Advertisement

ಕಿಡಿಗೇಡಿಗಳಿಗೆ ಬಡವರ ಶಾಪ ತಟ್ಟುತ್ತದೆ : ಕೃಷ್ಣಮೂರ್ತಿ

03:04 PM Oct 19, 2020 | Suhan S |

ಮಾಗಡಿ: ಕೋವಿಡ್ ಸಂಕಷ್ಟದಲ್ಲಿರುವ 10 ಸಾವಿರ ಬಡವರಿಗೆ ನಾಡಪ್ರಭುಕೆಂಪೇಗೌಡ ಅವರ ಹೆಸರಿನಲ್ಲಿ ಅಕ್ಕಿ ವಿತರಣೆ ವೇಳೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಕ್ಕಿ ವಿತರಣೆ ತಡೆಯಲು ಯತ್ನಿಸಿದ ಪಾಪಿ ಕಿಡಿಗೇಡಿಗಳಿಗೆ ಬಡವರ ಶಾಪ ತಟ್ಟುತ್ತದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಡಾ.ಎಚ್‌.ಎಂ.ಕೃಷ್ಣಮೂರ್ತಿ ಹೆಸರೇಳದೆ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಏನೇ ಅಡೆತಡೆ ಒಡ್ಡಿದರೂ ನನ್ನ ಧರ್ಮ ಕಾರ್ಯಗಳು ನಿಲ್ಲುವುದಿಲ್ಲ, ನಾನು ಒಂಟಿ ಚಿರತೆ ಇದ್ದಂತೆ. ತುತ್ತು ಅನ್ನತಿಂದ ನಾಯಿಗೂ ನೀಯತ್ತಿರುತ್ತದೆ. ಧರ್ಮ ಕಾರ್ಯ ಮಾಡುತ್ತಿರುವ ನನಗೆ ಅಧಿಕಾರಿಗಳ ಮೂಲಕ ಏಕೆ ತೊಂದರೆ ಕೊಡುತ್ತೀರಿ. ಕಳೆದ 22 ವರ್ಷಗಳಿಂದ ಕೆಂಪೇಗೌಡ ಹೆಸರಿನಲ್ಲಿ ಅನ್ನದಾನ ಮಾಡಿಕೊಂಡು ಬಂದಿದ್ದೇನೆ. ನೇರವಾಗಿ ಎದುರಿಸಲಾಗದ ರಣಹೇಡಿಗಳು ಅಧಿಕಾರಿಗಳನ್ನು ಛೂ ಬಿಡುವ ಅವಿವೇಕಿಗಳಿಗೆ ದೇವರೇ ಅಂತ್ಯಕಾಣಿಸುತ್ತಾರೆಂದರು.

ಧರ್ಮ ಕಾರ್ಯಕ್ಕೆ ಬಂದಿರುವೆ:ತಾನು ಎಲ್ಲಾ ರಂಗವನ್ನು ಅನುಭವಿಸಿದ್ದೇನೆ. ಮಾಗಡಿಗೆ ರಾಜಕೀಯ ಮಾಡಲು ಬಂದವನಲ್ಲ, ಕೆಂಪೇಗೌಡ ಹೆಸರಿನಲ್ಲಿ ಧರ್ಮಕಾರ್ಯ ಮಾಡ ಲುಬಂದವನು. ಅಕ್ಕಿ ವಿತರಣೆ ದಿನದಂದು ಪಾಸಿಟಿವ್‌ ಬಂದಿದ್ದರಿಂದ ಚಿಕಿತ್ಸೆ ಪಡೆದೆ. ಈಗ ಗುಣಮುಖನಾಗಿದ್ದೇನೆ. ಉಚಿತ ಅಕ್ಕಿಯಿಂದ ವಂಚಿತರಾಗಿರುವ ಬಡವರ ಮನೆಗೆ ನಮ್ಮ ಮುಖಂಡರಿಂದ ಸಿಹಿಯೊಂದಿಗೆ ಅಕ್ಕಿ ವಿತರಣೆ ಕಳಿಸಿಕೊಡುತ್ತೇನೆ ಎಂದರು.

ವಕೀಲರಾದ ವೆಂಕಟಲಕ್ಷ್ಮೀ ಮಾತನಾಡಿ, ಮುಂದೆ ಅಡ್ಡಿಪಡಿಸಿದರೆ ಅಧರ್ಮಗಳಾದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಕೆಂಪೇಗೌಡರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆಂದರು. ಹಿರಿಯರಾದ ಜ್ಯೋತಿಪಾಳ್ಯದ ಶ್ರೀನಿ ವಾಸಯ್ಯ ಮಾತನಾಡಿ, ಮಾಗಡಿಯಲ್ಲಿ ರಾಜಕೀಯ ಮಾಡುವವರು ಎಂದಾದರೂ ಪುಣ್ಯದ ಕೆಲಸ ಮಾಡಿದ್ದರೆ ಇಂಥ ಬಡವರಿಗೆ ನೀಡುವ ಅಕ್ಕಿ ವಿತರಣೆ ತಡೆಯುವ ಪಾಪದ ಕೆಲಸಕ್ಕೆ ಕೈಹಾಕು ತ್ತಿರಲಿಲ್ಲ ಎಂದರು. ಮುಖಂಡರಾದ ದೊಡ್ಡಿ ಗೋಪಿ, ಹೇಮಂತ್‌, ಕುಮಾರ್‌, ಗಂಗಾಧರ್‌,ಹೊಸಪಾಳ್ಯದ ಕಾಳೇಗೌಡ, ಬುಡಾನ್‌ಸಾಬ್‌, ಆನಂದ್‌, ನಾಗರಾಜು, ಶಿವಕುಮಾರ್‌, ಮೋಹನ್‌ ರಾಜು, ವಿಶ್ವ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next