ಮಲ್ಪೆ: ದೇವರ ಮೇಲೆಅನವರತ ಭಕ್ತಿ, ವ್ರತ, ಜಪ-ತಪದೊಂದಿಗೆ ಆಧ್ಯಾತ್ಮಿಕವಾಗಿ ನಮ್ಮನ್ನು ನಿರಂತರ ತೊಡಗಿಸಿಕೊಂಡಾಗ ಮಾತ್ರ ಮಾನಸಿಕಶಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಶ್ರೀ ಸಂಸ್ಥಾನ ಗೌಡಪಾದಾ ಚಾರ್ಯ ಶ್ರೀ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತೀ ಮಹಾರಾಜ್ ಅವರು ನುಡಿದರು.
ಅವರು ರವಿವಾರ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಹೇವಿಳಂಬಿ ನಾಮ ಸಂವತ್ಸರದ ಗುರುಪೂರ್ಣಿಮೆಯಂದು ತಮ್ಮ ಪ್ರಥಮ ಚಾತುರ್ಮಾಸ್ಯ ವ್ರತ ಆರಂಭದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಾವು ನಮ್ಮ ಜೀವನದಲ್ಲಿ ನಿರಂತರ ದೇವತಾ ಆರಾಧನೆ ಮಾಡ ಬೇಕು ಜತೆಗೆ ಗುರುಹಿರಿಯರ ಸೇವೆಯ ಮೂಲಕ ಅವರ ಪ್ರೀತಿಗೆ ಪಾತ್ರರಾಗಬೇಕು ಎಂದರು. ಚಾತುರ್ಮಾಸ್ಯ ವ್ರತಾಚರಣೆಗೆ ಅವಕಾಶ ನೀಡಿದ್ದರಿಂದ ಎಲ್ಲರೂ ಋಣಮುಕ್ತ ರಾದಂತೆ. ಮುಂದಿನ ದಿನಗಳಲ್ಲೂ ಇಲ್ಲಿ ನಿರಂತರ ದೇವತಾ ಕಾರ್ಯಗಳು ನಡೆಯುವಂತಾಗಲಿ ಎಂದು ಹರಸಿದರು.
ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ. ಅನಂತ ಪದ್ಮನಾಭ ಆರ್. ಕಿಣಿ, ಚಾತುರ್ಮಾಸ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಕೆ. ಸುಬ್ಬಣ್ಣ ಪೈ ಕಲ್ಯಾಣಪುರ, ಕೋಶಾಧಿಕಾರಿ ಎ. ಯಶವಂತ ನಾಯಕ್, ಸಲಹೆಗಾರರಾದ ಟಿ. ದೇವದಾಸ್‌ಪೈ, ಎನ್. ಮಂಜುನಾಥ ಪಿ. ನಾಯಕ್ ಉಡುಪಿ, ಉಪಾಧ್ಯಕ್ಷರಾದ ಡಾ| ಅಮ್ಮುಂಜೆ ಅರವಿಂದ ನಾಯಕ್, ಡಾ| ವಿ.ಎಲ್. ನಾಯಕ್ ಮಣಿಪಾಲ, ಕೆ. ಅರವಿಂದ ಬಾಳಿಗಾ, ಹೊರೆಕಾಣಿಕೆ ಸಮಿತಿಯ ಕಾರ್ಯದರ್ಶಿ ಟಿ. ಅಜಿತ್ ಪೈ ಉಪಸ್ಥಿತರಿದ್ದರು.ಕೆ. ಸೀತಾರಾಂ ಭಟ್ ಕಲ್ಯಾಣಪುರ ಪ್ರಸ್ತಾವನೆಗೈದರು. ಜಯದೇವ್ ಭಟ್ ಸ್ವಾಗತಿಸಿ, ವಂದಿಸಿದರು.