ಬೆಂಗಳೂರು: ಪ್ರಖ್ಯಾತ ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕ, ಶಿಕ್ಷಣ ತಜ್ಞ ಹಾಗೂ ಸತ್ಸಂಗದ ಸ್ಥಾಪಕ ಶ್ರೀ ಎಮ್ ಮಂಗಳವಾರದಂದು ಬೆಂಗಳೂರಿನ ಲ್ಯಾಂಡ್ ಮಾರ್ಕ್ ಬುಕ್ ಸ್ಟೋರ್ ನಲ್ಲಿ ತಮ್ಮ ನೂತನ ಪುಸ್ತಕ
ಶೂನ್ಯ ಎ ನಾವೆಲ್ ಅನ್ನು ಬಿಡುಗಡೆ ಮಾಡಿದರು. ಬಿಡಗಡೆಯ ಬಳಿಕ ತತ್ವಜ್ಞಾನದ ಕುರಿತಾದಂತೆ ಶ್ರೀ ಎಮ್. ಮಾತನಾಡಿದರು. ಈ ವೇಳೆ ಪ್ಯಾನಲ್ ನಲ್ಲಿ
ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಚೇರ್ ಮ್ಯಾನ್ ಮೋಹನದಾಸ್ ಪೈ, ಐಬಿಎಮ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಶಂಕರ್ ಅಣ್ಣಸ್ವಾಮಿ, ಹಾಲಿಡೇ ಐಕ್ಯೂ ಸ್ಥಾಪಕ ಹರಿ ನಾಯರ್ ಉಪಸ್ಥಿತರಿದ್ದರು.
ಮನುಷ್ಯನ ಮನಸ್ಸಿನ ಸೌಂದರ್ಯ ಮತ್ತು ಶಕ್ತಿಯನ್ನು ಅನುಭವಿಸುವ ಕುರಿತು ಮಾತನಾಡಿದ
ಶ್ರೀ ಎಮ್.,
ನಾವು ಯಾವುದೇ ವ್ಯಕ್ತಿಗಳನ್ನು ಅವರ ಹೊರನೋಟದಿಂದ ಅಳೆಯಬಾರದು. ನಾನು ರಚಿಸಿದ ಶೂನ್ಯ ಪುಸ್ತಕವು, ಕಲ್ಪನೆಯ ನಿಯಮಗಳನ್ನು ಉಲ್ಲಂಘಿಸುವ ಮತ್ತು ಉತ್ತಮ ವ್ಯಕ್ತಿತ್ವನ್ನು ಬೆಳೆಸುವ ಬೀಜ ಬಿತ್ತನೆಯ ಕ್ರಮಗಳನ್ನು ಬೋಧಿಸುತ್ತದೆ ಎಂದರು.
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ
ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಚೇರ್ ಮ್ಯಾನ್ ಮೋಹನದಾಸ್ ಪೈ,
ಶೂನ್ಯ ಸಾಮಿಯ ಜೀವನದ ಕುರಿತಾದಂತೆ ಅರ್ಥೈಸಿಕೊಳ್ಳಲು ನಾವು ಶೂನ್ಯ ಕಾದಂಬರಿಯ ಹಲವು ಆವೃತ್ತಿಗಳನ್ನು ನಿರೀಕ್ಷಿಸಬೇಕಾಗಿದೆ ಎಂದರು.
ಶೂನ್ಯವು ಶ್ರೀ ಎಂ.ರವರು ಬರೆದ ಪ್ರಥಮ ಕಾದಂಬರಿಯಾಗಿದೆ. ಈಗಾಗಲೇ ಶ್ರೀ ಎಮ್ ರವರು ತತ್ವಶಾಸ್ತ್ರ, ಯೋಗ ಹಾಗೂ ಭಾರತೀಯ ಪುರಾಣಗಳ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಈ ಪುಸ್ತಕವು ಶೂನ್ಯ ಸಾಮಿ ಎಂಬ ವ್ಯಕ್ತಿಯ ಸಾಹಸಮಯ ಜೀವನದ ಕುರಿತು ಬೆಳಕು ಚೆಲ್ಲುತ್ತದೆ. ಶೂನ್ಯ ಅಂದರೆ ತನ್ನನ್ನು ತಾನೇ ಸೊನ್ನೆ (ಶೂನ್ಯ) ಎಂದು ಕರೆಸಿಕೊಳ್ಳುವ ಶೂನ್ಯ ಸಾಮಿ ಶರಬು ಅಂಗಡಿಯ ಪಕ್ಕದಲ್ಲೇ ಇರುವ ಸಣ್ಣ ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿ. ಈತ ಅಲ್ಲೇ ಚಹಾ ಹೀರುತ್ತಾ, ತಬ್ಬಿಕೊಳ್ಳುತ್ತಾ, ಮುತ್ತಿಡುತ್ತಾ, ಶಾಪಗಳನ್ನು ಹಾಕಿಸಿಕೊಂಡು, ಒದೆ ತಿನ್ನುತ್ತಾ ಒಂದರ್ಥದಲ್ಲಿ ಸಂಪೂರ್ಣ ಸ್ವತಂತ್ರವಾಗಿ ಬದುಕುವ ವ್ಯಕ್ತಿ.
ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ
ಐಬಿಎಮ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಶಂಕರ್ ಅಣ್ಣಸ್ವಾಮಿ, ನನಗೆ ಈ ಪುಸ್ತಕದೊಂದಿಗೆ ಸಂಬಂಧ ಸಾಧಿಸಲು ಸಾಧ್ಯವಾಯಿತು. ಏಕೆಂದರೆ ಆ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರದೇಶಗಳಲ್ಲೇ ನಾನು ಬೆಳೆದಿದ್ದು ಎಂದು ಹೇಳಿದರು. ಬಳಿಕ ಈ ಕುರಿತು ಮಾತನಾಡಿದ
ಹಾಲಿಡೇ ಐಕ್ಯೂ ಸ್ಥಾಪಕ ಹರಿ ನಾಯರ್,
ಶ್ರೀ ಎಮ್. ಓರ್ವ ಪ್ರಭಾವಿ ಬರಹಗಾರನೆನ್ನುವುದು ಅವರ ಪುಸ್ತಕಗಳನ್ನು ಓದಿದಾಗಲೇ ತಿಳಿಯಲು ಸಾಧ್ಯ ಎಂದು ಹೇಳಿದರು.
ಶೂನ್ಯ ಕಾದಂಬರಿಯು ಈಗಾಗಲೇ ಆನ್ ಲಯನ್ ಹಾಗೂ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
ಲೇಖಕ ಶ್ರೀ ಎಮ್ ಕುರಿತು:
ಮುಮ್ತಾಝ್ ಅಲಿ ಹೆಸರಿನಲ್ಲಿ ಕೇರಳದ ತಿರುವನಂತಪುರಂನಲ್ಲಿ ಹುಟ್ಟಿದ ಶ್ರೀ ಎಮ್, ಓರ್ವ ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕ ಹಾಗೂ ಶಿಕ್ಷಣ ತಜ್ಞರಾಗಿದ್ದಾರೆ. ಇವರು ಸತ್ಸಂಗ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಈಗಾಗಲೇ ಶ್ರೀ ಎಮ್ ರವರು ತತ್ವಶಾಸ್ತ್ರ, ಯೋಗ ಹಾಗೂ ಭಾರತೀಯ ಪುರಾಣಗಳ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ಇವರು ಭಾರತೀಯ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಮಾತ್ರವಲ್ಲದೇ, ಲಂಡನ್ ಹೌಸ್ ನಲ್ಲೂ ಪ್ರವಚನ ನೀಡಿದ್ದರು. 2011ರಲ್ಲಿ ಇವರು ಬರೆದ ಎ ಆಟೋಬಯೋಗ್ರಫಿ ಆಫ್ ಯೋಗಿ ಪುಸ್ತಕವು ವಿಶ್ವದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದವು.