ಪಣಜಿ: ಗೋವಾ ರಾಜ್ಯವು ಕೇವಲ ಸೂರ್ಯ, ಉಸುಕು ಮತ್ತು ಸಮುದ್ರದ ಸ್ಥಾನವಲ್ಲ. ಗೋವಾ ರಾಜ್ಯವನ್ನು ಆಧ್ಯಾತ್ಮಿಕ ಪ್ರವಾಸೋದ್ಯಮ ಸ್ಥಾನವನ್ನಾಗಿಯೂ ಗುರುತಿಸಲಾಗುತ್ತದೆ. ಗೋವಾದಲ್ಲಿ ಪ್ರಾಚೀನ ದೇವಸ್ಥಾನಗಳು, ಚರ್ಚ್ ಗಳಿವೆ. ಆಧ್ಯಾತ್ಮಿಕ ಪ್ರವಾಸೋದ್ಯಮವು ಕೂಡ ಪ್ರಮುಖ ಒಂದು ಭಾಗವಾಗಿದ್ದು ಇದರ ಅಭಿವೃದ್ಧಿಯಾಗಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿಪ್ರಾಯಪಟ್ಟರು.
ಗೋವಾದ ದೋನಾಪಾವುಲ್‍ನ ಇಂಟರ್ ನ್ಯಾಶನಲ್ ಸೆಂಟರ್ ನಲ್ಲಿ ಆಯೋಜಿಸಿದ್ದ “ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳ”ದ ಬೈಠಕ್‍ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಮಾತನಾಡಿ- ಕರ್ನಾಟಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರೂಜಿ ರವರ 108 ಅಡಿ ಎತ್ತರದ ಮೂರ್ತಿ ಸ್ಥಾಪಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರುತ್ತೇನೆ ಎಂಬ ಭರವಸೆ ನೀಡಿದರು.
ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆಯಲು ಜನರ ನಿರಾಸಕ್ತಿ; 3ನೇ ಕೋವಿಡ್ ಅಲೆ ಎದುರಿಸಲು ಹಿನ್ನಡೆ: ಸೀರಮ್
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಮಂತ್ರಿ ಕೋಟಾ ಶ್ರೀನಿವಾಸ್ ಪೂಜಾರಿ, ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮಿಜಿ, ಮಾಜಿ ಸಚಿವ ಮತ್ತು ಆರ್ಯ ಈಡಿಗ ಸಮಾಜದ ನಾಯಕ ಮಾಲಿಕಯ್ಯ ಗುತ್ತೇದಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.