಾರ್ಥಿಗಳ ತಂಡ ರಚಿಸಿ, ಶಾಲೆಯ ಸಂದರ್ಶನಾರ್ಥಿಗಳಿಗೆ ಶಾಲೆಯ ಕುರಿತು ಸಮಗ್ರವಾಗಿ ಆಂಗ್ಲ ಭಾಷೆಯಲ್ಲಿ ಪರಿಚಯಿಸುವುದನ್ನು ಕಲಿಸಬೇಕು. ಎಲ್‌ಕೆಜಿಯಿಂದ ನಲಿ-ಕಲಿ ತರಗತಿಗಳಿಗೆ ವಿವಿಧ ರೀತಿಯ ಚಾರ್ಟ್‌ಗಳನ್ನು ಫ್ಲೆಕ್ಸ್‌ನಲ್ಲಿ ರಚಿಸಿ ತಿಳಿವಳಿಕೆ ನೀಡಬೇಕು. ಉದಾಹರಣೆಗೆ ಮಾನವ ಶರೀರದ ಭಾಗಗಳು, ಹಣ್ಣುಗಳು, ತರಕಾರಿಗಳು, ಬಣ್ಣಗಳು, ವಾಹನಗಳು, ಇತರೆ ಚಿತ್ರ ಹಾಗೂ ಭಾಗಗಳನ್ನು ಗುರುತಿಸಿ, ಹೆಸರು ದಾಖಲಿಸದೆ ಖಾಲಿ ಬಿಟ್ಟು ಸೂಕ್ತ ಆಂಗ್ಲ, ಹಿಂದಿ ಪದಗಳನ್ನು ಆಯ್ದು ಆ ಖಾಲಿ ಜಾಗದಲ್ಲಿ ಜೋಡಿಸಲು ತಿಳಿಸುವ ಚಟುವಟಿಕೆ ನಿರ್ವಹಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಆಂಗ್ಲ ಹಾಗೂ ಹಿಂದಿ ಭಾಷಾ ಪದಗಳ ಬಳಕೆಯು ಸುಲಲಿತವಾಗುತ್ತದೆ ಎಂದು ಇಲಾಖೆ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಇಂಗ್ಲಿಷ್ ಪರಿಚಯಾತ್ಮಕ ಭಾಷೆಯಾಗಿ ಒಂದನೇ ತರಗತಿಯಿಂದಲೇ ವಿಷಯವಿದೆ. ಆದರೆ, ಸರ್ಕಾರಿ ಶಾಲಾ ಮಕ್ಕಳು ಸಹ ಕಾನ್ವೆಂಟ್ ಮಕ್ಕಳಂತೆ ಸುಲಲಿತವಾಗಿ ಇಂಗ್ಲಿಷ್ ಮಾತನಾಡುವುದನ್ನು ರೂಢಿ ಮಾಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಇದು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
- ಕಾನ್ವೆಂಟ್ ಮಕ್ಕಳಂತೆ ಸುಲಲಿತ ಇಂಗ್ಲಿಷ್ ಸಂವಹನಕ್ಕೆ ಯೋಜನೆ
- ವಾರಕ್ಕೊಂದು ತರಗತಿ ಸಂಪೂರ್ಣ ಇಂಗ್ಲಿಷ್‌ಮಯ