ಲಂಡನ್: ಅಫ್ಘಾನಿಸ್ಥಾನದ ಖ್ಯಾತ ಸ್ಪಿನ್ನರ್ ರಶೀದ್ ಖಾನ್ ಅವರು ಇಂಗ್ಲೆಂಡಿನಲ್ಲಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಶೀಘ್ರ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಶಸ್ತ್ರಚಿಕಿತ್ಸೆಯಿಂದಾಗಿ ಅವರು ಡಿ. 7ರಿಂದ ಆರಂಭವಾಗುವ ಬಿಗ್ ಬಾಶ್ ಲೀಗ್‌ನಲ್ಲಿ ಆಡುವುದಿಲ್ಲ. ಅವರು ಬೆನ್ನ ಕೆಳಗಿನ ಭಾಗದ ಸಮಸ್ಯೆಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
”ನಿಮ್ಮ ಶುಭ ಹಾರೈಕೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳು. ಶಸ್ತ್ರಚಿಕಿತ್ಸೆ ಚೆನ್ನಾಗಿ ನಡೆದಿದೆ, ಈಗ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದೇನೆ
ಮೈದಾನಕ್ಕೆ ಮರಳಲು ಕಾಯಲು ಸಾಧ್ಯವಿಲ್ಲ” ಎಂದು ರಶೀದ್ ಖಾನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.